ಮುಕ್ಕಾದ ಶಿವನ ಮೂರ್ತಿ ಪೂಜಿಸಿದರೆ ದೋಷವಿಲ್ಲವೇ?

Published : Jun 25, 2019, 11:50 AM IST
ಮುಕ್ಕಾದ ಶಿವನ ಮೂರ್ತಿ ಪೂಜಿಸಿದರೆ ದೋಷವಿಲ್ಲವೇ?

ಸಾರಾಂಶ

ದೇವರ ಕೋಣೆಯಲ್ಲಿ  ಭಗವಂತನ ಮೂರ್ತಿಯನ್ನು ಇಡುವುದು ಹಳೇ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ದೇವರ ಮೂರ್ತಿಗೆ ಪೂಜಿಸುವ ಮತ್ತು ದರ್ಶನ ಪಡೆಯುವುದರಿಂದ  ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಸುಖ ಸೃಷ್ಟಿಯಾಗುತ್ತೆ. ಆದರೆ ಯಾಕೆ ತುಂಡಾದ ಮೂರ್ತಿ ಇಡಬಾರದು ಗೊತ್ತಾ? 

ಮನಸ್ಸಿಗೆ ನೆಮ್ಮದಿ ನೀಡೋ ಮನೆಯಲ್ಲಿ ದೇವರಿಗಾಗಿಯೇ ವಿಶೇಷ ಕೋಣೆ ಇರುತ್ತದೆ. ಮನೆಯವರೆಲ್ಲರೂ ತಮ್ಮದೇ ರೀತಿಯಲ್ಲಿ ಆ ದೇವನನ್ನು ಪೂಜಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಗ್ಯಾರಂಟಿ. ಆದರೆ, ಈ ಜಾಗದಲ್ಲಿ ಮುಕ್ಕಾದ ಮೂರ್ತಿ ಇಟ್ಟರೆ ಆಪತ್ತು ಕಟ್ಟಿಟ್ಟ ಬುತ್ತಿ. ಕೆಟ್ಟ ಶಕ್ತಿ ಆವರಿಸಿ, ಆಗಬಾರದ್ದು ಆಗಿ ಹೋಗುತ್ತೆ. ಇದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ ನೋಡೋಣ... 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

- ತುಂಡಾದ ಮೂರ್ತಿ ಪೂಜಿಸಿದರೆ ಪೂಜೆ ಪೂರ್ಣ ಫಲ ಸಿಗುವುದಿಲ್ಲ. ಇದರಿಂದ ಮನಸ್ಸಿಗೆ ಶಾಂತಿ ಸಿಗೋದಿಲ್ಲ. 

- ತುಂಡಾದ ಮೂರ್ತಿ ಪೂಜಿಸುವಾಗ ನಮ್ಮ ದೃಷ್ಟಿ ಮೂರ್ತಿಯ ತುಂಡಾದ ಭಾಗದ ಮೇಲೆಯೇ ಬೀಳುತ್ತದೆ. ಇದರಿಂದ ಮನಸ್ಸು ಅಲ್ಲೋಲಕಲ್ಲೋಲವಾಗಿ ಏಕಾಗ್ರತೆ ತಪ್ಪುತ್ತದೆ. ಏಕಾಗ್ರತೆ ಕಡಿಮೆಯಾದರೆ ಮನಸ್ಸಿನಲ್ಲಿ  ಅಶಾಂತಿ ಮೂಡುತ್ತದೆ. 

- ವಾಸ್ತುವಿನ ಅನುಸಾರ ಮುಕ್ಕಾದ ಮೂರ್ತಿಯನ್ನಿಟ್ಟರೆ ವಾಸ್ತು ದೋಷ ಹೆಚ್ಚುತ್ತದೆ. ಈ ದೋಷಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಆದುದರಿಂದ ತುಂಡಾದ ಮೂರ್ತಿಯನ್ನು ಕೂಡಲೇ ಮನೆಯಿಂದ ಹೊರಹಾಕಿ. 

ದೇವಾಲಯಕ್ಕೆ ಹೋಗಿ, ಹಿಂಗೆಲ್ಲಾ ಮಾಡೋದ್ ಸರೀನಾ?

- ಶಿವಪುರಾಣದ ಅನುಸಾರ ಶಿವಲಿಂಗವನ್ನು ನಿರಾಕಾರ ಎನ್ನುತ್ತಾರೆ. ಶಿವಲಿಂಗ ತುಂಡಾದರೆ ಪೂಜಿಸಬಹುದು. ಶಿವಲಿಂಗ ಅಲ್ಲದೆ ಇತರ ದೇವರ -ದೇವತೆಗಳ ಮೂರ್ತಿ ಮುಕ್ಕಾದರೆ ಪೂಜಿಸಲೇ ಕೂಡದು. 

PREV
click me!

Recommended Stories

2026 ರ ಹೊಸ ವರ್ಷದ ಅದೃಷ್ಟದ ದೇವಾಲಯ, ಈ ದೇವಸ್ಥಾನಕ್ಕೆ ಭೇಟಿ ನೀಡಿ- ಲಾಭ ಪಕ್ಕಾ
ಮಂಗಳ-ಶನಿ ಘರ್ಷಣೆಯಿಂದ ಈ ರಾಶಿ ಅದೃಷ್ಟ ಬದಲು, ಕೈ ತುಂಬಾ ಹಣ.. ಹೆಜ್ಜೆ ಹೆಜ್ಜೆಗೂ ಯಶಸ್ಸು