ಈ ರಾಶಿಯವರಿಗೆ ಭಾರೀ ಲಾಭ, ಎಲ್ಲಾ ಆತಂಕಗಳಿಗೆ ತೆರೆ

Published : Jun 06, 2019, 07:06 AM IST
ಈ ರಾಶಿಯವರಿಗೆ ಭಾರೀ ಲಾಭ, ಎಲ್ಲಾ ಆತಂಕಗಳಿಗೆ ತೆರೆ

ಸಾರಾಂಶ

ಯಾವ ರಾಶಿಗೆ ಯಾವ ಫಲ? ಇಲ್ಲಿದೆ ಇಂದಿನ ಭವಿಷ್ಯ

ಮೇಷ: ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮನೆಯ ತುಂಬಾ ಸಂತೋಷದ ವಾತಾವರಣ ಏರ್ಪಡಲಿದೆ. ಹೊಸ ಕಾರ್ಯಕ್ಕೆ ಕೈ ಹಾಕುವಿರಿ

ವೃಷಭ: ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಚರ್ಚಿಸಿ. ನಿಮ್ಮ ಮನೋಬಲವೇ ನಿಮ್ಮನ್ನು ಮುನ್ನಡೆಸಲಿದೆ

ಮಿಥುನ: ಮಿಥ್ಯಾರೋಪಗಳಿಂದ ದೂರವಾಗಲಿದ್ದೀರಿ. ನಿಮ್ಮ ಕೆಲಸಕ್ಕೆ ದೊಡ್ಡ ಮಟ್ಟದ ಮೆಚ್ಚುಗೆಯೂ ದೊರೆಯಲಿದೆ. ಆರೋಗ್ಯದಲ್ಲಿ ಸ್ಥಿರತೆ.

ಕಟಕ: ಹೆಚ್ಚು ಆದಾಯ ನಿರೀಕ್ಷೆ ಮಾಡಿದರೂ ಅದು ಸಾಕಾರವಾಗುವುದಿಲ್ಲ. ಸ್ವಂತ ವ್ಯಾಪಾರ ಮಾಡುವವರಿಗೆ ಖರ್ಚು ಹೆಚ್ಚಾಗುವುದು

ಸಿಂಹ: ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದೆ. ಹಣ ಕೈ ಸೇರಲಿದೆ.

ಕನ್ಯಾ: ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹೊಸ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಾತೆ ಇಂದು ನಿಮಗೆ ಬಂಡವಾಳ.

ತುಲಾ: ನಿಮಗೆ ಸಂಬಂಧಪಡದ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ. ನಯ ವಂಚಕರಿಂದ ದೂರವಿದ್ದರೆ ಒಳಿತು

ವೃಶ್ಚಿಕ: ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಇಂದು ಒಳ್ಳೆಯ ಲಾಭ ದೊರೆಯಲಿದೆ. ಇಷ್ಟವಾದ ವ್ಯಕ್ತಿಗಳೊಂದಿಗೆ ಇಡೀ ದಿನ ಕಳೆಯಲಿದ್ದೀರಿ

ಧನುಸ್ಸು: ಸಂಜೆ ವೇಳೆಗೆ ನಿಮ್ಮ ಎಲ್ಲಾ ಆತಂಕಗಳಿಗೂ ತೆರೆ ಬೀಳಲಿದೆ. ಹಣದ ಮೂಲಕವೇ ಎಲ್ಲವನ್ನೂ ಅಳತೆ ಮಾಡಲು ಹೋಗಬೇಡಿ. ಶುಭ ಫಲ.

ಮಕರ: ಅತಿಯಾದರೆ ಅಮೃತವೂ ವಿಷವಾಗುತ್ತದೆ. ಇದು ಇಂದು ನಿಮ್ಮ ಜೀವನಕ್ಕೂ ಅನ್ವಯ ವಾಗುತ್ತದೆ. ಮೌನವಾಗಿ ಇದ್ದು ಬಿಡಿ

ಕುಂಭ: ನಿಮ್ಮ ಸ್ನೇಹಿತರ ಬಂಡವಾಳ ಏನು ಎನ್ನುವುದು ಇಂದು ನಿಮಗೆ ತಿಳಿಯಲಿದೆ. ಮತ್ತೊಬ್ಬರ ಸಂತೋಷಕ್ಕೆ ನಿಮ್ಮಿಂದ ಹಾನಿಯಾಗದಿರಲಿ.

ಮೀನ: ನೀವೇ ಪಂಡಿತರು ಎಂಬಂತೆ ಆಡುವುದು ಬೇಡ. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ಮೀನ ತಿಳಿದುಕೊಳ್ಳಿ. ನೆಮ್ಮದಿಗಾಗಿ ಪರಿತಪಿಸುವಿರಿ.

PREV
click me!

Recommended Stories

ಸಂಕ್ರಾಂತಿ ಹಬ್ಬದ ಸಂಭ್ರಮ, ಕಾಡು ಮೊಲಕ್ಕೆ ಕಿವಿ ಚುಚ್ಚಿ ಚಿನ್ನದ ಓಲೆ ಹಾಕಿ, ಪೂಜಿಸಿ ಮತ್ತೆ ಕಾಡಿಗೆ ಬಿಟ್ಟ ಜನ!
ಜನವರಿ 19 ರಿಂದ 25 ರವರೆಗೆ ಲಕ್ಷ್ಮಿ ನಾರಾಯಣ ರಾಜ ಯೋಗ, 5 ರಾಶಿಗೆ ಶ್ರೀಮಂತಿಕೆ, ಅದೃಷ್ಟ