Chanaya Niti: ದುರ್ಯೋಧನನ ಈ ಒಳ್ಳೆಯ ಗುಣಗಳು ನಿಮ್ಮಲ್ಲಿರಲಿ ಅಂತಾರೆ ಚಾಣಕ್ಯ!

Published : Jul 31, 2025, 01:38 PM IST
duryodhan wanted to suicide before war

ಸಾರಾಂಶ

ಮಹಾಭಾರತದ ಖಳನಾಯಕ ದುರ್ಯೋಧನನಲ್ಲಿದ್ದ ಕೆಲವು ಸಕಾರಾತ್ಮಕ ಗುಣಗಳನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಯೋಧ, ಸ್ನೇಹಿತ, ಆಡಳಿತಗಾರನಾಗಿ ಅವನಲ್ಲಿದ್ದ ಒಳ್ಳೆಯ ಗುಣಗಳನ್ನು ತಿಳಿದುಕೊಳ್ಳಿ.

ಚಾಣಕ್ಯ ನೀತಿ ಎಂದರೆ ಜೀವನದ ವಿವಿಧ ಅಂಶಗಳ ಬಗ್ಗೆ ಅವರ ನೈತಿಕ ಮತ್ತು ನೀತಿಬೋಧಕ ಸಲಹೆಗಳ ಸಂಗ್ರಹ. ಇದನ್ನು ಅನುಸರಿಸುವ ಮೂಲಕ ಜನರು ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬಹುದು. ಒಳ್ಳೆಯ ಗುಣಗಳೆಂದು ಅವರು ಯಾವುದನ್ನು ಹೇಳುತ್ತಾರೆ, ದುರ್ಯೋಧನ- ರಾವಣರಂಥ ಪೌರಾಣಿಕ ಖಳನಾಯಕರಲ್ಲಿಯೂ ಕೆಲವು ಒಳ್ಳೆಯ ಗುಣಗಳಿದ್ದವು. ಆದರೆ ಆ ಸದ್ಗುಣಗಳನ್ನು ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತೆ ಕೆಟ್ಟ ಗುಣಗಳು ನುಂಗಿಹಾಕಿದವು. ಆಚಾರ್ಯ ಚಾಣಕ್ಯರು ಅಂಥ ಕೆಟ್ಟ ಗುಣಗಳನ್ನು ದೂರವಿಟ್ಟು, ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಿ ಎಂದು ಸೂಚಿಸುತ್ತಾರೆ. ಅವರ ಪ್ರಕಾರ ಕೌರವರ ಹಿರಿಯನಾದ ದುರ್ಯೋಧನನ ಈ ಕೆಲವು ಒಳ್ಳೆಯ ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

1) ಮಹಾಭಾರತದಲ್ಲಿ ದುರ್ಯೋಧನನನ್ನು ಖಳನಾಯಕನಾಗಿ ಚಿತ್ರಿಸಲಾಗಿದೆಯಾದರೂ, ಅವನು ಕೆಲವು ಸಕಾರಾತ್ಮಕ ಲಕ್ಷಣಗಳನ್ನು ಪ್ರದರ್ಶಿಸುತ್ತಾನೆ. ಅವನು ಒಬ್ಬ ನುರಿತ ಯೋಧ, ದೃಢನಿಶ್ಚಯದ ನಾಯಕ ಮತ್ತು ಕರ್ಣನ ನಿಷ್ಠಾವಂತ ಸ್ನೇಹಿತನಾಗಿದ್ದನು. ಅವನು ತನ್ನ ಸಹೋದರರನ್ನು ಸಹ ಗೌರವಿಸಿದನು ಮತ್ತು ತನ್ನ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಬಲವಾದ ನಿಷ್ಠೆಯನ್ನು ಹೊಂದಿದ್ದನು.

