ದಿನ ಭವಿಷ್ಯ: ಮನೆಯಲ್ಲಿ ನೆಮ್ಮದಿ ಹೆಚ್ಚಾಗಲಿದೆ, ಆದರೆ ತಪ್ಪಿಯೂ ಈ ಕೆಲಸ ಮಾಡದಿರಿ

Published : Apr 10, 2019, 07:24 AM ISTUpdated : Apr 10, 2019, 08:39 AM IST
ದಿನ ಭವಿಷ್ಯ: ಮನೆಯಲ್ಲಿ ನೆಮ್ಮದಿ ಹೆಚ್ಚಾಗಲಿದೆ, ಆದರೆ ತಪ್ಪಿಯೂ ಈ ಕೆಲಸ ಮಾಡದಿರಿ

ಸಾರಾಂಶ

ಇಂದು ನಿಮ್ಮ ರಾಶಿ ಫಲ ಹೇಗಿದೆ? ಯಾವ ರಾಶಿ ಯಾವ ಫಲ? ಯಾರಿಗೆ ಶುಭ? ಇಲ್ಲಿದೆ ನೋಡಿ ಇಂದಿನ ರಾಶಿ ಭವಿಷ್ಯ

ಮೇಷ: ಅತಿಯಾಗಿ ಮಾತನಾಡುವುದು ಒಳ್ಳೆಯದ್ದಲ್ಲ. ನಿಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಹೆಚ್ಚು ಮೌನವಾಗಿ ಇದ್ದು ಬಿಡಿ. ದಿನಪೂರ್ತಿ ಕೆಲಸ.

ವೃಷಭ: ಆರಾಮವಾಗಿ ಇರುವುದಕ್ಕಾಗಿ ಹೆಚ್ಚು ಇಷ್ಟಪಡುವಿರಿ. ಸ್ನೇಹಿತರಿಗೆ ಹಣಕಾಸಿನ ನೆರವು ನೀಡಲಿದ್ದೀರಿ. ಕೆಲಸದಲ್ಲಿ ತಾಳ್ಮೆ ಇರಲಿ.

ಮಿಥುನ: ಜೇಬಿನಲ್ಲಿ ಇರುವ ಹಣವನ್ನು ಲೆಕ್ಕಾಚಾರ ಮಾಡಿಕೊಂಡು ಖರ್ಚು ಮಾಡಲು ಮುಂದಾಗಿ. ಮನೆಯಲ್ಲಿ ನೆಮ್ಮದಿ ಹೆಚ್ಚಲಿದೆ.

ಕಟಕ: ಗುರುಗಳು ತೋರಿದ ದಾರಿಯಲ್ಲಿ ಮುಂದೆ ಸಾಗಲಿದ್ದೀರಿ. ನಿಮ್ಮ ಹಿತವನ್ನು ಬಯಸುವವರ ಸಂಖ್ಯೆ ಹೆಚ್ಚಾಗಲಿದೆ. ಶುಭ ಫಲ.

ಸಿಂಹ: ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮಿಂದಲೇ ಎಲ್ಲವೂ ಆಗುತ್ತಿದೆ ಎನ್ನುವ ಅಹಂಕಾರವೂ ಬೇಡ. ಮಾತಿನಲ್ಲಿ ವಿನಯ ಹೆಚ್ಚಾಗಲಿದೆ.

ಕನ್ಯಾ: ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಆಲಸ್ಯ ಕಡಿಮೆಯಾಗಲಿದೆ. ಶುಭ ಫಲ ದೊರೆಯಲಿದೆ

ತುಲಾ: ನಿಮ್ಮದ್ದಲ್ಲದ ಕಾರ್ಯಗಳಲ್ಲಿ ನೀವು ಮೂಗು ತೂರಿಸುವುದು ಬೇಡ. ಚಿಕ್ಕ ಮಕ್ಕಳ ಬಗ್ಗೆ ತುಲಾ ಮಮಕಾರ ಹೆಚ್ಚಾಗಲಿದೆ. ದೂರ ಪ್ರಯಾಣ.

ವೃಶ್ಚಿಕ: ಬಂಧುಗಳ ಆಗಮನದಿಂದ ಮನೆಯಲ್ಲಿ ಖರ್ಚು ಹೆಚ್ಚಾಗಲಿದೆ. ಮಕ್ಕಳೊಂದಿಗೆ ಸಂಜೆ ಸಮಯವನ್ನು ಕಳೆಯಲಿದ್ದೀರಿ. ಶುಭಫಲ.

ಧನುಸ್ಸು: ಮನೆಗೆ ಒಳ್ಳೆಯ ಮಗನಾಗಿ ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳಲಿದ್ದೀರಿ. ಆದಾಯದಲ್ಲಿ ಏರಿಕೆ ಕಂಡುಬರಲಿ

ಮಕರ: ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಮುನ್ನಡೆಯುವ ಗುಣವೂ ಇರಬೇಕು. ಚಿಂತೆ ಇಲ್ಲದೇ ದಿನ ಕಳೆಯುವಿರಿ.

ಕುಂಭ: ಮತ್ತೊಬ್ಬರಿಂದ ಹೇಳಿಸಿಕೊಂಡು ಕೆಲಸ ಮಾಡದಿರಿ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ಮಾಡಿ ಮುಗಿಸಲಿದ್ದೀರಿ

ಮೀನ: ನಿಮ್ಮ ಮೇಲೆ ನಿಮ್ಮ ಮನೆಯವರಿಗೆ ಹೆಚ್ಚು ನಂಬಿಕೆ ಉಂಟಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವ ವಹಿಸುವಿರಿ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