ದೀಪಾವಳಿ ರಾಶಿಫಲ: ಈ ರಾಶಿಗೆ ಸಾಕ್ಷಾತ್ ಕುಬೇರ ಯೋಗ.. ಆದ್ರೆ 1 ತಪ್ಪಿನಿಂದ ದುರಾದೃಷ್ಟ ತಪ್ಪಿದ್ದಲ್ಲ!

Published : Oct 23, 2026, 05:43 PM IST
Deepavali rashi bhavishya kannada

ಸಾರಾಂಶ

Capricorn Diwali remedies: ದೀಪಾವಳಿ ಹಬ್ಬ ಎಲ್ಲರಿಗೂ ಸಂಭ್ರಮ ತಂದರೆ, ಈ ರಾಶಿಯವರಿಗೆ ಮಾತ್ರ ಹಬ್ಬ ಮುಗಿಯುತ್ತಿದ್ದಂತೆ ಗಂಭೀರ ಸಂಕಷ್ಟಗಳು ಎದುರಾಗಲಿವೆ! ಗ್ರಹಗಳ ಬದಲಾವಣೆಯಿಂದಾಗಿ ಈ ರಾಶಿಯವರು ಒಂದರ ಬೆನ್ನಲ್ಲೇ ಮತ್ತೊಂದು ಸಾಲದ ಸುಳಿಗೆ ಹಾಗೂ ತಪ್ಪಾದ ನಿರ್ಧಾರಗಳ ಗೊಂದಲದ ಜಾಲಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಈ ಸಂಕಷ್ಟದಿಂದ ಪಾರಾಗಲು ಜ್ಯೋತಿಷಿಗಳು ನೀಡಿದ ಮಹತ್ವದ ಎಚ್ಚರಿಕೆ ಏನು? ಇಲ್ಲಿದೆ ಸಂಪೂರ್ಣ ವಿವರ.

ದೀಪಾವಳಿ ಎಂದರೆ ಕೇವಲ ಪಟಾಕಿ, ಹೊಸ ಬಟ್ಟೆ ಅಥವಾ ವ್ಯಾಪಾರಿಗಳ ಮಾತು ಕೇಳಿ ಬಂಗಾರ-ಬೆಳ್ಳಿ ಖರೀದಿಸುವುದಲ್ಲ. ಅಸಲಿಗೆ ಶಾಸ್ತ್ರೋಕ್ತವಾಗಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ? ಅದರಲ್ಲೂ ಶನಿಯ ಆಳ್ವಿಕೆಯ ಮಕರ ರಾಶಿಯವರಿಗೆ ಈ ದೀಪಾವಳಿ ಅದೃಷ್ಟ ತರಲಿದೆಯೇ ಅಥವಾ ಸಂಕಷ್ಟ ತರಲಿದೆಯೇ? ಗುರುಗಳು ನೀಡಿರುವ ಮಾರ್ಗದರ್ಶನ ಇಲ್ಲಿದೆ.

ಮಕರ ರಾಶಿಯವರು ಧನತೇರಸ್‌ನಿಂದ ದೀಪಾವಳಿವರೆಗೆ ಮಾಡಬೇಕಾದ ಪರಿಹಾರಗಳು

ಚಿನ್ನ-ಬೆಳ್ಳಿ ಖರೀದಿಸುವ ಅಗತ್ಯವಿಲ್ಲ

ಮಕರ ರಾಶಿಯವರು ಚಿನ್ನ-ಬೆಳ್ಳಿ ಖರೀದಿಸುವ ಅಗತ್ಯವಿಲ್ಲ. ಬದಲಿಗೆ ಒಂದು ಸಣ್ಣ ಮಣ್ಣಿನ ಕಳಶ ತಂದು, ಅದಕ್ಕೆ ನೀರು ಮತ್ತು ಗಂಗಾಜಲ ತುಂಬಿಸಿ, 1 ರೂಪಾಯಿ ನಾಣ್ಯ ಹಾಕಿ ದೇವರ ಕೋಣೆಯ ಉತ್ತರ ದಿಕ್ಕಿನಲ್ಲಿ (ಎಡಭಾಗದಲ್ಲಿ) ಇಡಿ. ದೀಪಾವಳಿಯ ನಂತರ ಬರುವ 'ಲಾಭ ಪಂಚಮಿ'ಯಿಂದ ಪ್ರತಿದಿನ ಈ ನೀರಿನಿಂದ ಮನೆಯೊಳಗೆ 2 ಚಮಚ ನೀರನ್ನು ಪ್ರೋಕ್ಷಣೆ ಮಾಡಿದರೆ ಗೃಹಕ್ಲೇಶ ದೂರವಾಗಿ, ಶಾಂತಿ-ನೆಮ್ಮದಿ ಮತ್ತು ಧನವೃದ್ಧಿಯಾಗುತ್ತದೆ.

