ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೊಂದು ತುಳಸಿ ಗಿಡ ಬೆಳೆಸಿರುತ್ತಾರೆ. ಹಿಷ್ಣುವಿಗೆ ತುಳಸಿ ಶ್ರೇಷ್ಠ. ಆದರೆ, ತುಳಸಿಯನ್ನು ಕೇವಲ ಧಾರ್ಮಿಕ ಕಾರಣಕ್ಕಷ್ಟೇ ಮನೆಯ ಮುಂದೆ ಬೆಳೆಸಬೇಕಿಲ್ಲ. ಅದಕ್ಕೆ ವೈದ್ಯಕೀಯ ಹಾಗೂ ವೈಜ್ಞಾನಿಕ ಕಾರಣವೂ ಇದೆ.
- ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಪ್ರತಿದಿನ ಒಂದೊಂದು ತುಳಸಿ ಎಲೆ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ತುಳಸಿ ಅತ್ಯುತ್ತಮ ಆ್ಯಂಟಿಬಯಾಟಿಕ್ ಕೂಡ ಹೌದು. ಅದು ದೇಹಕ್ಕೆ ತಗಲುವ ಅನೇಕ ವಿಧದ ಸೋಂಕುಗಳನ್ನು ನಿವಾರಿಸುತ್ತದೆ.
- ತುಳಸಿ ಎಲೆಯನ್ನು ಪ್ರತಿದಿನ ತಿನ್ನುವವರು ಹೆಚ್ಚು ಕಾಲ ಬದುಕುತ್ತಾರೆ ಮತ್ತು ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆ ಇದೆ.
- ಆಯುರ್ವೇದದ ಎಷ್ಟೋ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ಅನೇಕ ವಿಧದ ಮನೆ ಔಷಧಗಳಿಗೂ ತುಳಸಿ ಬೇಕೇ ಬೇಕು. ಹಾಗಾಗಿ ಸಣ್ಣಪುಟ್ಟ ಕಾಯಿಲೆ ಕಸಾಲೆಗಳಿಗೆ ಮನೆಮದ್ದು ಮಾಡುವಾಗ ಸುಲಭವಾಗಿ ಕೈಗೆ ಸಿಗಲಿ ಎಂಬ ಕಾರಣಕ್ಕೆ ಪ್ರತಿ ಮನೆಯಲ್ಲೂ ಹಿಂದಿನ ಕಾಲದಲ್ಲಿ ಒಂದಷ್ಟು ತುಳಸಿ ಗಿಡಗಳನ್ನು ಬೆಳೆಸಿರುತ್ತಿದ್ದರು.
- ತುಳಸಿ ಗಿಡದ ಸುತ್ತಮುತ್ತಲಿನ ಗಾಳಿಯಲ್ಲೂ ಔಷಧೀಯ ಗುಣಗಳಿರುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಅದಕ್ಕೆ ಪ್ರದಕ್ಷಿಣೆ ಹಾಕುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.
- ತುಳಸಿಯ ಪರಿಮಳ ಇದ್ದಲ್ಲಿ ಸೊಳ್ಳೆಗಳು ಹಾಗೂ ಇತರ ಕ್ರಿಮಿ ಕೀಟಗಳು ಕಡಿಮೆ ಸುಳಿಯುತ್ತವೆ.
ಲಕ್ಷ್ಮೀ ಕೃಪೆಗಾಗಿ ತುಳಿಸಿ ಗಿಡ ಇಲ್ಲಿ ನೆಡಿ...
- ತುಳಸಿ ಗಿಡದಿಂದ ಓಝೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ ಎನ್ನಲಾಗಿದೆ. ಓಝೋನ್ ಸ್ಥಿರವಲ್ಲದ ಅನಿಲ. ಗಿಡದಿಂದ ಹೊರಬಂದ ಕೂಡಲೇ ಒಂದು ಆಕ್ಸಿಜನ್ ಅಣು ಹಾಗೂ ಒಂದು ನೇಸಂಟ್ ಆಕ್ಸಿಜನ್ ಪರಮಾಣು ರೂಪುಗೊಳ್ಳುತ್ತದೆ. ನೇಸಂಟ್ ಆಕ್ಸಿಜನ್ ಅತ್ಯಂತ ಶಕ್ತಿಶಾಲಿಯಾದದ್ದು. ತನ್ನ ಸನಿಹಕ್ಕೆ ಬರುವ ಬ್ಯಾಕ್ಟೀರಿಯಗಳನ್ನು ಕೊಲ್ಲಬಲ್ಲಂತಹದ್ದು. ಆದರೆ ನೇಸಂಟ್ ಆಕ್ಸಿಜನ್ ಹೆಚ್ಚು ಕಾಲ ಸ್ವರೂಪದಲ್ಲಿರುವುದಿಲ್ಲ. ಮತ್ತೊಂದು ನೇಸಂಟ್ ಆಕ್ಸಿಜನ್ನನ್ನು ಕೂಡಿ ಆಕ್ಸಿಜನ್ ಪರಮಾಣು ಆಗುತ್ತದೆ. ತುಳಸಿಯ ಸುತ್ತಮುತ್ತಲು ಉತ್ತಮವಾದ ಆರೋಗ್ಯಕರವಾದ ಗಾಳಿ ಇರುತ್ತದೆ. ತುಳಸಿಗೆ ಪೂಜಿಸುವಾಗ ನಮಗೆ ತಿಳಿಯದೇ ಈ ಗಾಳಿಯನ್ನು ಸೇವಿಸುತ್ತೇವೆ