ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ಯಾಕೆ; ಸೂಕ್ತ ವೈಜ್ಞಾನಿಕ ಮಾಹಿತಿ ಇಲ್ಲಿದೆ ನೋಡಿ!

By Shriram Bhat  |  First Published Jun 9, 2024, 5:27 PM IST

ನಮ್ಮ ದೇಹದ ಮೆಕ್ಯಾನಿಸಂ ಹೇಗಿದೆ ಎಂದರೆ, ನಾವು ಮಲಗಿದಾಗ ಸಹಜವಾಗಿಯೇ ರಕ್ತ ಪರಿಚಲನೆ ಒತ್ತಡ ಕಮ್ಮಿ ಅಗುತ್ತದೆ. ನಾವು ನಿಂತಿರುವಾಗ ಅಥವಾ ಓಡಾಡುತ್ತಿರುವಾಗ ನಮ್ಮ ರಕ್ತದ ಒತ್ತಡ ಜಾಸ್ತಿ ಆಗಿರುತ್ತದೆ. 


ಉತ್ತರ ದಿಕ್ಕಿಗೆ (North Direction) ತಲೆ ಹಾಕಿ ಮಲಗಬೇಡಿ ಎಂದು ಹೇಳಿರುವುದನ್ನು, ಹೇಳುವುದನ್ನು ನಾವೆಲ್ಲರೂ ಸಾಕಷ್ಟು ಬಾರಿ ಕೇಳಿರುತ್ತೇವೆ. ನಮ್ಮ ಸನಾತನ ಧರ್ಮದಲ್ಲಿ ಆ ಬಗ್ಗೆ ಪ್ರತಿ ಮನೆಯಲ್ಲಿ ಹೇಳುವ ಮಾತಿನಿಂದ ಬಹುತೇಕ ಯಾರೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದಿಲ್ಲ. ಆದರೆ, ತಾವು ವೈಜ್ಞಾನಿಕ ಮನೋಭಾವದವರು, ವಿಜ್ಞಾನ ಹೇಳಿದರೆ ಮಾತ್ರ ನಂಬುವುದು, ವೈಜ್ಞಾನಿಕವಾಗಿ ನಮಗೆ ಅರ್ಥವಾಗುವಂತೆ ಹೇಳಿದರೆ ಮಾತ್ರ ಕೇಳುವುದು ಎನ್ನುವವರೂ ಇದ್ದಾರೆ. ಯಾವುದೋ ಎನ್ನಬಹುದಾದ ಪುರಾಣ-ಕಥೆಗಳಲ್ಲಿ ಹೇಳಿದ್ದು ಬೇಡ ಎನ್ನವವರಿಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯಾಕೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎಂಬುವುದಕ್ಕೆ ಸಕಾರಣಗಳು ಇಲ್ಲಿವೆ, ನೋಡಿ.. 

ನಮ್ಮ ದೇಹದ ಮೆಕ್ಯಾನಿಸಂ ಹೇಗಿದೆ ಎಂದರೆ, ನಾವು ಮಲಗಿದಾಗ ಸಹಜವಾಗಿಯೇ ರಕ್ತ ಪರಿಚಲನೆ ಒತ್ತಡ ಕಮ್ಮಿ ಅಗುತ್ತದೆ. ನಾವು ನಿಂತಿರುವಾಗ ಅಥವಾ ಓಡಾಡುತ್ತಿರುವಾಗ ನಮ್ಮ ರಕ್ತದ ಒತ್ತಡ ಜಾಸ್ತಿ ಆಗಿರುತ್ತದೆ. ಹಾಗೇ, ಭೂಮಿ ಒಂದು ಅಯಸ್ಕಾಂತದಂತೆಯೇ ಇದೆ. ಇದರಲ್ಲಿ ದಕ್ಷಿಣ ಧ್ರುವ (South Pole) ನೆಗಟಿವ್ ಹಾಗೂ ಉತ್ತರ ಧ್ರುವ (North Pole) ಪೊಸೆಟಿವ್ ಎನರ್ಜಿ ಹೊಂದಿರುತ್ತವೆ. ಸಹಜವಾಗಿಯೇ ಎನರ್ಜಿ ವೇವ್‌ಗಳು ದಕ್ಷಿಣದಿಂದ ಉತ್ತರಕ್ಕೆ ಒಂದು ನಿರ್ಧಿಷ್ಟ ವೇಗದಲ್ಲಿ ಚಲಿಸುತ್ತ ಇರುತ್ತವೆ. 

