ನಿಮ್ಮ ಮದ್ವೆ ಡೇಟ್ಸ್​ ಹೇಳತ್ತೆ ಸಂಸಾರದ ಗುಟ್ಟು! ಯಾವ ದಿನ ಮದ್ವೆಯಾದ್ರೆ ಸಂಖ್ಯಾಶಾಸ್ತ್ರದಲ್ಲಿ ಏನೇನಿದೆ?

By Suchethana D  |  First Published Aug 21, 2024, 10:59 PM IST

ಸಂಸಾರ ಸುಖವಾಗಿ ಇರಬೇಕು ಎಂದರೆ ಯಾವ ದಿನದಂದು ಮದುವೆಯಾಗಬೇಕು? ನೀವು ವಿವಾಹಿತರಾಗಿದ್ದರೆ ನಿಮ್ಮ ದಿನಾಂಕ ಯಾವುದು? ಇಲ್ಲಿದೆ ಡಿಟೇಲ್ಸ್​...
 


ಮದುವೆಗೆ ಹಿಂದೂ ಸಂಪ್ರದಾಯದಲ್ಲಿ ಅದರದ್ದೇ ಆದ ಪ್ರಾಶಸ್ತ್ಯವಿದೆ. ಇದು ಎರಡು ಜೀವಗಳು ಮಾತ್ರವಲ್ಲದೇ ಎರಡು ಕುಟುಂಬಗಳನ್ನು ಬೆಸೆಯುವ ಬೆಸುಗೆ ಎಂದೇ ಹೇಳಲಾಗುತ್ತದೆ. ಇದೇ ಕಾರಣಕ್ಕೆ ಮದುವೆಯ ಸಂದರ್ಭದಲ್ಲಿ ಜಾತಕ, ಯೋಗ, ಸಂಖ್ಯಾಬಲ, ಗುಣ, ಕುಲ-ಗೋತ್ರ ಎಲ್ಲವನ್ನೂ ನೋಡಿ ಮದುವೆ ಮಾಡಲಾಗುತ್ತದೆ. ಇತ್ತೀಚಿಗೆ ಈ ಸಂಪ್ರದಾಯಗಳು ಕ್ರಮೇಣ ಕಡಿಮೆಯಾಗಿ ಪ್ರೇಮ ವಿವಾಹವೇ ಹೆಚ್ಚಾಗಿದ್ದರೂ ಈ ಶಾಸ್ತ್ರಗಳನ್ನು ಅನುಸರಿಸುವವರು ಇದ್ದಾರೆ. ಮದುವೆ ಮಾಡುವ ಸಮಯದಲ್ಲಿ  ಮುಹೂರ್ತಕ್ಕೂ ಪ್ರಾಧಾನ್ಯತೆ ಇದೆ. ಇದರ ಹೊರತಾಗಿಯೂ ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಮದುವೆಯ ದಿನ ನಿಮ್ಮ ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. 

ಹಾಗಿದ್ದರೆ ಇದನ್ನು ಹೇಗೆ ಲೆಕ್ಕ ಹಾಕುವುದು? ಒಂದು ವೇಳೆ ನೀವು ಆಗಸ್ಟ್​ 21, 2024ರಂದು ಮದುವೆಯಾಗಿದ್ದೀರಿ ಎಂದುಕೊಳ್ಳೋಣ. ಆಗ ಲೆಕ್ಕ ಹಾಕುವುದು ಹೀಗೆ: 21 ಎಂದರೆ 2+1=3; ಆಗಸ್ಟ್ ತಿಂಗಳು 8 ಸೂಚಿಸುತ್ತದೆ. ಇನ್ನು 2024 ಎಂದರೆ 2+0+2+4=8. ಅಂದರೆ ಒಂದು ವೇಳೆ ನೀವು ಈ ದಿನಾಂಕದಂದು ಮದುವೆಯಾಗಿದ್ದರೆ ನೀವು ಮದುವೆಯಾದ ದಿನ 3+8+8=19 ಆಗುತ್ತದೆ. 19 ಎಂದರೆ 1+9=10. ಅಂದರೆ ನಿಮ್ಮ ಮದುವೆಯ ಸಂಖ್ಯೆ 1 ಎಂದಾಗುತ್ತದೆ. ಅದರ ಅನ್ವಯ ಲೆಕ್ಕ ಹಾಕಿದ್ರೆ ಯಾವ ದಿನ ಬೆಸ್ಟ್​ ಎಂಬುದನ್ನು ಇಲ್ಲಿ ನೀಡಲಾಗಿದೆ. ​