2) ದುರ್ಯೋಧನನು ಅಸಾಧಾರಣ ಯೋಧನಾಗಿದ್ದನು. ವಿಶೇಷವಾಗಿ ಗದೆ ಅವನಲ್ಲಿತ್ತು. ಯಾದವ ವೀರ ಬಲರಾಮನಿಂದ ಅವನು ಗದಾಯುದ್ಧದಲ್ಲಿ ವಿಶೇಷವಾದ ತರಬೇತಿಯನ್ನು ಪಡೆದಿದ್ದ. ಗದಾಯುದ್ಧದಲ್ಲಿ ಭೀಮನ ವಿರುದ್ಧ ಪ್ರಬಲವಾದ ಪೈಪೋಟಿ ನೀಡಿದ್ದ. ಅದಕ್ಕೂ ಮೊದಲು ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಕಡೆಯ ಹಲವಾರು ಯೋಧರನ್ನು ಉರುಳಿಸಿದ್ದ. ಅವನಿಗೆ ಬಿಲ್ವಿದ್ಯೆಯಲ್ಲಿಯೂ ಪರಿಣತಿಯಿತ್ತು.

3) ಕರ್ಣನೊಂದಿಗಿನ ದುರ್ಯೋಧನನ ಸ್ನೇಹವನ್ನು ಅವನ ಪಾತ್ರದ ಸಕಾರಾತ್ಮಕ ಅಂಶವೆಂದು ಹೆಚ್ಚಾಗಿ ಎತ್ತಿ ತೋರಿಸಲಾಗುತ್ತದೆ. ಕರ್ಣನು ಜಾತಿಯ ವಿಷಯದಲ್ಲಿ ಸಾಮಾಜಿಕ ಪೂರ್ವಾಗ್ರಹವನ್ನು ಎದುರಿಸುತ್ತಿದ್ದಾಗಲೂ ಅವನು ಕರ್ಣನ ಕೌಶಲ್ಯಗಳನ್ನು ಗುರುತಿಸಿದ. ಮತ್ತು ಅವನಿಗೆ ಅಂಗ ರಾಜ್ಯವನ್ನು ನೀಡಿ ಪಟ್ಟಾಭಿಷೇಕ ಮಾಡಿದ.

3) ದುರ್ಯೋಧನನು ಮಹತ್ವಾಕಾಂಕ್ಷೆಯುಳ್ಳವನಾಗಿದ್ದನು. ಹಸ್ತಿನಾಪುರದ ಸಿಂಹಾಸನವನ್ನು ತನ್ನದು ಎಂದು ನಂಬಿ ಅದನ್ನು ಪಡೆಯಲು ದೃಢನಿಶ್ಚಯ ಹೊಂದಿದ್ದ. ಅವನಿಗೆ ಬಲವಾದ ದೃಢನಿಶ್ಚಯವಿತ್ತು ಮತ್ತು ಅವನು ನಂಬಿದ್ದಕ್ಕಾಗಿ ಹೋರಾಡಲು ಸಿದ್ಧನಿದ್ದ.

4) ದುರ್ಯೋಧನ ತನ್ನ ಸಹೋದರರನ್ನು, ಬಂಧುಗಳನ್ನು ತೀವ್ರವಾಗಿ ರಕ್ಷಿಸುತ್ತಿದ್ದ. ಅವರಿಗೆ ಯಾವುದೇ ಹಾನಿಯಾಗುವುದನ್ನು ಸಹಿಸುತ್ತಿರಲಿಲ್ಲ. ಭಾವ ಜಯದ್ರಥನನ್ನು ಅರ್ಜುನನ ಕೊಲ್ಲುವ ಪ್ರತಿಜ್ಞೆಯಿಂದ ರಕ್ಷಿಸಲು ದ್ರೋಣರ ಬಳಿ ಹಠ ಹಿಡಿದು ಸೂಚಿವ್ಯೂಹ ಚಕ್ರವ್ಯೂಹಗಳನ್ನು ರಚಿಸಿ ಅದರೊಳಗಿಟ್ಟು ರಕ್ಷಿಸುವಂತೆ ಮಾಡಿದ.