Tap to resize

Latest Videos

ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ; ಸಮಾಜಕ್ಕೆ ಚಂದನ್-ನಿವೇದಿತಾ ಕೊಟ್ಟ ಸಂದೇಶವೇನು?

ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದಾಗ, ಸಹಜವಾಗಿ ದೇಹದ ಮೆಕ್ಯಾನಿಸಂಗೆ ಪೂರಕವಾಗಿ ತಲೆಯ ಭಾಗಕ್ಕೆ, ಅಂದರೆ ಮೆದುಳಿನ ಭಾಗಕ್ಕೆ ರಕ್ತದ ಪೂರೈಕೆ ಕಡಿಮೆ ಆಗಬೇಕು. ಆದರೆ, ಈ ಅಯಸ್ಕಾಂತೀಯ ಎನರ್ಜಿ (ಮ್ಯಾಗ್ನೆಟಿಕ್ ಪವರ್) ದಕ್ಷಿಣದಿಂದ ಉತ್ತರಕ್ಕೆ ಪಾಸ್ ಆಗುವುದರಿಂದ  ತಲೆಗೆ, ಅಂದರೆ ಮೆದುಳಿಗೆ ರಕ್ತದ ಪೂರೈಕೆ ಹೆಚ್ಚಾಗುತ್ತದೆ. ಆಗ ಬಿಪಿ ಜಾಸ್ತಿ ಇರುವವರಲ್ಲಿ ಅಥವಾ ರಕ್ತನಾಳದ ಕಾಯಿಲೆ ಇರುವವರಲ್ಲಿ ರಕ್ತದ ಪ್ರಮಾಣ, ಅಂದರೆ ಒತ್ತಡ ಜಾಸ್ತಿಯಾಗಿ ರಕ್ತನಾಳು ಒಡೆದು ರಕ್ತಸ್ರಾವವಾಗಬಹುದು. 

ಜೂನ್ 12 ರ ನಂತರ ಈ ರಾಶಿಗೆ ಮುಟ್ಟಿದ್ದೆಲ್ಲ ಚಿನ್ನ, ಶುಕ್ರ ಸಂಕ್ರಮದಿಂದ ಜೀವನದಲ್ಲಿ ಬದಲಾವಣೆ..!

ಆಗಬಹುದಾದ ಎರಡನೇ ಸಮಸ್ಯೆ ಏನೆಂದರೆ, ಡಿಸ್ಟರ್ಬ್ಡ್‌ ಸ್ಲೀಪ್. ಅಂದರೆ, ನಿದ್ದೆ ಸರಿಯಾಗಿ ಆಗುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ನಿದ್ದೆ ಬರಲು ಯಾವಮಟ್ಟಿಗಿನ ರಕ್ತದ ಹರಿವು ಇರಬೇಕೋ ಅದಕ್ಕಿಂತ ಜಾಸ್ತಿ ಆಗಿರುವ ಕಾರಣಕ್ಕೆ ನಿದ್ದೆ ಹಾರಿಹೋಗುತ್ತದೆ. ಅಥವಾ, ನಿದ್ದೆಯ ಪ್ರಮಾಣ, ಕ್ವಾಲಿಟಿ ಎಲ್ಲವೂ ಅಸ್ತವ್ಯಸ್ತ ಆಗುತ್ತದೆ. ಇನ್ನು ಮೂರನೆಯ ಕಾರಣ ಎಂದರೆ, ಕೆಟ್ಟ ಕನಸುಗಳು ಬೀಳುತ್ತವೆ. ಏಕೆಂದರೆ, ಸೌಂಡ್ ಸ್ಲೀಪ್‌ ಇರುವಾಗ, ಅಂದರೆ ಉತ್ತಮ ಕ್ವಾಲಿಟಿ ನಿದ್ದೆ ಇರುವಾಗ ಕನಸುಗಳು ಬೀಳುವುದಿಲ್ಲ. 

