ಈ ರಾಶಿಯವರಿಗೆ ಲಾಭದ ದಿನ : ಉಳಿದ ರಾಶಿ ಹೇಗಿದೆ..?

Published : Oct 23, 2018, 06:59 AM IST
ಈ ರಾಶಿಯವರಿಗೆ ಲಾಭದ ದಿನ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಈ ರಾಶಿಯವರಿಗೆ ಲಾಭದ ದಿನ : ಉಳಿದ ರಾಶಿ ಹೇಗಿದೆ..?

ಈ ರಾಶಿಯವರಿಗೆ ಲಾಭದ ದಿನ : ಉಳಿದ ರಾಶಿ ಹೇಗಿದೆ..?

ಮೇಷ
ಹೊಸ ಸ್ನೇಹಿತರೊಂದಿಗೆ ಪ್ರವಾಸ
ಕೈಗೊಳ್ಳುವಿರಿ. ಸಮಯಕ್ಕೆ ಸರಿಯಾಗಿ
ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಿ.

ವೃಷಭ
ಎಲ್ಲಾ ಕೆಲಸಗಳನ್ನೂ ಉತ್ಸಾಹದಿಂದ ಮಾಡಿ
ಮುಗಿಸುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ
ಆಸಕ್ತಿ ಹೆಚ್ಚಾಗಲಿದೆ. ಲಾಭವಾಗಲಿದೆ.

ಮಿಥುನ
ಆರೋಗ್ಯದಲ್ಲಿ ಕೊಂಚ ಏರುಪೇರು.
ಮನಸ್ಸಿನ ಭಾರ ಕಡಿಮೆಯಾಗಲಿದೆ.
ಸಂಬಂಧಿಗಳ ಸಹಾಯದಿಂದ ಕಾರ್ಯಸಿದ್ಧಿ.

ಕಟಕ
ಆತ್ಮೀಯರೊಂದಿಗೆ ಸಣ್ಣ ಮನಸ್ಥಾಪ
ಉಂಟಾಗಲಿದೆ. ಒಬ್ಬರೇ ದಿನವಿಡೀ
ಏಕಾಂತದಲ್ಲಿ ಕಳೆಯುವಿರಿ. ಶುಭ ಫಲ.

ಸಿಂಹ
ಮಾನಸಿಕ ಒತ್ತಡ ಹೆಚ್ಚಾದರೂ ಸಂಜೆಯ
ವೇಳೆಗೆ ಅದರಿಂದ ಹೊರಗೆ ಬರಲಿದ್ದೀರಿ.
ವ್ಯವಸ್ಥಿತವಾಗಿ ಕೆಲಸಗಳು ಸಾಗಲಿವೆ.

ಕನ್ಯಾ
ಖರ್ಚುಗಳು ಹೆಚ್ಚಾಗಲಿವೆ. ಸ್ನೇಹಿತರ
ಸಾಧನೆಯಿಂದ ನಿಮ್ಮಲ್ಲಿ ಸ್ಫೂರ್ತಿ
ಹೆಚ್ಚಾಗಲಿದೆ. ತಂದೆಯ ಮಾತಿಗೆ ಬೆಲೆ ಕೊಡಿ.

ತುಲಾ
ಹೊಸ ಬಟ್ಟೆ ಕೊಳ್ಳಲಿದ್ದೀರಿ. ಪರನಿಂದೆಯನ್ನು
ಸಾಧ್ಯವಾದಷ್ಟು ಕಡಿಮೆ ಮಾಡಿ. ಅಪರಿಚಿತರ
ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಿಗಲಿದೆ.

ವೃಶ್ಚಿಕ
ಮನೆಯಲ್ಲಿ ಸಂಭ್ರಮವಿರಲಿದೆ. ದೂರದ
ಬಂಧುಗಳ ಆಗಮನ. ರಾತ್ರಿ ವೇಳೆಗೆ ನಿಮ್ಮ
ಶ್ರಮಕ್ಕೆ ತಕ್ಕ ಪ್ರತಿಫಲ ಕೈಸೇರಲಿದೆ.

 ಧನುಸ್ಸು
ಸ್ವಂತ ಆಲೋಚನೆಗಳಿಂದ ಮುಂದೆ ಸಾಗಿ.
ನಿಮ್ಮ ಸುತ್ತ ಮುತ್ತಲು ಆರೋಗ್ಯಕರ ಬೆಳವ
ಣಿಗೆ ಏರ್ಪಡಲಿದೆ. ಖುಷಿಯಿಂದಿರುವಿರಿ.

ಮಕರ
ವರ್ತಕರಿಗೆ ಹೆಚ್ಚು ಲಾಭವಾಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ
ಲಿದ್ದೀರಿ. ಜಡತನ ಮಾಯವಾಗಲಿದೆ.

ಕುಂಭ
ದಿನವಿಡೀ ಮನೆಯಿಂದ ಹೊರಗೆ
ಕಳೆಯುವಿರಿ. ಸುತ್ತಾಟ ಹೆಚ್ಚಾಗಲಿದೆ.
ಮಧ್ಯಸ್ಥಿಕೆ ವಹಿಸುವ ಕೆಲಸದಿಂದ ದೂರವಿರಿ.

ಮೀನ 
ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದು
ಬೇಡ. ಹಿರಿಯ ಅಧಿಕಾರಿಗಳಿಂದ ನಿಮ್ಮ
ಆಲೋಚನೆಗಳಿಗೆ ಮನ್ನಣೆ ದೊರೆಯಲಿದೆ.

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