ನರಕ ಚತುರ್ದಶಿ (ಕಿರು ದೀಪಾವಳಿ)

ಸಂಜೆ ದಕ್ಷಿಣ ದಿಕ್ಕಿನಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಪಿತೃಗಳಿಗಾಗಿ ಹಚ್ಚಿ. ಬಳಿಕ ಅರಳಿ ಮರಕ್ಕೆ ದೀಪ ಹಚ್ಚಿ ನಾರಾಯಣ, ಲಕ್ಷ್ಮಿ, ಹನುಮಂತ, ಶಿವ-ಪಾರ್ವತಿಯರನ್ನು ಮನೆಗೆ ಬರುವಂತೆ ಆಹ್ವಾನಿಸಿ.

ದೀಪಾವಳಿ ದಿನ ಬೆಳಗ್ಗೆ ದಾನ

ದೀಪಾವಳಿ ಅಮಾವಾಸ್ಯೆಯ ದಿನ ಬೆಳಗ್ಗೆ ಮಕರ ರಾಶಿಯವರು ಹಾಲು, ಸಕ್ಕರೆ ಮತ್ತು ಅಕ್ಕಿಯನ್ನು ದಾನ ಮಾಡಬೇಕು ಹಾಗೂ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಬೇಕು.

ಅತಿ ಮುಖ್ಯ ಸೀಕ್ರೆಟ್: ನಸುಕಿನ 4:30ಕ್ಕೆ ಕುಬೇರನ ಆರಾಧನೆ

ಹೆಚ್ಚಿನ ಜನರು ರಾತ್ರಿ ಪಟಾಕಿ ಹೊಡೆದು ಸುಸ್ತಾಗಿ ಬೆಳಗ್ಗೆ 8-9 ಗಂಟೆಯವರೆಗೂ ನಿದ್ರೆ ಮಾಡುತ್ತಾರೆ. ಆದರೆ ಮಕರ ರಾಶಿಯವರು ದೀಪಾವಳಿಯ ರಾತ್ರಿ 11 ರಿಂದ 1 ಗಂಟೆಯವರೆಗೆ ಮಹಾಲಕ್ಷ್ಮಿಯ ಧ್ಯಾನ ಮಾಡಬೇಕು ಮತ್ತು ಬೆಳಗ್ಗೆ ಸರಿಯಾಗಿ 4:30ಕ್ಕೆ (ಬ್ರಾಹ್ಮೀ ಮುಹೂರ್ತದಲ್ಲಿ) ಎದ್ದು ಕುಬೇರ ದೇವರನ್ನು ಪ್ರಾರ್ಥಿಸಬೇಕು. ಸಾಕ್ಷಾತ್ ಕುಬೇರನೇ ನಿಮ್ಮ ಭಾಗ್ಯದ ಬಾಗಿಲು ತೆರೆದು ಕೋಟಿ ಕೋಟಿ ಸಂಪತ್ತು ಹರಿದುಬರಲು ಇದು ಅತ್ಯುತ್ತಮ ಸಮಯ.

ಹಳೆಯ ಲಕ್ಷ್ಮಿ-ಗಣೇಶನ ಮೂರ್ತಿ ಎಸೆಯಬೇಡಿ

ದೀಪಾವಳಿ ಬಂದಾಗ ಹಳೆಯ ಲಕ್ಷ್ಮಿ-ಗಣೇಶನ ಮೂರ್ತಿ ಅಥವಾ ಫೋಟೋಗಳನ್ನು ನದಿ, ಮರದ ಕೆಳಗೆ ಅಥವಾ ಕಸದಂತೆ ಬಿಸಾಕಿ ಹೊಸ ಮೂರ್ತಿ ತರುವ ಸಂಪ್ರದಾಯವನ್ನು ಗುರುಗಳು ತೀವ್ರವಾಗಿ ವಿರೋಧಿಸಿದ್ದಾರೆ.