5) ಒಳ್ಳೆಯ ಆಡಳಿತಗಾರ. ಮಹಾಭಾರತದ ಕೆಲವು ವ್ಯಾಖ್ಯಾನಗಳ ಪ್ರಕಾರ ದುರ್ಯೋಧನನು ತನ್ನ ಪ್ರಜೆಗಳ ಬಗ್ಗೆ ಕಾಳಜಿ ವಹಿಸುವ ಸಮರ್ಥ ಆಡಳಿತಗಾರನಾಗಿದ್ದ. ಪಾಂಡವರ ಬಗ್ಗೆ ಸಾಕಷ್ಟು ವಿದ್ವೇಷ ಇದ್ದರೂ, ಪ್ರಜೆಗಳನ್ನು ನೋಡಿಕೊಳ್ಳುವಲ್ಲಿ ಯಾವುದೇ ದುಷ್ಟತನ ತೋರಿಸಲಿಲ್ಲ.

6) ತನ್ನ ಭಾವನೆಗಳಲ್ಲಿ ನೇರ ಹಾಗೂ ಪ್ರಾಮಾಣಿಕನಾಗಿದ್ದ. ಅಂದರೆ, ಪಾಂಡವರ ಬಗ್ಗೆ ತನಗಿದ್ದ ದ್ವೇಷವನ್ನು ಮುಚ್ಚಿಡಲಿಲ್ಲ. ತಾನು ಸಿಂಹಾಸನಕ್ಕಾಗಿ ಹೋರಾಡುತ್ತಿದ್ದೇನೆ ಮತ್ತು ಗೆಲ್ಲಲು ಏನು ಬೇಕಾದರೂ ಮಾಡುತ್ತೇನೆ ಎಂದು ಅವನು ಬಹಿರಂಗವಾಗಿ ಒಪ್ಪಿಕೊಂಡಿದ್ದ. ಅದಕ್ಕಾಗಿ ಹೋರಾಡಿದ.

7) ಹಣಕಾಸು ನಿರ್ವಹಣೆಯಲ್ಲಿ ಖಚಿತತೆ, ಕರಾರುವಾಕ್ಕುತನ ಮತ್ತು ಅಚ್ಚುಕಟ್ಟು ಅವನಲ್ಲಿ ಇತ್ತು. ಇದು ಗೊತ್ತಿದ್ದುದರಿಂದಲೇ, ಪಾಂಡವರು ರಾಜಸೂಯ ಯಾಗ ಮಾಡುವಾಗ, ಭಂಡಾರದ ನಿರ್ವಹಣೆಯನ್ನು ಅವನಿಗೇ ಕೊಡುವಂತೆ ಧರ್ಮರಾಯನಿಗೆ ಶ್ರೀಕೃಷ್ಣ ಸೂಚಿಸುತ್ತಾನೆ. ದುರ್ಯೋಧನ ರಾಜರುಗಳಿಂದ ಬಂದ ಕಪ್ಪಕಾಣಿಕೆಗಳೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಭಂಡಾರದ ಕೀಲಿಕೈಯನ್ನು ಧರ್ಮರಾಯನಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಾನೆ.

ಇಷ್ಟೆಲ್ಲ ಇದ್ದರೂ ಕೌರವ ಧರ್ಮದ್ವೇಷಿ, ದೈವದ್ವೇಷಿ ಹಾಗೂ ಪಾಂಡವದ್ವೇಷಿ ಎಂಬುದು ಸುಳ್ಳಲ್ಲ. ಒಳ್ಳೆಯ ಗುಣಗಳಿಗಿಂತ ಹೆಚ್ಚಾಗಿ ಅವನಲ್ಲಿ ಕೆಟ್ಟ ಗುಣಗಳಿದ್ದವು. ಆದ್ದರಿಂದ ಅವನು ಆದರ್ಶ ವ್ಯಕ್ತಿಯೇನಲ್ಲ.

 

PREV
Read more Articles on
click me!

Recommended Stories

ಮಾರ್ಗಶಿರ ಮಾಸದಲ್ಲಿ ಇದನ್ನೆಲ್ಲಾ ಮಾಡಿದ್ರೆ ಪಾಪನಾ? ಆಧ್ಯಾತ್ಮಿಕ ಸತ್ಯ ಏನು?
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