Tap to resize

Latest Videos

undefined

ನಿಮ್ಮ ಗಾಡಿಯಲ್ಲಿ ಈ ನಂಬರ್ಸ್​ ಇವೆಯಾ? ಹುಟ್ಟಿದ ದಿನಾಂಕಕ್ಕೆ ಸರಿಯಾಗಿ ಹೀಗಿದ್ದರೆ ಲಕ್ ನಿಮ್ಮದೇ ಬಿಡಿ!

ಸಂಖ್ಯೆ 1: ಮದುವೆಯ ದಿನಾಂಕ 1 ಆಗಿದ್ದರೆ ಅದು ಸಂಖ್ಯಾಶಾಸ್ತ್ರದ ಪ್ರಕಾರ ಶಕ್ತಿಯುತವಾದ ಹೊಸ ಆರಂಭ ಸೂಚಿಸುತ್ತದೆ.  

ಸಂಖ್ಯೆ 2: ಮದುವೆಯ ದಿನಾಂಕ 2 ಆಗಿದ್ದರೆ ಅದು ಪಾಲುದಾರಿಕೆ ಮತ್ತು ಸಹಾನುಭೂತಿ ಸೂಚಿಸುತ್ತದೆ. ಇದು ಉತ್ತಮ ಸಂಖ್ಯೆಯಾಗಿದೆ.

ಸಂಖ್ಯೆ 3: ಮದುವೆಯ ದಿನಾಂಕ ಸಂಖ್ಯಾಶಾಸ್ತ್ರದ ಪ್ರಕಾರ 3 ಆಗಿದ್ದರೆ, ಇದೊಂದು  ಸೃಜನಶೀಲ ಮತ್ತು ಮೋಜಿನ ಸಂಖ್ಯೆಯಾಗಿದೆ.  ನೀವು ಈ ಪ್ರಭಾವದ ಅಡಿಯಲ್ಲಿ ಮದುವೆಯಾಗಿದ್ದರೆ ನಿಮ್ಮ ಮದುವೆಯು ಕಲಾತ್ಮಕ ಅಭಿವ್ಯಕ್ತಿಯನ್ನು ಒಳಗೊಂಡಿರುತ್ತದೆ ಹಾಗೂ  ಮದುವೆಯು ತುಂಬಾ ಸೃಜನಾತ್ಮಕವಾಗಿರಲಿದೆ.  

ಸಂಖ್ಯೆ 4: ನಂಬರ್​ 4 ಬದ್ಧತೆ, ಬಲವಾದ ಅಡಿಪಾಯ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಮದುವೆಯ ದಿನಾಂಕಕ್ಕೆ ಪ್ರಯೋಜನಕಾರಿ ಶಕ್ತಿಯಾಗಿದೆ. ಏಕೆಂದರೆ ಇದು ಬಲವಾದ ಅಡಿಪಾಯವನ್ನು ಹೊಂದಲು ಸಹಕಾರಿಯಾಗಿದೆ.  

ಸಂಖ್ಯೆ 5: ಈ ಸಂಖ್ಯೆಯು ಉತ್ಸಾಹ ಮತ್ತು ಸಾಹಸಕ್ಕೆ ಸಂಬಂಧಿಸಿದೆ. ಆದರೆ ಮದುವೆಯ ವಿಷಯಕ್ಕೆ ಬಂದರೆ ಈ ಸಂಖ್ಯೆ  ಸ್ವಲ್ಪ ಅಸ್ಥಿರ ಎಂದು ಸೂಚಿಸುತ್ತದೆ.  ಆದ್ದರಿಂದ ನಂಬರ್​ 5 ಮದುವೆಗೆ ಅಷ್ಟೊಂದು ಸೂಕ್ತ ಅಲ್ಲ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗಿದೆ. 

