ಆರಂಭದಲ್ಲೇ ಶುಭ ಸುದ್ದಿ, ಆರೋಗ್ಯ ವೃದ್ಧಿ: ಹೀಗಿದೆ ಇಂದಿನ ಭವಿಷ್ಯ

Published : Jun 26, 2019, 07:22 AM ISTUpdated : Jun 26, 2019, 07:24 AM IST
ಆರಂಭದಲ್ಲೇ ಶುಭ ಸುದ್ದಿ, ಆರೋಗ್ಯ ವೃದ್ಧಿ: ಹೀಗಿದೆ ಇಂದಿನ ಭವಿಷ್ಯ

ಸಾರಾಂಶ

ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ..?

ಮೇಷ: ನೀವು ಮಾಡಿದ ಯಡವಟ್ಟಿನಿಂದ ಮನೆ ಯವರು ಇಡೀ ದಿನ ಪರಿತಪಿಸಬೇಕಾದೀತು. ನಿಮ್ಮ ಮಾತುಗಳೇ ನಿಮಗೆ ವರವಾಗಲಿವೆ

ವೃಷಭ: ಕಂಡದ್ದನ್ನು ಕಂಡ ಹಾಗೆ ಹೇಳುವಿರಿ. ಹೊಸ ಕೆಲಸ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿ ಕೊಳ್ಳಲಿದ್ದೀರಿ. ಅಧಿಕಾರದ ಆಸೆ ಬೇ

ಮಿಥುನ: ನೀವು ವಾಸ ಮಾಡುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ದೂರದ ಪ್ರಯಾಣ ಸದ್ಯಕ್ಕೆ ಬೇಡ. ಮಿತವ್ಯಯಕ್ಕೆ ಆದ್ಯತೆ ನೀಡುವಿರಿ.

ಕಟಕ: ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತು. ತಂದೆಯ ಪ್ರೋತ್ಸಾಹದ ಫಲವಾಗಿ ಹೊಸ ಕಾರ್ಯ ಕೈಗೂಡುತ್ತದೆ. ಲಾಭದಲ್ಲಿ ಹೆಚ್ಚಳ

ಸಿಂಹ: ಗೆಲ್ಲುತ್ತೇನೆ ಎಂದು ಹೊರಟಾಗ ಸೋಲು ವುದಕ್ಕೂ ಸಿದ್ಧವಿರಬೇಕು. ತಾರತಮ್ಯ ಎಣಿಸುವುದು ಬೇಡ. ಕಾರ್ಯ ಸಿದ್ಧಿಯಾಗಲಿ

ಕನ್ಯಾ: ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನ. ನಿನ್ನೆಯ ಆತಂಕಗಳೆಲ್ಲಾ ದೂರಾಗಲಿವೆ. ಆತುರಕ್ಕೆ ಬಿದ್ದು ನಿರ್ಧಾರ ಮಾಡದಿರಿ.

ತುಲಾ: ನಿಮ್ಮ ಶಕ್ತಿಗೆ ತಕ್ಕಂತಹ ಅವಕಾಶಗಳು ಬರಲಿವೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಬಂಧುಗಳೊಂದಿಗೆ ಮನಸ್ತಾಪ ಉಂಟಾಗಲಿದೆ.

ವೃಶ್ಚಿಕ: ಇಡೀ ದಿನ ಆತ್ಮೀಯರೊಂದಿಗೆ ಕಳೆಯಲಿದ್ದೀರಿ. ನಿಮ್ಮ ಸ್ವಭಾವಕ್ಕೆ ಹೊಂದುವ ಹೊಸ ಸ್ನೇಹಿತರು ದೊರೆಯಲಿದ್ದಾರೆ. ಶುಭಫಲ.

ಧನುಸ್ಸು: ತಂದೆ ತಾಯಿಯ ನಿರೀಕ್ಷೆಯಂತೆ ಕೆಲಸ ಮಾಡಲಿದ್ದೀರಿ. ಸಣ್ಣ ವ್ಯಾಪಾರಿಗಳಿಗೆ ಇದು ಶುಭ ದಿನ. ಅಂದುಕೊಂಡ ಕಾರ್ಯ ಆಗಲಿದೆ.

ಮಕರ: ದಿನದ ಆರಂಭದಲ್ಲಿಯೇ ಶುಭ ಸುದ್ದಿ ಕೇಳಲಿದ್ದೀರಿ. ಸಾಧ್ಯವಾದರೆ ಸಂತೋಷ ಹಂಚಿ. ದುಃಖವನ್ನಲ್ಲ. ಗೆಲುವಿಗೆ ಶ್ರಮ ಬೇಕು.

ಕುಂಭ: ನಡೆಯಬೇಕಾದ ದಾರಿ ಕಠಿಣ ಎಂದು ಸುಮ್ಮನೆ ಕೂರುವುದು ಬೇಡ. ಅನಗತ್ಯವಾದ ವಿಚಾರಗಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ.

ಮೀನ: ಹೊಸ ವಿಚಾರಗಳ ಬಗ್ಗೆ ಚಿಂತನೆ ಮಾಡಲಿದ್ದೀರಿ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರೋಗ್ಯದಲ್ಲಿ ವೃದ್ಧಿ

PREV
click me!

Recommended Stories

ಮೂಕಾಂಬಿಕೆ ದರ್ಶನ ಬಳಿಕ ಪಕ್ಷ ಸ್ಥಾಪಿಸಿ ಸಿಎಂ ಆಗಿದ್ದ ಎಂಜಿಆರ್, AIADMK ಚಿಹ್ನೆಗೂ ಇದೆ ಕೊಲ್ಲೂರು ನಂಟು
ಶಿವಲಿಂಗದ ಜೊತೆ ಸರ್ಪ… ಈ ಕನಸು ಮತ್ತೆ ಮತ್ತೆ ಬಿದ್ದರೆ ಅದಕ್ಕೇನು ಅರ್ಥ?