ದುರ್ಭಾಗ್ಯ ದೂರವಾಗಿ ಸೌಭಾಗ್ಯ ನಿಮ್ಮದಾಗಬೇಕೇ... ಇವಿಷ್ಟು ಮಾಡಿ..

By Web Desk  |  First Published Jun 18, 2019, 8:36 AM IST

ಗಾಳಿಯ ಶಕ್ತಿಯಿಂದ ಶಬ್ದ ಮಾಡುವ ವಿಂಡ್ ಚೈಮ್ ಆನೆಯಲ್ಲಿ ಎನರ್ಜಿ ಆವರಿಸುವಂತೆ ಮಾಡುತ್ತದೆ. ಇದರಿಂದ ಮನೆಯಲ್ಲಿ ವಾಸಿಸುವ ಜನರಿಗೆ ಸೌಭಾಗ್ಯ ಸಿಗುತ್ತದೆ. ಆದರೆ ಇದರಲ್ಲಿ ಎಷ್ಟು ಗಂಟೆಗಳಿವೆ ಮತ್ತು ಅದು ಯಾವುದರಿಂದ ಮಾಡಲಾಗಿದೆ ಎಂಬುವುದು ಮುಖ್ಯ. 
 


ಉತ್ತಮ ಭಾಗ್ಯ ಮತ್ತು ಕೆಟ್ಟ ಭಾಗ್ಯವನ್ನು ಈ ಗಾಳಿ ಗಂಟೆ ನಿರ್ಧರಿಸುತ್ತದೆ. ಒಂದು ವೇಳೆ ನೀವು ಆಯ್ಕೆ ಮಾಡಿಕೊಂಡ ವಿಂಡ್ ಚೈಮ್ ಸರಿಯಾಗಿರದಿದ್ದರೆ, ಅದರಿಂದ ಮನೆ ಮತ್ತು ಮಂದಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ವಿಂಡ್ ಚೈಮ್ ಆಯ್ಕೆ ಮಾಡುವುದು ಹೇಗೆ? 

- ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ವಿಂಡ್ ಚೈಮ್ ದ್ವನಿ ಇಷ್ಟವಾಗಬೇಕು. 

Tap to resize

Latest Videos

undefined

ಪಾಸಿಟವ್ ಶಕ್ತಿ ಹೆಚ್ಚಿಸೋ ಉಡುಗೊರೆಗಳಿವು...

-ಶಬ್ದ ಹೆಚ್ಚಿರುವ ಮೆಟಲ್ ವಿಂಡ್ ಚೈಮ್  ಖರೀದಿಸಿ. ಇದರಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ. 

- ವಿಂಡ್ ಚೈಮನ್ನು ದಿಕ್ಕಿಗೆ ಸರಿಯಾಗಿಡಬೇಕು. ಪೂರ್ವ ಮತ್ತು ಆಗ್ನೇಯ ದಿಕ್ಕು ವೃಕ್ಷಯಕ್ಕೆ ಸಂಬಂಧಿಸಿದ್ದು. ಇದರಿಂದ ಈ ಜಾಗದಲ್ಲಿ ಮರದಿಂದ ಮಾಡಿದ ವಿಂಡ್ ಚೈಮ್ ಇಟ್ಟರೆ ಉತ್ತಮ. 

ಎಲ್ಲೆಲ್ಲಿ ಇಡಬೇಕು ? 

- ಕೇವಲ ಅಲಂಕಾರಕ್ಕಾಗಿ ವಿಂಡ್ ಚೈಮ್ ಇಡೋದಾದರೆ ಎಲ್ಲಿ ಗಾಳಿ ಬರುತ್ತದೆ ಅಲ್ಲಿ ನೇತು ಹಾಕಿದರೆ ಉತ್ತಮ. 

ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು

- ಮನೆಯ ಉತ್ತರ, ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಮೆಟಲ್ ವಿಂಡ್ ಚೈಮ್ ಇಟ್ಟರೆ ಪಾಸಿಟಿವ್ ಎನರ್ಜಿ ಮನೆಯನ್ನು ಆವರಿಸುತ್ತದೆ.

- ಆರು ಗಂಟೆಗಳನ್ನು ಹೊಂದಿರುವ ವಿಂಡ್ ಚೈಮ್ ಡ್ರಾಯಿಂಗ್ ರೂಮಿನಲ್ಲಿಡಿ. ಅದನ್ನು ರೂಮಿನ ವಾಯುವ್ಯ ದಿಕ್ಕಿನಲ್ಲಿಡಿ. ಇದರಿಂದ ಸೌಭಾಗ್ಯ ವೃದ್ಧಿಯಾಗುತ್ತದೆ. 

- 7 ಗಂಟೆಯುಳ್ಳ ವಿಂಡ್ ಚೈಮನ್ನು ಪಶ್ಚಿಮ ದಿಕ್ಕಿನಲ್ಲಿಡಿ. 

- ಲಿವಿಂಗ್ ರೂಮಿನ ನೈಋತ್ಯ ದಿಕ್ಕಿನಲ್ಲಿ ಕ್ರಿಸ್ಟಲ್ ಅಥವಾ ಸಿರಾಮಿಕ್‌ನಿಂದ ಮಾಡಿದ 2 ಅಥವಾ 9 ಗಂಟೆಯುಳ್ಳ ವಿಂಡ್ ಚೈಮ್ ಇಡಿ. 

- ಮನೆಯ ಪಶ್ಚಿಮ ಭಾಗದ ಹಾಲಿನಲ್ಲಿ ಮೆಟಲ್ ವಿಂಡ್ ಚೈಮ್ ಇಡಿ. ಇದರಿಂದ ಪರಿವಾರದಲ್ಲಿ ಶಾಂತಿ ನೆಲೆಸುತ್ತದೆ. 

ತಲೆ ಬುಡದಲ್ಲಿ ಇದನ್ನೆಲ್ಲ ಇಟ್ಕೊಂಡ್ರೆ ಕಾಡುತ್ತೆ ಮನೋರೋಗ!

click me!