ಮುನ್ನುಗ್ಗಿ ಮಾಡಿದ ಕೆಲಸದಲ್ಲಿ ಯಶಸ್ಸು ಖಚಿತ

Published : Nov 20, 2018, 06:54 AM IST
ಮುನ್ನುಗ್ಗಿ ಮಾಡಿದ ಕೆಲಸದಲ್ಲಿ ಯಶಸ್ಸು ಖಚಿತ

ಸಾರಾಂಶ

ಮುನ್ನುಗ್ಗಿ ಮಾಡಿದ ಕೆಲಸದಲ್ಲಿ ಯಶಸ್ಸು ಖಚಿತ

ಮುನ್ನುಗ್ಗಿ ಮಾಡಿದ ಕೆಲಸದಲ್ಲಿ ಯಶಸ್ಸು ಖಚಿತ

ಮೇಷ
ನಗುನಗುತಾ ಇದ್ದರೆ ಎಲ್ಲಾ ಕೆಲಸವೂ
ಸುಲಭವಾಗಿ ನೆರವೇರುತ್ತವೆ. ಇದು ನನ್ನಿಂದ
ಸಾಧ್ಯ ಎಂದು ಮುನ್ನುಗ್ಗಿ ಒಳಿತಾಗಲಿದೆ.

ವೃಷಭ
ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ
ನಿಮ್ಮವರ ಸಾಮರ್ಥ್ಯವೇ ನಿಮಗೆ
ತಿಳಿದಿರುವುದಿಲ್ಲ. ಅವರ ಶಕ್ತಿಯನ್ನು ನಂಬಿ.

ಮಿಥುನ
ಎಲ್ಲರೂ ಎಲ್ಲಾ ವಿಷಯಗಳನ್ನೂ ತಿಳಿದಿರು
ವುದಿಲ್ಲ. ನಿಮಗೆ ಚೆನ್ನಾಗಿ ಗೊತ್ತಿರುವ ಕೆಲಸ
ವನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾಗಿ.

ಕಟಕ
ಅಲೆಗಳ ವಿರುದ್ಧ ಈಜುವುದು ಬೇಡ.
ಪರಿಸ್ಥಿತಿಗಳನ್ನು ನಯವಾಗಿ ನಿರ್ವಹಿಸಿ.
ಮಾತಿನ ಮೇಲೆ ಹೆಚ್ಚು ಹಿಡಿತವಿರಲಿ.

ಸಿಂಹ
ಬುದ್ದಿವಂತಿಕೆಯಿಂದ ಕಾರ್ಯ
ಸಿದ್ಧಿಯಾಗುತ್ತದೆ. ಅದರ ಜೊತೆಗೆ ಒಂದಷ್ಟು
ಮಾನವೀಯತೆಯೂ ಜೊತೆಯಾಗಲಿ.

ಕನ್ಯಾ
ಬಲ್ಲ ವ್ಯಕ್ತಿಗಳಿಂದ ಸಾಕಷ್ಟು ಮಾಹಿತಿ
ದೊರೆಯಲಿದೆ. ನೀವು ಅಂದುಕೊಂಡದ್ದಕ್ಕಿಂತ
ಸತ್ಯ ಬೇರೆಯದ್ದೇ ಆಗಿರಲಿದೆ.

ತುಲಾ 
ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ
ಮೂಡಲಿದೆ. ಮನರಂಜನಾ ಕ್ಷೇತ್ರದಲ್ಲಿ ತೊಡ
ಗಿಸಿಕೊಳ್ಳುವಿರಿ. ರಾತ್ರಿ ವೇಳೆಗೆ ಶುಭ ಫಲ.

ವೃಶ್ಚಿಕ
ನಿಮ್ಮ ವೈಯಕ್ತಿಕ ವಿಚಾರಗಳನ್ನು
ಅಪರಿಚಿತರೊಂದಿಗೆ ಹಂಚಿಕೊಳ್ಳುವುದು
ಬೇಡ. ಆತ್ಮೀಯರೊಂದಿಗೆ ಸಣ್ಣ ಕಲಹ. 

ಧನುಸ್ಸು
ಬೇಕು ಎನ್ನಿಸಿದ್ದೆಲ್ಲಾ ಸಿಕ್ಕದೇ ಹೋದರೂ
ಸಿಗುವ ವಸ್ತು ಸಂತಸ ನೀಡಲಿದೆ. ಮನೆಯಲ್ಲಿ
ಸಂತೋಷದ ವಾತಾವರಣ ನಿರ್ಮಾಣ.

ಮಕರ
ದಿನಾರಂಭದಲ್ಲಿ ಆಲಸ್ಯವಿದ್ದರೂ ಮಧ್ಯಾಹ್ನದ
ವೇಳೆಗೆ ಚುರುಗಾಕುವಿರಿ. ಆಹಾರ ಕ್ರಮದಲ್ಲಿ
ವ್ಯತ್ಯಯವಾದೀತು. ಖರ್ಚು ಹೆಚ್ಚಲಿದೆ.

ಕುಂಭ
ನಿಮ್ಮ ಲಾಭಕ್ಕಾಗಿಯೇ ಎಲ್ಲಾ ಕೆಲಸವನ್ನೂ
ಮಾಡದಿರಿ. ನಿಮ್ಮವರ ಸಂತೋಷವೂ
ಮುಖ್ಯ. ಈ ದಿನ ಸೋತು ಗೆಲ್ಲುವಿರಿ.

ಮೀನ 
ದೊಡ್ಡವರ ಮಾತಿನ ಅನುಸಾರ ನಡೆದುಕೊಳ್ಳಿ.
ದಿನದಲ್ಲಿ ಹೆಚ್ಚು ಭಾಗ ಉತ್ತಮರೊಂದಿಗೆ
ಕಳೆಯುವಿರಿ. ಆರ್ಥಿಕವಾಗಿ ಲಾಭವಾಗಲಿದೆ.

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