ಪಾಸಿಟಿವ್ ಆಗಿರಬೇಕು, ಪಾಸಿಟಿವ್ ಯೋಚನೆ ಮಾಡಬೇಕು ಅಂತ ಹೇಳ್ತಾರೆ. ಆದರೆ ಎಲ್ಲ ಟೈಮ್‌ನಲ್ಲೂ ಪಾಸಿಟಿವ್ ಆಗಿರೋಕೆ ಆಗೋದಿಲ್ಲ. ಅದಕ್ಕೆ ಏನು ಮಾಡಬೇಕು?
ನಾವು ಯಾವಾಗಲೂ ಪಾಸಿಟಿವ್ ಆಗಿ ಆಲೋಚಿಸಬೇಕು ಅಂತ ಹೇಳುತ್ತಾರೆ. ಆದರೆ ಎಲ್ಲ ಬಾರಿಯೂ ಪಾಸಿಟಿವ್ ಆಗಿ ಆಲೋಚನೆ ಮಾಡೋಕೆ ಸಾಧ್ಯವೇ? ಇಲ್ಲ. ನಮ್ಮ ಮೈಂಡ್ ಯಾವಾಗಲೂ ಪಾಸಿಟಿವ್ ಆಗಿ ಆಲೋಚನೆ ಮಾಡೋಕೆ ಆಗೋದಿಲ್ಲ, ಏಕೆಂದರೆ ನಮ್ಮ ಮೈಂಡ್ ಮಶಿನ್ ಅಲ್ವಲ್ಲಾ?
ಮೈಂಡ್ ಕಂಟ್ರೋಲ್ ಮಾಡೋಕೆ ಆಗಲ್ಲ!
ಮೈಂಡ್ ನಮ್ಮ ಕಂಟ್ರೋಲ್‌ನಲ್ಲಿ ಇರೋದಿಲ್ಲ, ನಾವು ಅಷ್ಟಾಗಿ ಕಂಟ್ರೋಲ್ ಕೂಡ ಮಾಡೋಕೆ ಆಗೋದಿಲ್ಲ. ನಮ್ಮ ಮೈಂಡ್ ಏನು ಹೇಳುತ್ತದೆಯೋ ಅದನ್ನೇ ನಾವು ಮಾಡುತ್ತೇವೆ. ನಮ್ಮ ಮೈಂಡ್ ಹೇಗಿದೆ? ಎಷ್ಟು ಸಮರ್ಥ ಇದೆ, ಯಾಕೆ ಆಗಾಗ ಏನೇನೋ ಯೋಚನೆ ಮಾಡ್ತಿದೀವಿ ಎನ್ನೋದು ಗೊತ್ತಾಗೋದಿಲ್ಲ.
2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್
ಇದ್ದಕ್ಕಿದ್ದಂತೆ ಕೋಪ ಮಾಡಿಕೊಳ್ಳೋದು ಯಾಕೆ?
ನೀವು ಎಷ್ಟು ಪಾಸಿಟಿವ್ ಆಗಿ ಯೋಚಿಸಬೇಕು ಎಂದು ನಿಮ್ಮ ಮೈಂಡ್ ಮೇಲೆ ಒತ್ತಡ ಹಾಕುತ್ತಿರೋ ಅಷ್ಟೇ ನಿಮ್ಮ ಮೈಂಡ್ ನೆಗೆಟಿವ್‌ಆಗಿ ಆಲೋಚನೆ ಮಾಡುತ್ತದೆ. ಇದರಿಂದಲೇ ಕೆಲವರು ಇದ್ದಕ್ಕಿದ್ದಂತೆ ಕೋಪವನ್ನು ಒಮ್ಮೆ ಬ್ಲಾಸ್ಟ್ ಮಾಡುತ್ತಾರೆ, ಕಂಟ್ರೋಲ್ ತಪ್ಪುತ್ತಾರೆ.
ಏನು ಮಾಡಬೇಕು?
