ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ಗೊರವಪ್ಪ "ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಹಾವೇರಿ (ಅ.11): ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ಗೊರವಪ್ಪ "ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ. ಮಳೆ, ಬೆಳೆ, ರಾಜಕೀಯ, ಅನಾಹುತಗಳ ಬಗ್ಗೆ ಗೊರವಪ್ಪ, ಕಾರ್ಣಿಕ ನುಡಿಯುವ ಭವಿಷ್ಯವಾಣಿಯನ್ನು ನಿಜವಾಗುತ್ತದೆ ಎಂಬ ನಂಬಿಕೆಯಿದೆ. ಕಾರ್ಣಿಕೋತ್ಸವಕ್ಕೂ ಮುನ್ನ 9 ದಿನ ಉಪವಾಸವಿದ್ದ ಗೊರವಯ್ಯ ಇಂದು 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಗ್ಗೆ ಕೋಡಿಶ್ರೀ ನುಡಿದ ಭವಿಷ್ಯವಾಣಿ ನಿಜವಾಯ್ತು!
ಒಳ್ಳೆ ಮಳೆ, ರೈತರಿಗೆ ಒಳ್ಳೆ ಬೆಳೆ: ಸಂತೋಷ್ ಭಟ್ ಗುರೂಜಿ
ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಮಾಧ್ಯಮ ಗೊರವಯ್ಯನ ಕಾರ್ಣಿಕ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುದ್ದಾತಲೇ ಪರಾಕ್ ಅಂತ ಕಾರ್ಣೀಕ ಆಗಿದೆ. ಗೊರವಯ್ಯನವರು 9 ದಿನ ಉಪವಾಸ ಇದ್ದು ಬಿಲ್ಲನ್ನೇರಿ ಕಾರ್ಣೀಕ ನುಡೀತಾರೆ. 'ಆಕಾಶದತ್ತ ಚಿಗುರಿತಲೆ' ಎಂದರೆ ಒಳ್ಳೆ ಮಳೆ ಆಗುತ್ತೆ, 'ಬೇರೆಲ್ಲ ಮುದ್ದಾಯಿತಲೇ' ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ ಅದನ್ನು ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ ಅಂತಾ ವಿಶ್ಲೇಷಣೆ ಮಾಡಬಹುದು.
ಈ ನಾಲ್ಕು ರಾಶಿಯವ್ರು ಜ್ಯೋತಿಷಿ ಕೇಳದೆ ಕಪ್ಪು ದಾರ ಕಟ್ಟಲೇಬೇಡಿ, ತೊಂದರೆ ಎದುರಾಗಬಹುದು!
ರಾಜಕೀಯವಾಗಿ ಹೇಳುವುದಾದರೆ ಆಕಾಶದತ್ತ ಚಿಗುರಿತಲೇ ಎಂದರೆ, ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ, ಬೇರೆಲ್ಲಾ ಮುದ್ದಾಯಿತಲೇ ಎಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ ಹೇಳಬಹುದು. ಅಂದರೆ ಆಕಾಶದತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ಳುತ್ತವೆ.. ಹೀಗೆ ರಾಜಕೀಯವಾಗಿ ವಿಶ್ಲೇಷಣೆ ಮಾಡಬಹುದು ಎಂದರು.