ಈ ರಾಶಿಯವರು ಎಚ್ಚರದಿಂದ ಇರುವುದು ಒಳಿತು

Published : Aug 12, 2019, 07:09 AM ISTUpdated : Aug 12, 2019, 08:00 AM IST
ಈ  ರಾಶಿಯವರು ಎಚ್ಚರದಿಂದ ಇರುವುದು ಒಳಿತು

ಸಾರಾಂಶ

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ?

ಈ  ರಾಶಿಯವರು ಎಚ್ಚರದಿಮದ ಇರುವುದು ಒಳಿತು


ಮೇಷ
ನೆರವು ಕೇಳಿ ಬಂದವರಿಗೆ ನೆರವು ನೀಡುವಿರಿ.
ಸಂತೋಷವಾಗಿ ಇರುವುದಕ್ಕಿಂತ ಬೇರೆ
ಭಾಗ್ಯವಿಲ್ಲ. ದೇವರ ಮೇಲೆ ನಂಬಿಕೆ ಇರಲಿ.

ವೃಷಭ
ಆರೋಗ್ಯವೇ ಭಾಗ್ಯ. ಎಲ್ಲರೊಂದಿಗೂ
ಆತ್ಮೀಯವಾಗಿ ಇರಲಿದ್ದೀರಿ. ಹಣಕಾಸಿನ
ವಿಚಾರದಲ್ಲಿ ಎಚ್ಚರಿಕೆ ಇರಲಿ. ಅತಿ ಆಸೆ ಬೇಡ.

ಮಿಥುನ
ಕೆಟ್ಟದ್ದು ಕಂಡರೂ ಕಾಣದಂತೆ ಇದ್ದು ಬಿಡಿ.
ನಿಮ್ಮ ಮೇಲೆ ಮನೆಯವರು ಇಟ್ಟುಕೊಂಡಿ
ರುವ ನಂಬಿಕೆಗೆ ದ್ರೋಹ ಮಾಡಿದಿರಿ.

ಕಟಕ
ದಾನ, ಧರ್ಮ ಮಾಡುವತ್ತ ಮನಸ್ಸು
ವಾಲಲಿದೆ. ಎಲ್ಲವೂ ನೀವು ಅಂದುಕೊಂಡಂತೆ
ಯೇ ಆಗದು. ಮನಸ್ಸು ತಿಳಿಯಾಗಲಿದೆ.

ಸಿಂಹ
ಸ್ನೇಹಿತರೊಂದಿಗೆ ದೂರದ ಪ್ರಯಾಣ
ಕೈಗೊಳ್ಳಲಿದ್ದೀರಿ. ಸಹನೆಯಿಂದ ವರ್ತಿಸಿ.
ಆರೋಗ್ಯದಲ್ಲಿ ತುಸು ಏರುಪೇರು ಇರಲಿದೆ.

ಕನ್ಯಾ
ಕೆಲಸದ ಒತ್ತಡ ಹೆಚ್ಚಾಗಲಿದೆ. ಮನೆಯಲ್ಲಿ
ಶುಭ ಸಮಾರಂಭಗಳು ನಡೆಯಲಿವೆ. ಹತ್ತಿರ
ದವರ ಸಹಾಯದಿಂದ ನೆಮ್ಮದಿ ಸಿಗಲಿದೆ.

ತುಲಾ
ನಿಮ್ಮದಲ್ಲದ ವಸ್ತುವಿಗೆ ಹೆಚ್ಚು ಆಸೆಪಡದಿರಿ.
ಯಾರೋ ಮಾಡಿದ ಕೆಲಸಕ್ಕೆ ನೀವು
ತೊಂದರೆಗೆ ಒಳಗಾಗಬೇಕಾಗುತ್ತದೆ.

ವೃಶ್ಚಿಕ
ಗೊಂದಲಗಳು ಸಹಜ. ಅವೆಲ್ಲವನ್ನೂ ಮೀರಿ
ನಿಲ್ಲುವ ಪ್ರಯತ್ನ ಮಾಡಿ. ಗೆಲುವು ಸದ್ಯಕ್ಕೆ
ದೂರ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. 

ಧನುಸ್ಸು
ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಣ್ಣ
ತಪ್ಪೊಂದು ನಿಮ್ಮ ಉತ್ಸಾಹ ಕಡಿಮೆ
ಮಾಡಲಿದೆ. ನಿಮ್ಮ ಪಾಡಿಗೆ ನೀವು ಇದ್ದು ಬಿಡಿ.

ಮಕರ
ಸೌಮ್ಯವಾದ ಮಾತಿನಿಂದ ಎಲ್ಲರನ್ನೂ
ಒಲಿಸಿಕೊಳ್ಳಲಿದ್ದೀರಿ. ಹೊಸ ಕಾರ್ಯಗಳು
ಶುಭಾರಂಭಗೊಳ್ಳಲಿವೆ. ಲಾಭ ಹೆಚ್ಚಲಿದೆ.

ಕುಂಭ
ಎಲ್ಲದಕ್ಕೂ ಕಾರಣ ಕೇಳುತ್ತಾ ಕೂರುವುದು
ಬೇಡ. ನಿರೀಕ್ಷೆ ಮಾಡಿದ ಕಾರ್ಯಗಳು
ಆಗಲಿವೆ. ದಾಂಪತ್ಯದಲ್ಲಿ ಸಂತಸ ಹೆಚ್ಚಲಿದೆ.

ಮೀನ
ಗುಣಕೆ ಮತ್ಸರ ಬೇಡ. ನಿಮ್ಮ ವೈರಿಯೇ
ಆಗಿದ್ದರೂ ಅವರ ಒಳ್ಳೆಯ ಕೆಲಸಗಳನ್ನು
ಮೆಚ್ಚಿ. ಧೈರ್ಯದಿಂದ ಮುಂದೆ ಸಾಗಿ

PREV
click me!

Recommended Stories

2026 Rahu Gochara: ಈ 3 ರಾಶಿಗಳ ಜನರ ಜೀವನವೇ ಬದಲು! ಹೊಸ ವರ್ಷದಲ್ಲಿ ಹರುಷದ ಹೊಳೆ
ಗಂಟೆಗೊಂದು, ಗಳಿಗೆಗೊಂದು... ಈ 3 ರಾಶಿಯವರೊಂದಿಗೆ ಜಾಗರೂಕರಾಗಿರಿ