ರಾತ್ರಿ ನಿದ್ರಿಸುವಾಗ ಬಾಯಾರಿಕೆ ಆಗದಿರಲು ತಲೆ ಬಳಿ ನೀರಿಟ್ಟು ಮಲಗುತ್ತೀರಾ? ಆದ್ರೆ ಅದರಿಂದ ಎಷ್ಟೊಂದು ಸಮಸ್ಯೆಗಳು ಕಾಡುತ್ತವೆ ಗೊತ್ತಾ? ವಾಸ್ತು ಈ ಬಗ್ಗೆ ಏನು ಹೇಳುತ್ತೆ?
ರಾತ್ರಿ ಚೆನ್ನಾಗಿ ನಿದ್ರಿಸಿದರೆ ಕಡೆ ದೈಹಿಕ ಆಯಾಸವೂ ದೂರವಾಗುತ್ತದೆ. ಇನ್ನೊಂದೆಡೆ ಮಾನಸಿಕ ಶಾಂತಿಯೂ ಸಿಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳ ಬಗ್ಗೆ ಹೇಳಲಾಗುತ್ತದೆ. ಅವುಗಳನ್ನು ನಿದ್ರಿಸುವ ಜಾಗದ ಬಳಿ ಇಟ್ಟುಕೊಳ್ಳಬಾರದು. ಕೆಲವು ವಸ್ತುಗಳನ್ನು ತಲೆ ಬಳಿ ಇಡೋದ್ರಿಂದ ನಕಾರಾತ್ಮಕ ಶಕ್ತಿ ಆವರಿಸುತ್ತದೆ. ಯಾವುವು?
- ಮಲಗುವ ಸಮಯದಲ್ಲಿ ಯಾವತ್ತೂ ನೀರಿನ ಪಾತ್ರೆಯನ್ನು ತಲೆ ಬುಡ ಬಳಿ ಇಟ್ಟು ಮಲಗಬೇಡಿ. ಇದರಿಂದ ಚಂದ್ರನ ಪ್ರಭಾವ ಬೀರುತ್ತದೆ. ಜೊತೆಗೆ ಮನೋರೋಗ ಕಾಡುತ್ತದೆ.
ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ
undefined
- ನಿದ್ರಿಸುವಾಗ ಮೊದಲು ಚಪ್ಪಲ್ ಅನ್ನು ಬೆಡ್ ಕೆಳಗೆ ಅಥವಾ ತಲೆಯ ಬಳಿ ಇಡಬೇಡಿ.
- ಮಂದಿಗೆ ಈಗೀಗ ಮೊಬೈಲೇ ಪ್ರಪಂಚ. ಮಾತನಾಡಿ, ಮೆಸೇಜ್ ಮಾಡಿ ಅವನ್ನು ಬೆಡ್ ಬಳಿಯೇ ಇಡುತ್ತಾರೆ. ಆದರೆ ಮೊಬೈಲ್, ಲ್ಯಾಪ್ ಟಾಪ್ ಮೊದಲಾದ ವಸ್ತುಗಳನ್ನ ಬೆಡ್ ಬಳಿ ತಪ್ಪಿಯೂ ಇಡಬಾರದು. ಇದರಿಂದ ರಾಹುದೋಷ ಉಂಟಾಗುತ್ತದೆ.
- ಯಾವುದೇ ರೀತಿಯ ಎಣ್ಣೆಯನ್ನು ತಲೆ ಬಳಿ ಇಟ್ಟು ಮಲಗಬೇಡಿ. ಇದು ಜೀವನದ ಮೇಲೆ ಪರಿಣಾಮ ಬೀರಿ, ಕಷ್ಟಗಳು ಹೆಚ್ಚಾಗುತ್ತವೆ.
ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು
- ಮಲಗುವಾಗ ಬೆಡ್ ಎದರು ಯಾವತ್ತೂ ಕನ್ನಡಿ ಇರದಂತೆ ನೋಡಿಕೊಳ್ಳಿ. ಈ ದೋಷದಿಂದ ಅನಾರೋಗ್ಯ ಕಾಡುತ್ತದೆ. ಪತಿ -ಪತ್ನಿ ನಡುವೆ ಕಲಹವೂ ಆಗುತ್ತದೆ.