"ವರ್ಷವಿಡೀ ಪೂಜಿಸಿದ ದೇವರನ್ನು ಹೀಗೆ ಬೀದಿಗೆ ಎಸೆಯುವುದು ದೇವರಿಗೆ ಮಾಡುವ ಘೋರ ಅಪಮಾನ. ಹಳೆಯ ಮೂರ್ತಿಯನ್ನೇ ಗಂಗಾಜಲದಿಂದ ಶುದ್ಧಗೊಳಿಸಿ, ಬಟ್ಟೆಯಿಂದ ಒರೆಸಿ ಮತ್ತೆ ಪೂಜೆ ಮಾಡಿ. ಆಡಂಬರದ ದುಬಾರಿ ವಸ್ತುಗಳಿಗಿಂತ ಭಕ್ತಿ ಮುಖ್ಯ" ಎಂದು ಕರೆ ನೀಡಿದ್ದಾರೆ.

ದೀಪಾವಳಿ ನಂತರ ಕಾದಿದೆ ದೊಡ್ಡ ಸಂಕಷ್ಟ!

ನವೆಂಬರ್ 15-17ರ ಸೂರ್ಯ ಮತ್ತು ಮಂಗಳನ ಸಂಚಾರದ ನಂತರ ಮಕರ ರಾಶಿಯವರಿಗೆ ಕೆಲವು ಗಂಭೀರ ಸವಾಲುಗಳು ಎದುರಾಗಲಿವೆ.

ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ (Confusion)
ಸರಿಯಾದ ದಾರಿ ಯಾವುದು ಎಂದು ತಿಳಿಯದೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಸಾಲದ ಸುಳಿ (Debt Trap)
ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುವ ಅಪಾಯವಿದೆ! ಹಣಕಾಸಿನ ವಿಚಾರದಲ್ಲಿ ಅತಿಯಾದ ಜಾಗರೂಕತೆ ಇರಲಿ.

ಅಪಘಾತ & ಶಾರ್ಟ್ ಸರ್ಕ್ಯೂಟ್ ಭೀತಿ
ವಿದ್ಯುತ್ ಉಪಕರಣಗಳು, ಶಾರ್ಟ್ ಸರ್ಕ್ಯೂಟ್ ಹಾಗೂ ಹರಿತವಾದ ವಸ್ತುಗಳಿಂದ ಗಾಯವಾಗುವ ಲಕ್ಷಣಗಳಿರುವುದರಿಂದ ಎಚ್ಚರ ಅಗತ್ಯ.

ತಾಯಿಯ ಆರೋಗ್ಯ
ನವೆಂಬರ್ 17ರ ನಂತರ ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಆಹಾರ ಪಥ್ಯ
ಡಿಸೆಂಬರ್ 15 ರವರೆಗೆ ಕಡಲೆಬೇಳೆ, ಕಡಲೆಹಿಟ್ಟು (ಬೇಸನ್), ಪಪ್ಪಾಯಿ ಹಾಗೂ ಬಾಳೆಹಣ್ಣು ತಿನ್ನುವುದನ್ನು ತ್ಯಜಿಸಿದರೆ ನಿಮ್ಮ ಶರೀರದ ಚಕ್ರಗಳು ಸಮತೋಲನದಲ್ಲಿರುತ್ತವೆ.

PREV
Read more Articles on
click me!

Recommended Stories

ಹನುಮಂತ ಬ್ರಹ್ಮಚಾರಿಯಾಗಿದ್ದರೂ ಮಕರಧ್ವಜ ಅವರ ಮಗನಾಗಿದ್ದು ಹೇಗೆ? ಈ ಪೌರಾಣಿಕ ರಹಸ್ಯ ತಿಳಿಯಿರಿ
Vastu Tips: ಈ 5 ಪವಿತ್ರ ವಸ್ತುಗಳನ್ನು ನೆಲದ ಮೇಲೆ ಇಡಲೇಬೇಡಿ! ಮನೆಯಲ್ಲಿ ದಟ್ಟ ದಾರಿದ್ರ್ಯ ಕಾಡುತ್ತೆ!