ಗರ್ಭಿಣಿ ಇರೋ ಮನೆಯಲ್ಲಿರಬಾರದು ಮುಳ್ಳಿನ ಗಿಡ!

By Web DeskFirst Published Sep 15, 2018, 6:57 PM IST
Highlights

ತನ್ನ ಒಡಲಿನಲ್ಲೊಂದು ಪುಟ್ಟು ಜೀವವನ್ನಿಟ್ಟುಕೊಳ್ಳುವ ಗರ್ಭಿಣಿಯ ಮನಸ್ಸು ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಂಥ ಗರ್ಭಿಣಿಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ವಾಸ್ತು ಟಿಪ್ಸ್...

ಹಿಂದಿನ ಕಾಲದಿಂದಲೂ ವಾಸ್ತುವಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದು ಮನೆ ಕಟ್ಟುವಾಗ ಇರಬಹುದು, ಹೊಸತು ಏನಾದರೂ ಖರೀದಿಸುವಾಗ ಇರಬಹುದು. ಅಷ್ಟೇ ಯಾಕೆ ಗರ್ಭಿಣಿ ಮಹಿಳೆಯರ ಅರೋಗ್ಯ ಉತ್ತಮವಾಗಿರಲು ಸಹ ವಾಸ್ತು ಸಹಾಯ ಮಾಡುತ್ತದೆ. ಅದು ಹೇಗೆ?

ವಾಸ್ತು ಟಿಪ್ಸ್

- ಪೂರ್ವ ಭಾಗವನ್ನು ಇಂದ್ರ ಅಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಹೆಚ್ಚಿನ ಸಮಯ ಕಳೆದರೆ ಗರ್ಭಿಣಿ ಮಹಿಳೆಯರ ಎಲುಬು, ಕಣ್ಣು, ಹೃದಯ, ಬೆನ್ನು ಹುರಿ ಸ್ಟ್ರಾಂಗ್ ಆಗುತ್ತದೆ ಹಾಗು ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. 
- ಮನೆಯ ಮಧ್ಯ ಭಾಗವನ್ನು ಬ್ರಹ್ಮಸ್ಥಾನವೆಂದು ಪರಿಗಣಿಸಲಾಗುತ್ತದೆ. ಈ ಜಾಗವನ್ನು ಖಾಲಿಯಾಗಿಟ್ಟರೆ ನಿಮಗೂ ಉತ್ತಮ. 
- ಈಶಾನ್ಯ ಭಾದಲ್ಲಿ ಕುಳಿತಾಗ ಧ್ಯಾನ ಮಾಡುತ್ತಾ, ಉಸಿರಾಟದ ಎಕ್ಸರ್ ಸೈಜ್ ಮಾಡಿದರೆ ತಾಯಿ ಸಂತೋಷವಾಗಿರುತ್ತಾಳೆ. 
- ಮುಳ್ಳಿನ ಗಿಡಗಳಾದ ಕ್ಯಾಕ್ಟಸ್, ಇನ್ನಿತರ ಗಿಡಗಳು ಹಾಗು ಬೋನ್ಸಾಯಿ ಗಿಡಗಳನ್ನು ಮನೆಯ ಒಳಗಿಡಬೇಡಿ. 
- ಗರ್ಭಿಣಿ ಮಹಿಳೆ ಇರುವ ರೂಮ್ ಬಿಳಿ ಗೋಡೆ ಬಣ್ಣ ಬಿಳಿಯದ್ದಾಗಿರಲಿ. ಇದು ಶಾಂತಿಯ ಸಂಕೇತ. 
- ಆಗ್ನೇಯ ದಿಕ್ಕು ಅಗ್ನಿಯ ಸಂಕೇತ ಹಾಗು ದಕ್ಷಿಣ ದಿಕ್ಕು ಯಮನ ಸಂಕೇತ. ಆದುದರಿಂದ ಮೊದಲ ಮೂರು ತಿಂಗಳು ಈ ದಿಕ್ಕಿನಲ್ಲಿ ಹೆಚ್ಚಾಗಿ ಇರಬೇಡಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇದೆ. 
- ಆಗ್ನೇಯ ದಿಕ್ಕಿನಲ್ಲಿ ದೀಪವನ್ನು ಹಚ್ಚಿಡಿ. ಇದು ತಾಯಿಯ ಆರೋಗ್ಯಕ್ಕೆ ಉತ್ತಮ. 
- ಗರ್ಭಿಣಿ ಮಹಿಳೆಯರ ಕೋಣೆಯಲ್ಲಿ ನವಿಲು ಗರಿ ಇಡಿ. ಇದು ಪಾಸಿಟಿವ್ ಎನರ್ಜಿ ನೀಡುತ್ತದೆ. 

click me!