ಈ ವಾರದ ಭವಿಷ್ಯ ಹೇಗಿದೆ..?
ಈ ವಾರ ಈ ರಾಶಿಗೆ ಶುಭ ತರಲಿದೆ : ಉಳಿದ ರಾಶಿ..?
ಮೇಷ
ನಿಮಗೆ ತೃಪ್ತಿ ನೀಡುವ ಕೆಲಸ ಮಾಡಿದಷ್ಟು
ನೆಮ್ಮದಿ ಜೀವನ ನಿಮ್ಮದಾಗುವುದರಲ್ಲಿ
ಸಂದೇಹವಿಲ್ಲ. ಈ ವಾರ ಸಮಾಜ ಸೇವಾ
ಕಾರ್ಯಗಳು ಹೆಚ್ಚಾಗಲಿದ್ದು, ಎಲ್ಲರ ಮೆಚ್ಚುಗೆಗೆ
ಪಾತ್ರರಾಗಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಈ ವಾರ
ಸುಧಾರಣೆ ಕಾಣಲಿದ್ದು, ವಾಹನ ಖರೀದಿ ಸಾಧ್ಯತೆ.
undefined
ವೃಷಭ
ಕೋಪ ಬಂದಾಗ ಯಾವುದೇ ಕಠಿಣ ನಿರ್ಧಾರ
ತೆಗೆದುಕೊಳ್ಳಬೇಡಿ. ಹಾಗೆ ಮಾಡಿದಲ್ಲಿ
ಮುಖ್ಯವಾದ ವಿಚಾರದಲ್ಲಿ ಕೈ ಸುಟ್ಟಿಕೊಳ್ಳುವುದು
ಖಚಿತ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಈ
ವಾರ ಸಿಹಿ ಸುದ್ದಿ ಕಾದಿದೆ. ನಿಮ್ಮ ಕುಟುಂಬದ ಜೊತೆಗೆ
ದೂರ ಪ್ರಯಾಣ ಸಾಧ್ಯತೆ. ಮಹಿಳೆಯರಿಗೆ ಲಾಭ
ಮಿಥುನ
ಸಹೋದರಿಯೊಂದಿಗೆ ದೂರ ಪ್ರಯಾಣ ಸಾಧ್ಯ
ತೆ. ಮನೆಯಲ್ಲಿ ಸಂತೋಷದ ವಾತಾವರಣ.
ನಿಮ್ಮ ಸುತ್ತಲಿನವರ ಕೊಂಕು ಮಾತುಗಳಿಗೆ
ಆದಷ್ಟು ಕಿವಿಗೊಡದಿರುವುದು ಒಳಿತು. ಮನಸ್ಸಿಗೆ ನೆಮ್ಮದಿ
ನೀಡುವ ಕೆಲಸಗಳನ್ನು ಮಾಡಿ. ನಿಮ್ಮ ಸಮಾಜಮುಖಿ
ಕಾರ್ಯಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ.
ಕಟಕ
ಕಷ್ಟಗಳು ಎದುರಾಗಿ ನಿಮ್ಮ ತಾಳ್ಮೆ ಪರೀಕ್ಷಿಸುವ
ಸಮಯ ದೂರವಿಲ್ಲ. ಧೈರ್ಯ ಹಾಗೂ
ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ
ಕುಟುಂಬದ ಬೆಂಬಲ ನಿಮ್ಮ ಜೊತೆಗಿದೆ. ಆರೋಗ್ಯದಲ್ಲಿ
ಎಚ್ಚರ ಇರಲಿ. ಮಹಿಳೆಯರು ಮಾತನಾಡುವಾಗ
ಎಚ್ಚರದಿಂದ ಇರುವುದು ಸೂಕ್ತ. ಸಿಹಿ ಸುದ್ದಿ ಕೇಳುವಿರಿ.
ಸಿಂಹ
ಕುಟುಂಬದಲ್ಲಿನ ಬಿಕ್ಕಟ್ಟಿಗೆ ನಿಮ್ಮ ಹಟವೇ
ಕಾರಣವಾಗಿ ನಿಲ್ಲಬಹುದು. ಅದನ್ನು ತೊರೆದು
ಮುನ್ನಡೆದರೆ ಬಾಳು ಹಸನಾಗುವುದು. ಎಲ್ಲಾ
ತಿಳಿದಿದ್ದರೂ ಅಹಂಕಾರ ನಿಮ್ಮನ್ನು ಆವರಿಸಿಕೊಂಡು
ಇಲ್ಲದ ಸಮಸ್ಯೆಯನ್ನು ತಂದುಕೊಳ್ಳುತ್ತಿದ್ದೀರಿ. ಇದನ್ನು
ತೊರೆದು ಸಮಾಧಾನ ತಂದುಕೊಂಡಷ್ಟು ಒಳಿತಾಗಲಿದೆ.
ಕನ್ಯಾ
ಪೂರ್ವ ತಯಾರಿ ಇಲ್ಲದೆ ಕೆಲಸಕ್ಕೆ ಕೈ ಹಾಕಬೇಡಿ.
ಹಳೇ ಸ್ನೇಹಿತರ ಭೇಟಿ ಇಂದ ಸಂತೋಷ
ಹೆಚ್ಚಲಿದ್ದು, ಹೊಸ ಸ್ನೇಹಿತರ ಪರಿಚಯ
ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರದಿಂದಿರಿ.
ಯಾರನ್ನೂ ಅತಿಯಾಗಿ ನಂಬದಿರುವುದು ಸೂಕ್ತ. ಯಾವು
ದೇ ಕೆಲಸಕ್ಕೆ ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ.
