ಸೀಬೆ ಮರಕ್ಕೂ ಇದೆ ವಾಸ್ತುವಿನ ನಂಟು...

By Web DeskFirst Published Mar 29, 2019, 4:06 PM IST
Highlights

ವಾಸ್ತು ಹಾಗೂ ಅಶ್ವಥದಂತ ಕೆಲವು ಮರಗಳಿಗೆ ವಾಸ್ತು ನಂಟಿದೆ ಎಂಬುವುದು ಎಲ್ಲರಿಗೂ ಗೊತ್ತು. ಆದರೆ, ಪೋಷಕಾಂಶವಿರೋ ಸೀಬೇಗೂ ವಾಸ್ತುವಿಗೂ ನಂಟಿದೆ ಎಂದರೆ ನಂಬ್ತೀರಾ? ಓದಿ ಈ ಸುದ್ದಿ....

ಶೀತಗುಣ ಹೊಂದಿರುವ ಸೀಬೆ ಆರೋಗ್ಯಕ್ಕೆ ಒಳ್ಳೆಯದು. ಮಲಬದ್ಧತೆಯಂಥ ಸಮಸ್ಯೆಗೂ ಇದು ಮದ್ದು. ಆಯುರ್ವೇದದಲ್ಲೂ ಸೀಬೆಹಣ್ಣು ಮತ್ತು ಅದರ ಬೀಜಕ್ಕೆ ವಿಶೇಷ ಮಹತ್ವವಿದೆ. ಇದರಲ್ಲಿರುವ ವಿಟಮಿನ್ ಮತ್ತು ಖನಿಜ ಶರೀರದಲ್ಲಿ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು. ಹಳ್ಳಿ ಹಿತ್ತಲಲ್ಲಿ ಇರೋ ಈ ಗಿಡ ಮನೆ ಮಂದಿ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಈ ಗಿಡಕ್ಕೂ ವಾಸ್ತುವಿಗೂ ಇದೆ ನಂಟು. ಭಾರತೀಯ ಸಂಸ್ಕೃತಿಯಲ್ಲಿಯೂ ಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಯಾವ ಭೂಮಿಯಲ್ಲಿ ಹೆಚ್ಚು ಹೆಚ್ಚು ಸೀಬೆಹಣ್ಣಿನ ವೃಕ್ಷ ಬೆಳೆಯುತ್ತದೋ, ಆ ಭೂಮಿ ವಾಸ್ತುವಿನ ಪ್ರಕಾರ ತುಂಬಾ ಶ್ರೇಷ್ಠ ತಾಣ.  ದಪ್ಪ ಮಣ್ಣಿನಿಂದ ಹಿಡಿದು, ಮರಳಿನಂಥ ಮಣ್ಣಿನವರೆಗೂ ಎಲ್ಲ ವಿಭಿನ್ನ ಪ್ರಕಾರದ ಮಣ್ಣಿನಲ್ಲಿಯೂ ಇದು ಬೆಳೆಯುತ್ತದೆ. ಎಲ್ಲಿ ಸಮೃದ್ಧವಾಗಿ ಬೆಳೆದು ಕೊಳ್ಳುತ್ತದೋ, ಅದನ್ನು ಶ್ರೇಷ್ಠ ಜಾಗವೆನ್ನಲು ಅಡ್ಡಿಯಿಲ್ಲ.

ಸುಖ ಶಾಂತಿಗೆ ಮನಿಪ್ಲ್ಯಾಂಟ್‌ ಹೇಗೆ ನೆಡಬೇಕು?

click me!