ಒಂದು ರಾಶಿಯವರಿಗೆ ಸಂತೋಷದ ಕ್ಷಣಗಳು ಎದುರಾಗಲಿವೆ : ಉಳಿದ ರಾಶಿ?

Published : Sep 04, 2019, 07:10 AM IST
ಒಂದು ರಾಶಿಯವರಿಗೆ ಸಂತೋಷದ ಕ್ಷಣಗಳು ಎದುರಾಗಲಿವೆ : ಉಳಿದ ರಾಶಿ?

ಸಾರಾಂಶ

ಸೆಪ್ಟೆಂಬರ್ 04.2019 ಬುಧವಾರ : ಇಂದಿನ ರಾಶಿಗಳ ಫಲಾ ಫಲ ಹೇಗಿದೆ? 

ಒಂದು ರಾಶಿಯವರಿಗೆ ಸಂತೋಷದ ಕ್ಷಣಗಳು ಎದುರಾಗಲಿವೆ : ಉಳಿದ ರಾಶಿ? 

ಮೇಷ
ಕೆಲಸದಲ್ಲಿ ಅಡೆತಡೆಗಳು ಬರುವ ಸಾಧ್ಯತೆ.
ಅದನ್ನು ಧೈರ್ಯವಾಗಿ ಹಾಗೂ ಸಮರ್ಥ
ವಾಗಿ ಎದುರಿಸಲಿದ್ದೀರಿ. ನಂಬಿಕೆ ಇರಲಿ.

ವೃಷಭ
ಇಂದು ಮಾಡಿದ ಕೆಲಸದಲ್ಲಿ ತೃಪ್ತಿ ಮನೋಭಾ
ವ ಮೂಡಲಿದೆ. ಅದಕ್ಕನುಗುಣವಾಗಿ
ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ

ಮಿಥುನ
ಸಂತಸದ ದಿನಗಳಿಗೆ ಕ್ಷಣಗಣನೆ. ಇಷ್ಟು ದಿನದ
ಕನಸು ನನಸಾಗುವ ಸಮಯವಿದು. ಹಿಗ್ಗದೆ
ಕುಗ್ಗದೆ ಮುನ್ನಡೆಯಿರಿ. ಶುಭ ದಿನ.

ಕಟಕ
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ.
ಅದೇ ರೀತಿ ಕಾರಣವಿಲ್ಲದೆ ಶಿಕ್ಷಗೆ ಗುರಿಯಾ
ಗುವಿರಿ. ಸ್ನೇಹಿತರ ಸಹಾಯ ಸಿಗಲಿದೆ.

ಸಿಂಹ
ಬಿಳಿ ಶಾಂತಿಯ ಸಂಕೇತ. ಆದರೆ ಅದೇ ಶಾಂತಿ
ಎಲ್ಲಾ ಸಂದರ್ಭದಲ್ಲೂ ಅಳವಡಿಸಿಕೊಂಡರೆ
ಬೇರೆಯವರ ಬಾಯಿಗೆ ಆಹಾರವಾಗುವಿರಿ.

ಕನ್ಯಾ
ಪಕ್ಕದವರ ತಟ್ಟೆಯಲ್ಲಿ ಏನಿದೆ ಎನ್ನುವುದಕ್ಕಿಂತ
ನಿಮ್ಮ ತಟ್ಟೆಯಲ್ಲೇನಿದೆ ಎಂದು ನೋಡಿಕೊಳ್ಳಿ.
ಕೆಟ್ಟ ಆಲೋಚನೆಗಿಂತ ಸದ್ವಿಚಾರ ಬೆಳೆಸಿಕೊಳ್ಳಿ.

ತುಲಾ
ಅತಿಯಾದ ಮಾತು ಕೆಲವೊಮ್ಮೆ ಇಕ್ಕಟ್ಟಿಗೆ
ಸಿಲುಕಿಸುತ್ತದೆ. ಹಾಗಾಗಿ ಮಾತಿನ ಮೇಲೆ
ತುಲಾ ಹಿಡಿತ ಇರಲಿ. ನಿಮ್ಮ ಪಾಡಿಗೆ ನೀವು ಇರಿ.

ವೃಶ್ಚಿಕ
ನಿಮ್ಮ ಮೇಲಿನ ನಂಬಿಕೆಯೇ ನಿಮ್ಮ ಆತ್ಮ
ವಿಶ್ವಾಸ ಹೆಚ್ಚಿಸುತ್ತದೆ. ಅದಕ್ಕೆ ಇನ್ನೊಬ್ಬರ
ಸಹಕಾರ ಅಪೇಕ್ಷಿಸಬೇಡಿ. ಒಳಿತಾಗಲಿದೆ. ಧನುಸ್ಸು

ಧನಸ್ಸು
ನೆನಪಿರಲಿ ಇನ್ನೊಬ್ಬರ ತಾಳ್ಮೆ ಪರೀಕ್ಷಿಸುವುದು
ನಿಮಗೆ ನೀವು ತೋಡಿಕೊಳ್ಳುವ ಕೂಪದಂತೆ.
ಹೊಸ ಸ್ನೇಹಿತರ ಪರಿಚಯ ಸಾಧ್ಯತೆ.

ಮಕರ
ಮನಸ್ಸಲ್ಲಿ ಗೊಂದಲ ಮೂಡಿದರೆ ಕೊರಗು
ವುದಕ್ಕಿಂತ ಅದನ್ನು ಇನ್ನೊಬ್ಬರ ಬಳಿ ಹೇಳಿ
ಕೊಂಡು ಸರಿಪಡಿಸಿ ಕೊಳ್ಳುವುದು ಉತ್ತಮ.

ಕುಂಭ
ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಹೊಸ
ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ.
ತಾಳ್ಮೆಯೇ ಇದಕ್ಕೆ ಮೂಲ ಮಂತ್ರವಾಗಲಿ.

ಮೀನ 
ನಿಮ್ಮ ದೌರ್ಬಲ್ಯವನ್ನು ಇನ್ನೊಬ್ಬರ ಮುಂದೆ
ತೋರಿಸಿಕೊಡಬೇಡಿ. ಇದು ಮುಂದೊಂದು
ದಿನ ನಿಮಗೇ ಮುಳುವಾಗಬಹುದು.

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!