ಈ ರಾಶಿಗೆ ಆರಂಭದಲ್ಲಿಯೇ ಶುಭ ಸುದ್ದಿ : ಶುಭ ಫಲ

Published : Apr 23, 2019, 06:56 AM IST
ಈ ರಾಶಿಗೆ ಆರಂಭದಲ್ಲಿಯೇ ಶುಭ ಸುದ್ದಿ : ಶುಭ ಫಲ

ಸಾರಾಂಶ

ಇಂದಿನ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ.?

ಈ ರಾಶಿಗೆ ಆರಂಭದಲ್ಲಿಯೇ ಶುಭ ಸುದ್ದಿ : ಶುಭ ಫಲ


ಮೇಷ
ದಿನದ ಆರಂಭದಲ್ಲಿಯೇ ಶುಭ ಸುದ್ದಿ
ಕೇಳಲಿದ್ದೀರಿ. ಆರ್ಥಿಕವಾಗಿ ಇಂದು ಹೆಚ್ಚು
ಲಾಭವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ.

ವೃಷಭ
ನಿಮ್ಮ ಸಹಾಯದಿಂದ ಮತ್ತೊಬ್ಬರ ಜೇಬು
ತುಂಬಲಿದೆ. ದಿನ ಪೂರ್ತಿ ಬೇರೆ ಬೇರೆ ಕೆಲಸ
ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ.

ಮಿಥುನ
ಕುಹಕ, ವ್ಯಂಗ್ಯಗಳಿಂದ ಮತ್ತೊಬ್ಬರಿಗೆ
ತೊಂದರೆಯೇ ವಿನಃ ಅದರಿಂದ ಏನೂ
ಪ್ರಯೋಜನವಿಲ್ಲ. ಖರ್ಚಿನಲ್ಲಿ ಹಿಡಿತವಿರಲಿ.

ಕಟಕ
ನಿಮ್ಮ ಮನಸ್ಸಿಗೆ ಇಷ್ಟವಿಲ್ಲದೇ ಇದ್ದರೂ ಕೆಲವು
ಕೆಲಸಗಳನ್ನು ಅನಿವಾರ್ಯವಾಗಿ ಮಾಡ
ಬೇಕಾಗಿ ಬರುತ್ತದೆ. ಶಾಂತಿಯಿಂದ ವರ್ತಿಸಿ.

ಸಿಂಹ
ಉಡುಗೊರೆಗಳು ದೊರೆಯಲಿವೆ. ಎಲ್ಲಾ
ವಿಚಾರಗಳನ್ನೂ ಸಕಾರಾತ್ಮಕವಾಗಿ ತೆಗೆದು
ಕೊಳ್ಳಿ. ಶತ್ರುಗಳು ಇಂದು ಮಿತ್ರರಾಗಲಿದ್ದಾರೆ.

ಕನ್ಯಾ
ಸಣ್ಣ ಪುಟ್ಟ ಸಾಲಗಳನ್ನು ಇಂದು ಮರಳಿಸ
ಲಿದ್ದೀರಿ. ಆಯಾಸ, ಬಳಲಿಕೆ ಹೆಚ್ಚಾಗಲಿದೆ.
ಮಾಡಿದ ಕೆಲಸಕ್ಕೆ ಪ್ರತಿಫಲ ಶೂನ್ಯ.

ತುಲಾ 
ಮಕ್ಕಳ ವಿಚಾರದಲ್ಲಿ ಹೆಚ್ಚು ಕಠಿಣವಾಗಿ
ನಡೆದುಕೊಳ್ಳುವುದು ಬೇಡ. ಸಂಜೆ ವೇಳೆಗೆ
ಮನೆಗೆ ಬಂಧುಗಳ ಆಗಮನವಾಗಲಿದೆ.

ವೃಶ್ಚಿಕ
ಹಿರಿಯರಿಂದ ಸಾಕಷ್ಟು ಹೊಸ ವಿಚಾರಗಳನ್ನು
ತಿಳಿದುಕೊಳ್ಳಲಿದ್ದೀರಿ. ಮನೆಗೆ ಮಹಾ
ಲಕ್ಷ್ಮಿಯ ಆಗಮನ. ಹೆಚ್ಚು ನಿರೀಕ್ಷೆ ಬೇಡ. 

ಧನುಸ್ಸು
ನಿಮ್ಮ ಕೆಲಸದ ಹೊರೆ ಹೆಚ್ಚಾಗಲಿದೆ. ಅಸಮ
ರ್ಥರು, ಅವಿವೇಕಿಗಳೊಂದಿಗೆ ವಾದಕ್ಕೆ ಇಳಿ
ಯುವುದು ಬೇಡ. ಶಾಂತಿಯಿಂದ ವರ್ತಿಸಿ.

ಮಕರ
ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ
ಗೊಂದಲ ಉಂಟಾಗಲಿದೆ. ನಿಮ್ಮದಲ್ಲದ
ಹಣಕ್ಕೆ ಆಸೆ ಪಡುವುದು ಬೇಡ. ಶುಭಫಲ.

ಕುಂಭ
ಸ್ನೇಹಿತರು ಅನಿರೀಕ್ಷಿತವಾಗಿ ಸಿಗಲಿದ್ದಾರೆ.
ಹೊಸ ಉದ್ಯೋಗದ ಅವಕಾಶಗಳು ಇವೆ.
ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ.

ಮೀನ 
ನಿಮ್ಮ ಶಿಷ್ಯರು ನಿಮ್ಮ ಹೆಸರನ್ನು ಉಳಿಸುವ
ಕೆಲಸ ಮಾಡಲಿದ್ದಾರೆ. ಸ್ವಂತ ಮನೆಯ ಆಸೆಗೆ
ಜೀವ ಬರಲಿದೆ. ಕುಟುಂಬದಲ್ಲಿ ನೆಮ್ಮದಿ.

PREV
click me!

Recommended Stories

ನಾಳೆ ಡಿಸೆಂಬರ್ 11 ವಸುಮಾನ ಯೋಗ, ಐದು ರಾಶಿಗೆ ಅದೃಷ್ಟ ಸಂಪತ್ತು
ರಾಹು ಬುಧ ಯುತಿ 2026: ಈ ರಾಶಿಗ ಅದೃಷ್ಟ 2026 ರಿಂದ ಹೊಳೆಯುತ್ತದೆ, ಸಂಪತ್ತು ಪಕ್ಕಾ