ಇಂದು ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯ ದಿನ

Published : Jan 11, 2020, 07:26 AM IST
ಇಂದು ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯ ದಿನ

ಸಾರಾಂಶ

11 ಜನೆವರಿ 2020 ರ ಭವಿಷ್ಯ| ಇಂದು ನಿಮ್ಮ ಭವಿಷ್ಯ ಹೇಗಿದೆ? ಯಾರಿಗೆ ಶುಭ? ಇಲ್ಲಿದೆ ವಿವರ

ಮೇಷ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.

ವೃಷಭ: ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮಿಥುನ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕಟಕ: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಸಿಂಹ: ಆಪ್ತರು ನೆರವಿಗೆ ಬರುತ್ತಾರೆ ಎನ್ನುವ ಧೈರ್ಯವೇ ನಿಮ್ಮನ್ನು ಮುಂದೆ ನಡೆಸುತ್ತದೆ. ಸಂಸಾರದೊಂದಿಗೆ ಇಡೀ ದಿನ ಕಳೆಯಲಿದ್ದೀರಿ.

ಮಹಿಳೆಯರಿಗೆ ಅತ್ಯಂತ ಶುಭ ಕಾಲ : ಉಳಿದ ರಾಶಿಯ ವಾರ ಭವಿಷ್ಯವೇನು?

ಕನ್ಯಾ: ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಉಂಟಾಗಲಿದೆ. ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯ ಅವಕಾಶ ಒದಗಿಬರಲಿದೆ.

ತುಲಾ: ನೀವು ಬದುಕುವುದು ನಿಮ್ಮ ಖುಷಿಗಾಗಿಯೇ ಹೊರತು ಮತ್ತೊಬ್ಬರನ್ನು ಮೆಚ್ಚಿಸುವುದಕ್ಕೆ ಅಲ್ಲ ಎಂಬುದನ್ನು ತಿಳಿದು ಮುನ್ನೆಡೆಯಿರಿ.

ವೃಶ್ಚಿಕ: ಆರಂಭ ಶೂರತ್ವ ಬೇಡ. ಹಿಡಿದ ಕಾರ್ಯ ವನ್ನು ಕಡೆಯವರೆಗೂ ಮಾಡಿ. ದೊಡ್ಡವರ ಆಶೀರ್ವಾದ ನಿಮ್ಮ ಮೇಲೆ ಇರಲಿ.

ಧನುಸ್ಸು: ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದು ಬೇಡ. ದೇಹದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದೀರಿ.

ಮಕರ: ಹಳೆ ಸ್ನೇಹಿತರ ಮೂಲಕ ಹೊಸ ಸ್ನೇಹಿತರ ಕೂಟ ಸೇರಿಕೊಳ್ಳಲಿದ್ದೀರಿ. ಮಾತಿನ ಮೇಲೆ ಹಿಡಿತವಿರಲಿ. ಆತ್ಮವಿಶ್ವಾಸದಿಂದ ಸಾಗಿ.

ಕುಂಭ:ನಿಮ್ಮ ಮೇಲೆ ನಿಮಗೆ ಅಭಿಮಾನ ಇರಲಿ. ಕೀಳರಿಮೆಯನ್ನು ಕಳೆದು ಮುಂದುವರೆಯಲಿ ದ್ದೀರಿ. ಸ್ವಂತ ಬಲದ ಮೇಲೆ ನಂಬಿಕೆ ಇರಲಿ.

ಮೀನ: ದೊಡ್ಡ ಉದ್ಯಮ ಮಾಡುವ ಮನಸ್ಸು ಇದ್ದರೂ, ಸಣ್ಣದರಿಂದ ಪ್ರಾರಂಭ ಮಾಡಿ. ಅನುಭವವೇ ಒಳ್ಳೆಯ ಗುರು. ಶುಭಫಲ.

PREV
click me!

Recommended Stories

ಆರೋಗ್ಯದ ಜೊತೆ ನಿಮ್ಮ ಅದೃಷ್ಟವೂ ಬದಲಾಗ್ಬೇಕಾ? ಮೂಲಾಂಕದ ಪ್ರಕಾರ ವಾಟರ್‌ ಬಾಟಲ್‌ ಆಯ್ಕೆ ಮಾಡ್ಕೊಳ್ಳಿ
ಪಿತೃ ಪಕ್ಷದಲ್ಲಿ ಹುಟ್ಟುವ ಮಗುವಿಗೆ ಹೀಗಿರಲಿ ಹೆಸರು: ಪೂರ್ವಜರ ನೆನಪಿನ ಜೊತೆ ಅದೃಷ್ಟವೂ ತೆರೆಯುವುದು