ಈ ರಾಶಿಗೆ ಎಲ್ಲವೂ ಶುಭದಾಯಕವಾಗುವ ದಿನ

Published : Nov 10, 2018, 06:58 AM IST
ಈ ರಾಶಿಗೆ ಎಲ್ಲವೂ ಶುಭದಾಯಕವಾಗುವ ದಿನ

ಸಾರಾಂಶ

ಈ ರಾಶಿಗೆ ಎಲ್ಲವೂ ಶುಭದಾಯಕವಾಗುವ ದಿನ

ಈ ರಾಶಿಗೆ ಎಲ್ಲವೂ ಶುಭದಾಯಕವಾಗುವ ದಿನ

ಮೇಷ
ದಾರಿ ದೂರವಾದದ್ದು ಎಂದು ಸುಮ್ಮನೆ
ನೋಡುತ್ತಾ ನಿಲ್ಲುವುದು ಬೇಡ. ಮೊದಲ
ಹೆಜ್ಜೆ ಕಿತ್ತಿಟ್ಟರೆ ಎಲ್ಲವೂ ಕೈಗೂಡುವುದು.

ವೃಷಭ
ನಂಬಿಕೆಯಿಂದ ಕೆಲಸ ಶುರು ಮಾಡಿ.
ಅಂದುಕೊಂಡಂತೆಯೇ ದಿನಾಂತ್ಯಕ್ಕೆ ಎಲ್ಲವೂ
ಒಳಿತಾಗಲಿದೆ. ಶ್ರದ್ಧೆ ಹೆಚ್ಚಾಗಲಿದೆ.

ಮಿಥುನ
ಕಷ್ಟ ನಿಮ್ಮೊಬ್ಬರಿಗೇ ಬರುವುದಲ್ಲ.
ನಿಮಗಿಂತಲೂ ದೊಡ್ಡ ಕಷ್ಟ ಇರುವವರು
ಇದ್ದಾರೆ. ಧೈರ್ಯಗೆಡದೇ ಮುಂದೆ ಸಾಗಿ.

ಕಟಕ
ನೊಂದ ಸ್ನೇಹಿತನಿಗೆ ಸಮಾಧಾನದ ನಾಲ್ಕು
ಮಾತನಾಡಿ. ನಿಮ್ಮ ಮಾತಿಗೆ ದೊಡ್ಡ ಶಕ್ತಿ ಇದೆ
ಎನ್ನುವುದು ನಿಮಗೆ ಅರಿವಾಗಲಿದೆ.

ಸಿಂಹ
ಯಾವ ವಸ್ತುವನ್ನೂ ಕಡೆಗಣಿಸುವುದು ಬೇಡ.
ನೀವು ಬೇಡ ಎಂದಿದ್ದ ವಸ್ತುವೇ ಇಂದು
ನಿಮಗೆ ಹೆಚ್ಚು ಸಹಾಯ ಮಾಡಲಿದೆ.

ಕನ್ಯಾ
ಅಪರಿಚಿತರಿಂದ ಕ್ಲಿಷ್ಟ ಸಂದರ್ಭದಲ್ಲಿ ಸಹಾಯ
ದೊರೆಯಲಿದೆ. ಅದನ್ನು ಇಡೀ ದಿನ ನೆನೆದು
ಸಮಾಧಾನಿಯಾಗುವಿರಿ. ಹಬ್ಬದ ಸಂಭ್ರಮ.

ತುಲಾ 
ತಪ್ಪುಗಳಿಗೆ ಕ್ಷಮೆ ಇರುತ್ತದೆ. ಹಾಗೆಂದು ಮತ್ತೆ
ಮತ್ತೆ ಹಳೆಯ ತಪ್ಪುಗಳನ್ನು ಪುನರಾವರ್ತನೆ
ಮಾಡುವುದು ಬೇಡ. ಸಹಾಯ ಮಾಡಿ.

ವೃಶ್ಚಿಕ
ಅಮ್ಮನಿಂದ ಆರ್ಥಿಕ ಸಹಕಾರ ದೊರೆಯಲಿದೆ.
ಸತ್ಯವನ್ನೇ ಹೇಳಿ ಸಹಾಯ ಪಡೆದುಕೊಳ್ಳಿ.
ಯಶಸ್ಸಿಗೆ ಕೊಂಚ ಹೆಚ್ಚು ಶ್ರಮ ಹಾಕಬೇಕು. 

ಧನುಸ್ಸು
ಶುಭ ಸುದ್ದಿಯ ಹಿಂದೆಯೇ ಕಹಿ ಸುದ್ದಿಯೂ
ಎದುರಾಗಲಿದೆ. ದಿನಾಂತ್ಯಕ್ಕೆ ಎಲ್ಲವೂ
ತಿಳಿಯಾಗಲಿದೆ. ಕೆಲಸದಲ್ಲಿ ಬದ್ಧತೆ ತೋರಿ.

ಮಕರ
ಧೈರ್ಯ ಹೆಚ್ಚಲಿದೆ. ಆದರೆ ನಿಮ್ಮ ಮನಸ್ಸಿನಲ್ಲಿ
ಛಲ ಹೆಚ್ಚಬೇಕಷ್ಟೇ. ಶುಭ ಕಾರ್ಯಕ್ಕೆ ಅಡಿ
ಇಡುವಿರಿ. ಒಳ್ಳೆಯ ವ್ಯಕ್ತಿಗಳ ಪರಿಚಯ.

ಕುಂಭ
ನಿಮ್ಮ ಕೆಲಸಗಳು ನಿಮಗೆ ಭಾರವಾಗಿ
ಕಾಣಬಹುದು. ಆದರೆ ಅಷ್ಟಕ್ಕೇ ನಿಲ್ಲುವುದು
ಬೇಡ. ಹೆಚ್ಚು ಶ್ರಮ ಹಾಕಿ, ಶಕ್ತಿ ಹೆಚ್ಚಾಗುತ್ತದೆ.

ಮೀನ 
ನಿಮ್ಮ ಕಣ್ಣಿಗೆ ಕಾಣುವುದಷ್ಟೇ ಸತ್ಯವಲ್ಲ.
ವಿಚಾರದ ಬಗ್ಗೆ ಪೂರ್ತಿಯಾಗಿ ತಿಳಿದು
ಕೊಳ್ಳದೇ ಪ್ರತಿಕ್ರಿಯೆ ನೀಡುವುದು ಬೇಡ.

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