ಈ ರಾಶಿಗೆ ಆರಂಭವಾಗಿದೆ ಶುಭದ ದಿನ

By Web DeskFirst Published 5, Sep 2018, 7:00 AM IST
Highlights

ಈ ರಾಶಿಗೆ ಆರಂಭವಾಗಿದೆ ಶುಭದ ದಿನ, ಇನ್ನುಳಿದ ರಾಶಿಗಳ ಫಲಾ ಫಲ ಹೇಗಿದೆ. ?

ಮೇಷ
ಪ್ರವಾಸ ಹೋಗುವ ಅವಕಾಶವು ಹೆಚ್ಚಾಗಿದೆ.
ಕೆಲಸದ ಒತ್ತಡದಿಂದ ಅದು ಸಾಧ್ಯವಾಗದು.
ಈ ಬಾರಿ ಹೋಗದಿದ್ದರೂ ತೊಂದರೆ ಏನಿಲ್ಲ.

ವೃಷಭ
ಹೊಟ್ಟೆ ಕೆಡುವ ಸಂಭವವಿದೆ. ನಿಮ್ಮದಲ್ಲದ
ತಪ್ಪಿಗೆ ನೀವು ಗುರಿಯಾಗಲಿದ್ದೀರಿ. ಅದು
ನಿಮ್ಮ ನಡವಳಿಕೆಗಳಿಗೇನು ಕುಂದು ತರದು.

ಮಿಥುನ
ದೀರ್ಘಕಾಲದ ಸಮಸ್ಯೆಗಳು ಹಂತ ಹಂತ
ವಾಗಿ ಪರಿಹಾರವಾಗಲಿದೆ. ಈ ದಿನ ನಿಮ್ಮ
ಫಲಾಫಲಗಳು ನಿಮಗೆ ಪೂರಕವಾಗಿವೆ.

ಕಟಕ
ಹತ್ತಿರದ ಸಂಬಂಧಿಗಳನ್ನು ಆಹ್ವಾನಿಸಲಿದ್ದೀರಿ.
ಹಲವು ದಿನಗಳಿಂದ ಆಗಬೇಕಿದ್ದ ಕಾರ್ಯವು
ಈಗ ಆಗಿದೆ. ಅದರಿಂದ ಒಳಿತೂ ಆಗಲಿದೆ.

ಸಿಂಹ
ಸಣ್ಣ ಕಚೇರಿಯಲ್ಲಿ ಕೆಲಸ ಮಾಡುವವರಿಗೂ
ದೊಡ್ಡದಾದ ಹೆಸರು ಬರುವ ದಿನವಿದು.
ನಿಮ್ಮ ಕಾರ್ಯದಕ್ಷತೆಯೇ ನಿಮಗೆ ಶ್ರೀರಕ್ಷೆ

ಕನ್ಯಾ
ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.
‘ಆರೋಗ್ಯವೇ ಭಾಗ್ಯ’ ಎನ್ನುವ ಮಾತನ್ನು
ನೆನಪಿಡಿ. ದುಡ್ಡಿನ ಹಿಂದೆ ಎಂದೂ ಬೀಳದಿರಿ.

ತುಲಾ
ಬೇಡದ ವಸ್ತುಗಳನ್ನು ಖರೀದಿಸಲು ಇದು
ಸೂಕ್ತ ಸಮಯವಲ್ಲ. ಮೊದಲು ನಿಮ್ಮ ಹಣದ
 ಮುಗ್ಗಟ್ಟನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.

ವೃಶ್ಚಿಕ
ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಭಡ್ತಿ
ದೊರೆಯುವುದಲ್ಲದೇ ಉತ್ತಮ ಆದಾಯವೂ
ಸಿಗಲಿದೆ. ಆದರೆ ಸಾಕಷ್ಟು ಶ್ರಮ ಪಡಬೇಕಿದೆ. 

ಧನುಸ್ಸು
ನಿಮಗೊಂದು ಶುಭ ಸುದ್ದಿ ಬರಲಿದೆ. ಅದು
ನಿಮ್ಮನ್ನು ಎಚ್ಚರಗೊಳಿಸಲಿದೆ. ನಿಮ್ಮ ಮನಸ್ಸಿಗೆ
ಖುಷಿಯ ತರಲಿದೆ. ಖರ್ಚೂ ಹೆಚ್ಚಾಗಲಿದೆ.

ಮಕರ
ಕುಟುಂಬದವರೊಂದಿಗೆ ಹೆಚ್ಚು ಸಮಯ
ಕಳೆಯುವಿರಿ. ಕಚೇರಿಯ ಕೆಲಸಗಳಲ್ಲಿ ಪ್ರಗತಿ
ಕಾಣುವಿರಿ. ಪ್ರಶಂಸೆಗೂ ಪಾತ್ರರಾಗುವಿರಿ.

ಕುಂಭ
ವ್ಯಾಪಾರಸ್ಥರಿಗೆ ಒಳ್ಳೆಯ ಸಮಯ. ಆದಷ್ಟು
ಬಡವರಿಗೆ ದಾನ ಮಾಡುವ ಕಾರ್ಯಗಳಲ್ಲಿ
ಮುಂದಾಗಿರಿ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ.

ಮೀನ 
ವಾಸ್ತುದೋಷದ ಬಗ್ಗೆ ಈಗ ಚಿಂತೆ ಮಾಡದಿರಿ.
ಸುಖಾಸುಮ್ಮನೆ ಖರ್ಚು ಬೇಡ. ಸಾಧ್ಯವಾದರೆ
ಅನ್ನದಾನವನ್ನೂ ಮಾಡಲು ಪ್ರಯತ್ನಿಸಿರಿ.

Last Updated 9, Sep 2018, 9:37 PM IST