ನಿಮ್ಮ ಕೆಲಸಕ್ಕೆ ಇಂದು ತಕ್ಕ ಪ್ರತಿಫಲ ದೊರೆಯಲಿದೆ : ಒಳ್ಳೆಯ ದಿನ

Published : Apr 04, 2019, 07:14 AM IST
ನಿಮ್ಮ ಕೆಲಸಕ್ಕೆ ಇಂದು ತಕ್ಕ ಪ್ರತಿಫಲ ದೊರೆಯಲಿದೆ : ಒಳ್ಳೆಯ ದಿನ

ಸಾರಾಂಶ

ಇಂದು ಯಾವ ರಾಶಿಗೆ ಯಾವ ಫಲ

ನಿಮ್ಮ ಕೆಲಸಕ್ಕೆ ಇಂದು ತಕ್ಕ ಪ್ರತಿಫಲ ದೊರೆಯಲಿದೆ : ಒಳ್ಳೆಯ ದಿನ

ಮೇಷ : ಕಾಲ ಎಲ್ಲರ ಕಾಲನ್ನು ಎಳೆಯುತ್ತದೆ. ಹಾಗಾಗಿ ದೊಡ್ಡವರು ಎಂದು ನಡೆದುಕೊಳ್ಳುವುದು ಬೇಡ. ಆರೋಗ್ಯ ಸ್ಥಿರತೆ

ವೃಷಭ : ಸ್ವಾಭಿಮಾನಕ್ಕೆ ಧಕ್ಕೆ ಬರುವ ಕಡೆಯಲ್ಲಿ ಹೆಚ್ಚು ಸಮಯ ಇರುವುದು ಬೇಡ, ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ

ಮಿಥುನ : ಸ್ನೇಹಿತರ ಅಪಹಾಸ್ಯಕ್ಕೆ ಗುರಿ ಮಾಡದಿರಿ. ಆರೋಗ್ಯದಲ್ಲಿ ಕೊಂಚ ಏರುಪೇರು ಆಗಲಿದೆ. ಮಕ್ಕಳ ವಿಚಾರದಲ್ಲಿ ದುಡುಕುವುದು ಬೇಡ. 

ಕಟಕ : ನಿಮ್ಮ ಶಕ್ತಿಗೆ ತಕ್ಕಂತಹ ಕಾರ್ಯಕ್ರವನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾಗಿ, ವಾಹನ ರಿಪೇರಿಗಾಗಿ ಹಣ ವ್ಯಯವಾಗಲಿದೆ. 

ಸಿಂಹ : ಅಸಮರ್ಥರ ಎದುರು ತಲೆಬಾಗುವುದು ಬೇಡ. ಸಣ್ಣ ಉದ್ಯಮಿಗಳಿಗೆ ಹೊಸ ಆರ್ಡರ್ ಬರಲಿವೆ. ಉಳಿತಾಯ ಹೆಚ್ಚಾಗಲಿದೆ. 

ಕನ್ಯಾ : ಅನಿರೀಕ್ಷಿತ ಘಟನೆಗಳಿಂದ ಖರ್ಚು ಹೆಚ್ಚಾಗಲಿದೆ. ಸ್ನೇಹಿತರ ನೆರವಿನಿಂದ ದಿನವಿಡಿ ಹಿಸ ಕೆಲಸ ಮಾಡಲಿದ್ದೀರಿ. ಶುಭ ಫಲ

ತುಲಾ : ಒಳ್ಳೆಯ ಸಮಯಕ್ಕಾಗಿ ಕಾಯುತ್ತಾ ಕೂರುವುದು ಬೇಡ. ನೀವು ಅಂದುಕೊಂಡ ಕಾರ್ಯವನ್ನು ಇಂದೇ ಮಾಡಿ ಮುಗಿಸಿ

ವೃಶ್ಚಿಕ : ಬಾಲ್ಯದ ಗೆಳಯ ಇಂದು ನಿಮ್ಮ ಸಹಾಯಕ್ಕೆ ಬರಲಿದ್ದಾನೆ. ಕೆಲಸಕ್ಕೆ ಉಡುಗೊರೆಗಳು ದೊರೆಯಲಿವೆ.  ನೆಮ್ಮದಿಯಿಂದ ದಿನ ಕಳೆಯುವಿರಿ. 

ಧನಸ್ಸು : ಕೆಲಸದ ಒತ್ತಡದ ನಡುವಲ್ಲಿ  ಕುಟುಂಬಕ್ಕೂ ಸಮಯ ಕೊಡಲಿದ್ದೀರಿ. ನಿಮ್ಮ ನೇರವಾದ ನಡೆಯಿಂದ ಮೆಚ್ಚುಗೆ ದೊರೆಯಲಿದೆ. 

ಮಕರ ಳ ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಇಂದು ಹೆಚ್ಚು ಮಾನ್ಯತೆ ದೊರೆಯಲಿದೆ. ಹೊಗಳಿಕೆ ಮಾತುಗಳಿಗೆ ಗಮನ ನೀಡಬೇಡಿ

ಕುಂಭ : ಬಂದ ಸಣ್ಣ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಮುಂದೆ ಒಳ್ಳೆಯ ಅವಕಾಶಕ್ಕೆ ದಾರಿ ಮಾಡಿಕೊಡಲಿದೆ. 

ಮೀನ : ಮಾಡಿದ ಉಪಕಾರವನ್ನು ಮರೆಯುವುದು ಬೇಡ. ನಿರೀಕ್ಷೆಯಂತೆ ಅಂದುಕೊಂಡ ಕಾರ್ಯಗಳು ಸಾರಾಗವಾಗಲಿವೆ

PREV
click me!

Recommended Stories

ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ
ಕೈ ತುಂಬಾ ಸಿನಿಮಾಗಳಿದ್ದರೂ ರಶ್ಮಿಕಾ ಮಂದಣ್ಣ ಈಗಲೇ ಮದುವೆ ಆಗಿರೋದು ಯಾಕೆ? ಗುಟ್ಟು ರಟ್ಟಾಯ್ತು!