ಮಹಿಳೆಯ ಗುಟ್ಟು ರಟ್ಟು ಮಾಡಿದ್ದ ಚಾಣಕ್ಯ; ಸ್ತ್ರೀ ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ!

ಕನಸುಗಳು ಬೀಳುವುದಿಲ್ಲ ಎನ್ನುವುದಕ್ಕಿಂತ ನಮಗೆ ಅದರ ಅರಿವು ಆಗುವುದು. ಆ ಬಗ್ಗೆ ಯೋಚನೆ ಆಗುವುದು ಇದ್ಯಾವುದೂ ಇರುವುದಿಲ್ಲ. ಹೀಗಾಗಿ, ಮರುದಿನ ಎದ್ದಾಗ ನಾವು ಹಳೆಯ ಕನಸುಗಳ ಜತೆ ಮನಸ್ಸಿನ ಮೂಲಕ ಕನೆಕ್ಟ್ ಆಗದೇ ಫ್ರೆಶ್ ಫೀಲ್ಅನುಭವಿಸುತ್ತೇವೆ. ಹೀಗಾಗಿ ಉತ್ತರಕ್ಕೆ ತಲೆಹಾಕಿ ಮಲಗಬಾರದು ಎಂಬುದು ವೈಜ್ಞಾನಿಕ ಹಿನ್ನೆಲೆಯಲ್ಲಿ ಕೂಡ ದೃಢಪಟ್ಟಿದೆ. ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ಸ್ಟ್ರೋಕ್, ನಿದ್ರೆಯಲ್ಲಿ ತೊಂದರೆ ಹಾಗು ಕೆಟ್ಟ ಕನಸುಗಳು ಬಾಧಿಸುತ್ತವೆ ಎಂದು ತಿಳಿದಂತಾಯಿತು. 

ಶಂಕರ್‌ ಗುರು ಮಾಡಿದ್ದ ಮ್ಯಾಜಿಕ್ ಗೊತ್ತಾ? ಡಾ ರಾಜ್‌ಕುಮಾರ್ ತ್ರಿಬಲ್ ರೋಲ್ ಆಕ್ಟಿಂಗ್ ಹೇಗಿದೆ?

ಹಾಗಿದ್ದರೆ ಉತ್ತರ ಹೊರತುಪಡಿಸಿ ಯಾವ ದಿಕ್ಕಿಗೆ ಮಲಗಬೇಕು? ಒಂದು ದಕ್ಷಿಣ. ಹೌದು, ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಮೇಲೆ ಹೇಳಿದ ಎಲ್ಲಾ ಕಾರಣಗಳಿಗೂ ಇದು ವಿರುದ್ಧವಾಗಿದ್ದು ಎಲ್ಲ ಸಮಸ್ಯೆಗಳಿಂದ ಬಚಾವಾಗಬಹುದು. ಆದರೆ, ಮಲಗಿರುವಾಗ ತಲೆ ಪೂರ್ವ ದಿಕ್ಕಿಗೆ ಇದ್ದರೆ ತುಂಬಾ ಒಳ್ಳೆಯದು ಎನ್ನುತ್ತಾರೆ. ಕಾರಣ, ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದರಿಂದ ಮುಂಜಾನೆ, ಅಂದರೆ ಅರ್ಲಿ ಮಾರ್ನಿಂಗ್ ಪೊಸೆಟಿವ್ ಎನರ್ಜಿ ಅಥವಾ ಏಳಲು ಪ್ರೇರಕವಾದ ಶಕ್ತಿ ನಮಗೆ ದೊರೆಯುತ್ತದೆ. ಹೀಗಾಗಿ ಪೂರ್ವಕ್ಕೆ ತಲೆಹಾಕಿ ಮಲಗುವುದು ದಿ ಬೆಸ್ಟ್. 

click me!