ತುಲಾ
ಮಹಿಳೆಯರಿಗೆ ಈ ವಾರ ಮನೆ ಕೆಲಸ ಹೆಚ್ಚಾಗ
ಲಿದೆ. ಕಷ್ಟದಲ್ಲಿ ಸಿಲುಕಿದವರಿಗೆ ನೆರವಾಗಲಿ
ದ್ದೀರಿ. ವೃತ್ತಿಯಲ್ಲಿ ಪದೋನ್ನತಿ, ಆರೋಗ್ಯದಲ್ಲಿ
ಏರುಪೇರು ಸಾಧ್ಯತೆ. ಆತ್ಮಬಲದಿಂದ ಸಕಲ ಕಾರ್ಯದ
ಲ್ಲೂ ಯಶಸ್ಸು ಸಿಗಲಿದೆ. ಮಕ್ಕಳು ನಿಮ್ಮಿಷ್ಟದ ವಿಷಯದ
ಬಗ್ಗೆ ಆಯ್ಕೆ ಮಾಡಿಕೊಂಡಲ್ಲಿ ಮುಂದೆ ಉತ್ತಮವಾಗಲಿದೆ.
ವೃಶ್ಚಿಕ
ನಿಮ್ಮ ಚುಚ್ಚು ಮಾತುಗಳು ಬೇರೆಯವರಿಗೆ
ನೋವು ತರಿಸಿದಂತೆ, ನಿಮ್ಮ ಕೆಲಸಗಳೇ ಮುಂದೆ
ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಒಳ್ಳೆ
ಕೆಲಸಗಳನ್ನು ಮಾಡಿ ಜನರಿಂದ ಸೈ ಎನಿಸಿಕೊಂಡು ಜೀವನ
ದ ಪ್ರತಿ ಕ್ಷಣ ಸಂತೋಷ, ಉತ್ತಮ ಕೆಲಸಗಳಿಂದ ಕಳೆದರೆ
ಸೂಕ್ತ. ಮಕ್ಕಳಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ.
ಧನಸ್ಸು
ಈ ವಾರ ನಿಮಗೆ ಎದುರಾಗಿರುವ ಸವಾಲೆಲ್ಲವೂ
ನಿವಾರಣೆಯಾಗಲಿದೆ. ಶಾಂತ ಮನಸ್ಸಿನಿಂದ
ಎಲ್ಲವನ್ನೂ ಆಲಿಸಿ ಪ್ರತಿ ಹೆಜ್ಜೆಯನ್ನೂ
ಎಚ್ಚರದಿಂದ ಇಡಿ. ಮಕ್ಕಳ ಸಮಸ್ಯೆಗಳಿಗೆ ನೆರವಾಗ
ಲಿದ್ದೀರಿ. ಮಕ್ಕಳಿಂದ ಮನೆಯಲ್ಲಿ ನೆಮ್ಮದಿಯೂ ಸಿಗಲಿದೆ.
ಮಕರ
ಯಾರೂ ಸಹ ಈ ಜಗತ್ತಿನಲ್ಲಿ ಪರಿಪೂರ್ಣರಲ್ಲ.
ಹಾಗಂತ ಯಾರನ್ನೂ ನೋಯಿಸಿ ಮಾತನಾಡು
ವುದು ತರವಲ್ಲ. ನಿಮ್ಮಲ್ಲಿನ ವಿದ್ಯೆ ಗೊತ್ತಿರುವ
ವಿಷಯವನ್ನು ತಿಳಿಸಿಕೊಡಿ. ಎಲ್ಲರಲ್ಲೂ ಒಳ್ಳೆಯದನ್ನು
ಹುಡುಕುವ ಪ್ರಯತ್ನ ಮಾಡಿ. ಬಂಧುಗಳ ಆಗಮನ.
ಕುಂಭ
ಮನಸ್ಸಿನಲ್ಲಿನ ಗೊಂದಲ, ತಳಮಳಕ್ಕೆ ಈ ವಾರ
ನಿವಾರಣೆಯಾಗಲಿದೆ. ದೂರದೂರಿನ
ಪ್ರಯಾಣ ಆಯಾಸದಿಂದ ಒತ್ತಡ ಹೆಚ್ಚಿದರೂ
ಅದರಿಂದ ಸೂಕ್ತ ರೀತಿಯಲ್ಲಿ ಹೊರಬರಲಿದ್ದೀರಿ. ತಂದೆ
ತಾಯಿಯ ಆರ್ಥಿಕ ಸಹಕಾರ ಸಿಗಲಿದೆ. ಇದರಿಂದ ನಿಮ್ಮ
ಕೆಲಸ ಕಾರ್ಯಗಳಲ್ಲಿ ಇನ್ನಷ್ಟು ಪ್ರಗತಿ ಕಾಣುವಿರಿ.
ಮೀನ
ಎಲ್ಲರಿಗೂ ತಿಳಿದಿರುವುದು ನಿಮಗೂ ತಿಳಿದಿರಬೇ
ಕೆಂದೇನಿಲ್ಲ. ಆದರೆ ಗೊತ್ತಿಲ್ಲದ್ದನ್ನು ತಿಳಿದುಕೊ
ಳ್ಳುವ ಪ್ರಯತ್ನ ಮಾಡಿ. ಯಾರೇನೇ ಮಾತನಾ
ಡಿದರೂ ಅದರಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಬೇಡದ್ದನ್ನು
ಅಲ್ಲೇ ಬಿಟ್ಟುಬಿಡಿ. ಆರೋಗ್ಯದಲ್ಲಿ ಚೇತರಿಕೆ.