ನಿಜಕ್ಕೂ ಮೈಂಡ್ ಕಂಟ್ರೋಲ್ ಮಾಡಬೇಡಿ. ಇದಕ್ಕೆ ಅಷ್ಟು ಮಹತ್ವ ಕೊಡಬೇಡಿ. ನಿಮ್ಮ ಯೋಚನೆಗಳು ನೆಗೆಟಿವ್‌ನತ್ತ ಹೋಗ್ತಿದೆ ಎಂದು ಗೊತ್ತಾದಾಗ ಅದೇ ಯೋಚನೆಯಲ್ಲಿ ಇರಬೇಡಿ. ಆ ಯೋಚನೆಗಳನ್ನು ಒಂದು ಕಡೆ ಪಾರ್ಕ್ ಮಾಡಿ, ಮೂವ್ ಆನ್ ಆಗಿ. ಇದಕ್ಕೆಲ್ಲ ಅಷ್ಟು ಮಹತ್ವ ಕೊಡಬೇಡಿ. ಒಂದು ತಿಂಗಳೊಳಗಡೆ ನಿಮ್ಮ ನೆಗೆಟಿವ್ ಆಲೋಚನೆಗಳು ಕಡಿಮೆ ಆಗುತ್ತ ಬರುತ್ತವೆ. ನೀವು ವರ್ತಮಾನ ಕಾಲದಲ್ಲಿ ಇರುತ್ತೀರಿ. ಬೇರೆ ಬೇರೆ ವಿಷಯಗಳ ಬಗ್ಗೆ ಆಲೋಚನೆ ಮಾಡಿದರೂ ಕೂಡ ಅಲ್ಲಿ ಆತಂಕ ಇರೋದಿಲ್ಲ.
Sambhavami Yuge Yuge Film Review: ಉದಾತ್ತ ಆಲೋಚನೆ ಹೊಂದಿರುವ ಹಸಿರು ಸಿನಿಮಾ
ಸಿಂಪಲ್ ಆಗಿ ಹೇಳಬೇಕು ಅಂದ್ರೆ…!
ಈಗ ನಾನು ನಿಮ್ಮ ಬಳಿ ಬಂದು ಮಾತನಾಡಿದಾಗ ನೀವು ನನಗೆ ಪ್ರತಿಕ್ರಿಯೆ ಕೊಡೋದಿಲ್ಲ, ಇಗ್ನೋರ್ ಮಾಡ್ತೀರಾ. ಇದೇ ಪದೇ ಪದೇ ಆದಾಗ ನಾನು ಮತ್ತೆ ನಿಮ್ಮ ಬಳಿ ಬಂದು ಮಾತಾಡೋಕೆ ಇಷ್ಟಪಡೋದಿಲ್ಲ ಅಲ್ವಾ? ಅದೇ ಲಾಜಿಕ್ ಇಲ್ಲೂ ಅಪ್ಲೈ ಮಾಡಬೇಕು. ನಿಮ್ಮ ಮೈಂಡ್‌ಗೆ ಅಷ್ಟು ಗಮನ ಕೊಡಬೇಡಿ, ಅದನ್ನು ಅದರ ಪಾಡಿಗೆ ಬಿಡಿ.
ಹನುಮಾನ್ ಚಾಲೀಸದಲ್ಲಿ ಏನಿದೆ?
“ನಿಜ ಮನು ಮುಕುರ ಸುಧಾರ್.ಬರನು ರಘುಬರ ಬಿಮಲ ಜಸು. ಜೋದಾಯಕ ಫಲ ಚಾರಿ” ಎಂದು ತುಳಸಿದಾಸರು ಹೇಳಿದ್ದಾರೆ. ಈ ಸ್ತೋತ್ರವನ್ನು ಹೇಳುತ್ತ ಬನ್ನಿ, ಆಗ ನಿಮ್ಮ ಮೈಂಡ್ ಕ್ಲೀನ್ ಆಗುವುದು. ನಿಮ್ಮ ಯೋಚನಾ ಲಹರಿಯಲ್ಲಿ ಒಂದು ಸುಧಾರಣೆ ಆಗುವುದು. ಈ ರೀತಿ ಸ್ತೋತ್ರಗಳು ನಿಮ್ಮನ್ನು ಮ್ಯಾನಿಫೆಸ್ಟ್ ಮಾಡುವುದು. ಹೀಗೆ ಸ್ತೋತ್ರ ಹೇಳುತ್ತ ಬಂದ್ರೆ ನಿಮ್ಮಲ್ಲಿ ಒಂದಷ್ಟು ಬದಲಾವಣೆ ನೋಡ್ತೀರಿ.