Astrology News: ಸಪ್ತಗ್ರಹಗಳೂ ಸ್ವರಾಶಿಯಲ್ಲಿ ಚಲನೆ: ಏನು ಫಲ?

By Suvarna News  |  First Published Jul 1, 2022, 6:59 PM IST

Astrology News: ಶನಿ 27 ವರ್ಷಕೆ ಮಕರ ಕುಂಭದಲ್ಲಿ ಬಂದಾಗ ಮಾತ್ರ ಆ ದಶಕದಲ್ಲಿ ಇತರ 6 ಗ್ರಹರೂ ತಮ್ಮ ರಾಶಿಯಲ್ಲಿ ಸಾಗುವ ಅಪರೂಪ ಯೋಗ ಇದಾಗಿದೆ.


ಉಚ್ಚನಾಗಿ ರವಿಯ ದಕ್ಷಿಣ ಪಥದ ಏಕಾದಶ ಬುಧಾದಿತ್ಯ ಯೋಗವೂ ಉಂಟಾಗಲಿದೆ. ಕುಂಭದಿಂದ ಕರ್ಕದವರೆಗೂ ಸಪ್ತಗ್ರಹರೂ ಸ್ವರಾಶಿಯಲ್ಲಿ ಸಾಗುವುದು ಪುನ ಶನಿಯ ಕಾರಣದಿಂದಲೇ. ಶನಿ 27 ವರ್ಷಕೆ ಮಕರ ಕುಂಭದಲ್ಲಿ ಬಂದಾಗ ಮಾತ್ರ ಆ ದಶಕದಲ್ಲಿ ಇತರ 6 ಗ್ರಹರೂ ತಮ್ಮ ರಾಶಿಯಲ್ಲಿ ಸಾಗುವ ಅಪರೂಪ ಯೋಗ ಇದಾಗಿದೆ.

ಏನೇ ಶನಿ ಶನಿ ಅಂದರೂ , ಶನಿಗೆ ಇರುವ ಮಹತಿ ಅಂಥದು ! ಎಲ್ಲವನ್ನೂ ಬುಡಮೇಲುಸಮ ಮಾಡುವ ಕಾರಕತ್ವ ಉಳ್ಳನು,  ವಕ್ರೀಶನಿ - ಕುಜ ರಾಹು ಯುತಿ ಇವೆರಡರ ಬಾಧೆ:  ಇದರ ದೋಷವೂ ಕಡಿಮೆಯಾಗುತ್ತದೆ ಈ ಸ್ವರಾಶಿ ಯೋಗದಿಂದ

Tap to resize

Latest Videos

ಫಲ ಏನು ?

  • ಧನ -ಜ್ಞಾನ - ಆರೋಗ್ಯ ದಾರಿದ್ರ ಪರಿಹಾರ.
  • ವೈಮನಸ್ಯ ದೂರ.
  • ಹುಮ್ಮಸ್ಸು , ಹೊಸ ಆವರ್ತನಗಳಿಗೆ ಜೀವ ಜಗತ್ತು ತಿರುಗುವುದು.
  • ಇಂದಿನ ನಾಳಿನ ಬಗ್ಗೆ ವಿಶ್ವಾಸ ಭರವಸೆ ಮೂಡುವುದು.
  • ಮಹಾಪುರುಷರ ಜನ್ಮ - ಅವತಾರ.
  • ಮಹಾತ್ಮರ ಇಹ ಜೀವನದಲ್ಲಿ ಮಹತ್ತರ ಪ್ರಭಾವ.

ಸದ್ಯ ತಿಂಗಳ ಮಟ್ಟಿಗೆ ಶುಭವೇ ಅಧಿಕವಾಗಿ ಧೈರ್ಯದಿಂದ ಹೇಳಬಲ್ಲ ಮಾಸ ಕಾಲಪ್ರಭಾವ ದಿಂದ ಸಾಧ್ಯವಾಗಿದೆ ಅನ್ನೋದೇ ಏನೋ ಸಂತಸ 

- ಡಾ. ಹರೀಶ್ ಕಶ್ಯಪ

click me!