ಸಂಖ್ಯೆ 6: ಮದುವೆಯ ದಿನಾಂಕ ಸಂಖ್ಯಾಶಾಸ್ತ್ರದ ಪ್ರಕಾರ 6 ಆಗಿದ್ದಲ್ಲಿ, ಇದುದ ನಿಜವಾದ ಪ್ರೀತಿ, ಮನೆ, ಕುಟುಂಬ ಮತ್ತು ಮಕ್ಕಳನ್ನು ಪ್ರತಿನಿಧಿಸುತ್ತದೆ. ಸಂಖ್ಯೆ 6,  ಶಕ್ತಿಯ ಸರ್ವೋತ್ಕೃಷ್ಟವಾಗಿದೆ ಮತ್ತು ಪ್ರೀತಿಯಿಂದ ಮಾಡಲ್ಪಟ್ಟಿದೆ. ಇದು ನಿಮ್ಮ ವಿಶೇಷ ದಿನಕ್ಕೆ ಬಹಳ ಪ್ರಯೋಜನಕಾರಿ ಶಕ್ತಿಯಾಗಿದೆ. 

ಸಂಖ್ಯೆ 7: ಸಂಖ್ಯೆ 7 ಆಳವಾದ ಅಧ್ಯಾತ್ಮಿಕ ಸಂಪರ್ಕವನ್ನು ಪ್ರತಿನಿಧಿಸುತ್ತದೆ. ದಂಪತಿ ಪರಸ್ಪರರ  ಗೌಪ್ಯತೆಯನ್ನು ಗೌರವಿಸಬೇಕಾಗುತ್ತದೆ ಆದ್ದರಿಂದ ಇದು ಪ್ರತ್ಯೇಕತೆಯನ್ನು ಸೂಚಿಸುತ್ತದೆ. ಮದುವೆಯ ವಿಷಯಕ್ಕೆ ಬರುವುದಾದರೆ ಸಂಖ್ಯೆ 7 ಅಷ್ಟು ಉತ್ತಮ ಅಲ್ಲವೆಂದೇ ಪರಿಗಣಿಸಲಾಗುತ್ತದೆ.
 
ಸಂಖ್ಯೆ 8: ಈ ಸಂಖ್ಯೆಯು ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ವಿ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ಆದರೆ ಮದುವೆಯ ವಿಷಯಕ್ಕೆ ಬಂದರೆ ಇದು ವ್ಯಾಪಾರದ ಪಾಲುದಾರಿಕೆಯಷ್ಟು ಯಶಸ್ವಿಯಾಗದೇ ಇರಬಹುದು.  ಕೆಲಸದ ಮೇಲೆ ಹೆಚ್ಚು ಗಮನಹರಿಸುವ ಸಂಖ್ಯೆ ಇದಾದ ಕಾರಣ,  ಕುಟುಂಬದ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ.

ಸಂಖ್ಯೆ 9: ಮದುವೆಯ ದಿನಾಂಕ ಸಂಖ್ಯಾಶಾಸ್ತ್ರದ ಪ್ರಕಾರ 9 ಆಗಿದ್ದರೆ ಇದು ಪ್ರಾರಂಭಕ್ಕಿಂತ ಹೆಚ್ಚಾಗಿ ಅಂತ್ಯದ ದಿನ ಸೂಚಿಸುತ್ತದೆ. ಆದ್ದರಿಂದ  ಮದುವೆಗೆ ಈ ದಿನ ಅಷ್ಟು ಸೂಕ್ತ ಶಕ್ತಿಯಲ್ಲ. ಇದು ಪ್ರಾಪಂಚಿಕ ಅನುಭವಕ್ಕೆ ಕಾರಣವಾಗಬಹುದು.  

click me!