ಒಂದು ರಾಶಿಗೆ ಭಾಗ್ಯದ ಬಾಗಿಲು ತೆರೆಯಲಿದೆ : ಉಳಿದ ರಾಶಿ ಹೇಗಿದೆ..?

By Suvarna NewsFirst Published Mar 9, 2020, 7:16 AM IST
Highlights

ಸೋಮವಾರ ಮಾರ್ಚ್ 9 ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ನಿಮ್ಮ ದಿನ 

ಮೇಷ
ಕೆಲಸದ ಹೊರೆ ಹೆಚ್ಚಾಗಲಿದೆ. ಹೊಸ
ಜವಾಬ್ದಾರಿಗಳಿಗೆ ತೆರೆದುಕೊಳ್ಳಲಿದ್ದೀರಿ.
ಮಕ್ಕಳ ಪಾಲಿಗೆ ಒಳ್ಳೆಯ ಅವಕಾಶಗಳಿವೆ.

ವೃಷಭ
ದೊಡ್ಡವರ ಮೇಲಿನ ವಿಶ್ವಾಸ ಮತ್ತಷ್ಟು
ಹೆಚ್ಚಾಗಲಿದೆ. ಯಾರದೋ ತಪ್ಪಿಗೆ ನೀವು ಬೆಲೆ
ತೆರಬೇಕಾದ ಸಂದರ್ಭ ಬರಬಹುದು.

ಮಿಥುನ
ನಕಾರಾತ್ಮಕ ಚಿಂತನೆಗಳಿಂದ ಹೊರ ಬನ್ನಿ.
ನಂಬಿ ಕೆಟ್ಟವರಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ
ಮನೆಯವರು ನಡೆದುಕೊಳ್ಳಲಿದ್ದಾರೆ.

ಕಟಕ
ನಿಮ್ಮ ಆತ್ಮಶಕ್ತಿ ಹೆಚ್ಚಾಗಲಿದೆ. ಆಪ್ತರಿಂದ
ಆರ್ಥಿಕ ಸಹಕಾರ ದೊರೆಯಲಿದೆ. ಆರೋಗ್ಯ
ದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಶುಭಫಲ.

ಸಿಂಹ
ದಿನಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದೆ.
ಆದರೂ ಬೆಳಿಗ್ಗೆಯಿಂದಲೇ ಸಾಕಷ್ಟು ಸುತ್ತಾಟ
ವೂ ಇರಲಿದೆ. ತಾಳ್ಮೆ ಇರಲಿ, ಗೆಲುವು ನಿಮ್ಮದು.

ಕನ್ಯಾ
ಕೆಲಸ ಮಾಡುವ ಸ್ಥಳದಲ್ಲಿ ಆತ್ಮೀಯತೆ
ಹೆಚ್ಚಾಗಲಿದೆ. ನಿಧಾನವೇ ಪ್ರಧಾನ ಎನ್ನುವ
ಮಾತಿನ ಮೇಲೆ ನಂಬಿಕೆ ಇರಲಿ. ಶಾಂತಿ ಇರಲಿ.

ತುಲಾ 
ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು
ನಂತರ ಕಾರ್ಯ ಆರಂಭಿಸಿ. ವಿದ್ಯುತ್
ಉಪಕರಣಗಳಿಂದ ಸಾಧ್ಯವಾದಷ್ಟು ದೂರವಿರಿ.

ವೃಶ್ಚಿಕ
ನಿಮ್ಮಿಷ್ಟದಂತೆಯೇ ಎಲ್ಲವೂ ನಡೆಯುವುದಿಲ್ಲ.
ನಿಂದನೆಗಳಿಗೂ ಒಳಗಾಗಬೇಕಾಗುತ್ತದೆ.
ಆರಂಭ ಶೂರತ್ವದಿಂದ ಹೊರಬರುವಿರಿ. ಧನುಸ್ಸು

ಧನಸ್ಸು
ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿ
ಕೊಳ್ಳಲಿದ್ದೀರಿ. ಕೆಲಸದಲ್ಲಿ ಪದೋನ್ನತಿ
ಸಾಧ್ಯತೆ. ಬರುವ ಟೀಕೆಗಳಿಗೆ ಕುಗ್ಗದಿರಿ.

ಮಕರ
ನಿಮ್ಮಲ್ಲಿರುವ ವೃತ್ತಿ ಪ್ರಾವಿಣ್ಯದಿಂದ ಹೊಸ
ಅವಕಾಶಗಳು ದಕ್ಕಲಿವೆ. ತೀರಾ ಗೊತ್ತಿಲ್ಲದ
ವಿಚಾರಗಳ ಕುರಿತು ಮಾತನಾಡದಿರಿ.

ಕುಂಭ
ಸಂಕಟ ಬಂದಾಗ ವೆಂಕಟರಮಣ ಎನ್ನುವುದಕ್ಕೆ
ಬದಲಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಸಂಬಂಧಗಳಲ್ಲಿ ಬಂಧ ಹೆಚ್ಚಾಗಲಿದೆ.

ಮೀನ
ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ.
ಹಿರಿಯ ಸಹೋದ್ಯೋಗಿಗಳಿಂದ ಮೆಚ್ಚುಗೆ.
ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿ.

click me!