ಯಾರಿಗೆ ಏನೂ ಮಾಡದಿದ್ರೂ, ಈ ಜನ್ಮದಲ್ಲಿ ಕಷ್ಟ ಅನುಭವಿಸುವಂತೆ ಮಾಡೋ ಪ್ರಾರಬ್ಧ ಕರ್ಮದಿಂದ ಬಚಾವ್‌ ಆಗೋದು ಹೇಗೆ?

Published : Oct 16, 2025, 12:48 PM IST
how to reduce your karmic baggage cycles in kannada

ಸಾರಾಂಶ

Karmic Baggage: ಇಂದು ಏನೇ ಕಷ್ಟ ಬಂದರೂ ಕೂಡ, ಅದಕ್ಕೆ ಪ್ರಾರಬ್ಧ ಕರ್ಮ ಎಂದು ಹೇಳೋದುಂಟು. ಪ್ರಾರಬ್ಧ ಕರ್ಮದಿಂದ ಮುಕ್ತಿ ಪಡೆಯಬಹುದಾ? ಕರ್ಮವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಏನೇ ಸಮಸ್ಯೆ ಬಂದರೂ, ಈ ಜನ್ಮದಲ್ಲಿ ಯಾರಿಗೆ ಏನೇ ತೊಂದರೆ ಕೊಡದೆ ಇದ್ದರೂ ಕೂಡ, ದೇವರಿಗೆ ಭಕ್ತಿ ಭಾವದಿಂದ ಪೂಜಿಸಿದರೂ ಕೂಡ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಹಿಂದಿನ ಜನ್ಮದಿಂದ ಬಂದಿದ್ದು. ಇದಕ್ಕೆ ಪ್ರಾರಬ್ಧ ಕರ್ಮ ( Past Life Karma ) ಎಂದು ಹೇಳುವುದುಂಟು. ಹಾಗಾದರೆ ಈ ಕರ್ಮದ ಫಲವನ್ನು ಕಡಿಮೆ ಮಾಡಬಹುದಾ? ಹೌದು ಎಂದು ಡಾ ವೈಷ್ಣವಿ ಹೇಳಿದ್ದಾರೆ.

ಈ ಜನ್ಮದಲ್ಲಿ ಕಷ್ಟ ಎಂದು ಕೆಲವರು ಅಳುವುದುಂಟು. ಯಾರಿಗೆ ಏನೇ ಮಾಡದಿದ್ದರೂ ಕೂಡ ಈ ರೀತಿ ಸಮಸ್ಯೆ ಯಾಕೆ ಎಂದು ಕೆಲವರು ಅಳುತ್ತಾರೆ. ಈ ಬಗ್ಗೆ ಡಾ ವೈಷ್ಣವಿ ಅವರು Harate with Hamsa ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನಾವು ಮಾಡಿರೋ ಹಿಂದಿನ ಜನ್ಮದ ಪ್ರಾರಬ್ಧಾದಿ ಕರ್ಮಗಳನ್ನ ಅರಿತು, ನಂದೇ ತಪ್ಪು ಅಂತ ನಾವು ಯಾವಾಗ ತಗೊಳ್ತೀವಿ ಆಗ ನಾವು ಗೆದ್ದೆವು. ಇದೇ ಕಾರಣಕ್ಕೆ ನಮ್ಮನ್ನು ಭಗವಂತ ನಮ್ಮನ್ನು ಹುಟ್ಟಿಸುತ್ತಾನೆ.

ಇಂದು ಜನರಿಗೆ ಯಾಕೆ ಕಷ್ಟ ಬರುತ್ತಿದೆ?

ವಿಮರ್ಶೆ ಮಾಡಬಾರದು, ದೂರಬಾರದು, ಅಳಬಾರದು. ಇದು ಯುನಿವರ್ಸ್‌ಗೆ ಆಗೋದಿಲ್ಲ. ಇದನ್ನು ಮಾಡಲೇಬಾರದು. ಇವತ್ತು ನಮ್ಮ ಜೀವನದಲ್ಲಿದಲ್ಲಿ ಏನೇನು ನಡೆದಿದೆ ಅಥವಾ ಕಷ್ಟ ಬರಬಹುದು ಅಥವಾ ದುಃಖ ಬರಬಹುದು, ಒಬ್ಬ ವ್ಯಕ್ತಿ ಬಂದು ನಮಗೆ ನೋವು ಕೊಡಬಹುದು, ಮೋಸ ಮಾಡಬಹುದು. ಇದೆಲ್ಲ ಕರ್ಮದ ಆಧಾರಿತವಾಗಿದೆ. ಈ ಜನ್ಮದಲ್ಲಿ ನೀವು ಅವರಿಗೆ ಏನು ಮಾಡಿಲ್ಲ, ಆದರೆ ಹೋದ ಅಥವಾ ಕಳೆದ ಜನ್ಮದಲ್ಲಿ ನೋವು ಕೊಟ್ಟಿರಬಹುದು, ಮೋಸ ಮಾಡಿರಬಹುದು.

ಕರ್ಮದಿಂದ ಬಚಾವ್‌ ಆಗೋದು ಹೇಗೆ?

ಎಲ್ಲವೂ ಕರ್ಮದಿಂದನೇ ಬಂದಿರೋದು. ಆದರೆ ಸರಿ ಮಾಡಿಕೊಳ್ಳೋದಿಕ್ಕೆ ಮುಖ್ಯವಾಗಿ ಒಪ್ಪಿಕೊಳ್ಳಬೇಕು. ಪ್ರತಿಯೊಂದರಿಂದ ನಾವು ಪಾಠವನ್ನು ಕಲಿಬೇಕು. ಪ್ರತಿಯೊಂದು ಸಂದರ್ಭವನ್ನು ಯಾಕೆ ಆಗ್ತಿದೆ? ಅದರಿಂದ ನಾನು ಏನು ಪಾಠ ಕಲಿತಿದೀನಿ ಅಂತ ಕೇಳಿದರೆ ನಾವು ಭಗವಂತನಿಗೆ ಕನೆಕ್ಟ್ ಆಗೋದು.

ನಮ್ಮ ಕರ್ಮಕ್ಕೆ ನಾವು 100% ಜವಾಬ್ದಾರಿ ತಗೊಳ್ಳಬೇಕು. ನಮ್ಮ ಭಾವನೆಗಳು, ಯೋಚನೆಗಳು, ಕ್ರಿಯೆ ಎಲ್ಲವೂ ನಮ್ಮ ಕೈಯಲ್ಲಿದೆ. ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರುತ್ತದೆ. ಬೇರೆ ಯಾರ ಮೇಲೂ ಕೂಡ ದೂರು ಹೇಳಬಾರದು. ನಮ್ಮ ಜವಾಬ್ದಾರಿಯನ್ನು ನಾವು ತಗೊಂಡು, ಕರ್ಮವನ್ನು ಕ್ಲೀನ್ ಮಾಡ್ಕೊಂಡ್ರೆ 100% ಕರ್ಮ ಹೀಲ್ ಆಗುತ್ತದೆ.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 6 ರಂದು ದ್ವಿಪುಷ್ಕರ ಯೋಗ, 5 ರಾಶಿ ಜನರು ಅದೃಷ್ಟವಂತರು, ಲಾಭ ಡಬಲ್
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