Chanakya Niti: ಆಯುಸ್ಸು ಕಡಿಮೆ ಮಾಡುವ ಆ 5 ತಪ್ಪುಗಳು!

Published : Oct 19, 2025, 02:55 PM IST
chanakya niti

ಸಾರಾಂಶ

Chanakya Niti ಆಚಾರ್ಯ ಚಾಣಕ್ಯರ ನೀತಿಯ (chanakya Niti) ಪ್ರಕಾರ, ಕೆಲವು ಕೆಟ್ಟಅಭ್ಯಾಸಗಳು, ವರ್ತನೆಗಳು ಮನುಷ್ಯನ ಆಯಸ್ಸನ್ನು ಕಡಿಮೆ ಮಾಡುತ್ತವೆ. ಹಾಗಾದರೆ ವ್ಯಕ್ತಿಯ ಜೀವನವನ್ನು ಮೊಟಕುಗೊಳಿಸುವ ಆ ಐದು ಸ್ವಭಾವಗಳು ಯಾವುವು?

ನೀತಿ ಮತ್ತು ಧರ್ಮದ ಹಾದಿಯಲ್ಲಿ ತಮ್ಮ ಸಂಪೂರ್ಣ ಜೀವನವನ್ನು ಕಳೆದವರು ಆಚಾರ್ಯ ಚಾಣಕ್ಯ. ಆದರೆ ಶತ್ರುಗಳನ್ನು  ನಿವಾರಿಸುವಲ್ಲಿ ಅನೇಕ ಕುಟಿಲ ನೀತಿಗಳನ್ನೂ ಬಳಸಿದರು. ಆದ್ದರಿಂದಲೇ ಅವರನ್ನು ಕೌಟಿಲ್ಯ ಎಂದೂ ಕರೆಯುತ್ತಾರೆ. ಹಾಗಾಗಿಯೇ ಅವರು ರಾಜಕೀಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು. ಅದನ್ನೇ ಅರ್ಥಶಾಸ್ತ್ರದಲ್ಲಿ ಸೂತ್ರಗಳಾಗಿ ಬಳಸಿ ನಮಗೆ ನೀಡಿದರು. ಅವರು ಮನುಷ್ಯನ ಜೀವನಕ್ಕೆ ಅತ್ಯಗತ್ಯವಾದ ಸಾಕಷ್ಟು ಅಂಶಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯಲ್ಲಿ ಹೇಳಿರುವ ಪ್ರಕಾರ ಯಾವೊಬ್ಬ ವ್ಯಕ್ತಿಯು ಈ ಕೆಳಗಿನಂತೆ ನಡೆದುಕೊಳ್ಳುವುದರಿಂದ ಆತನ ಆಯಸ್ಸು ಕಡಿಮೆಯಾಗುತ್ತದೆಯಂತೆ. ಅದು ಹೇಗೆ?

ಅವಹೇಳನಕಾರಿ ಮಾತು

ಚಾಣಕ್ಯನು ತನ್ನ ನೀತಿಯಲ್ಲಿ ಅಸಂಬದ್ಧವಾಗಿ ಹಾಗೂ ಅವಹೇಳನಕಾರಿಯಾಗಿ ಮಾತನಾಡುವವರೊಂದಿಗೆ ವ್ಯವಹರಿಸಬಾರದೆಂದು ಹೇಳುತ್ತಾನೆ. ಮನುಷ್ಯ ತಾನು ಇನ್ನೊಬ್ಬರೊಂದಿಗೆ ವ್ಯವಹರಿಸುವ ಮೊದಲು ಹೇಗೆ ಮಾತನಾಡಬೇಕೆಂಬುದನ್ನು ಅರಿತಿರಬೇಕೆಂದು ಹೇಳುತ್ತಾನೆ. ಇಲ್ಲವಾದರೆ ಅದೇ ಮಾತಿನಿಂದ ಆತನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನಲಾಗಿದೆ. ವ್ಯಕ್ತಿಯು ಅಗತ್ಯವಿರುವಷ್ಟೇ ಮಾತನಾಡಬೇಕು. ಅಗತ್ಯವನ್ನು ಮೀರಿ ಮಾತನಾಡಿದರೆ ಆತನ ಆಯಸ್ಸು ಕೂಡ ಕಡಿಮೆಯಾಗುತ್ತದೆ ಎಂದು ಚಾಣಕ್ಯನ ನೀತಿ ಹೇಳುತ್ತದೆ.

ನಿಯಂತ್ರಣದಲ್ಲಿರದ ಕೋಪ

ಅತಿಯಾದ ಕೋಪವುಳ್ಳವರಿಗೆ ಆಯಸ್ಸು ಕೂಡ ಕಡಿಮೆಯಿರುತ್ತದೆ ಎಂದು ಚಾಣಕ್ಯನು ಹೇಳುತ್ತಾನೆ. ಯಾವ ವ್ಯಕ್ತಿ ಹೆಚ್ಚು ಕೋಪಗೊಳ್ಳುತ್ತಾನೋ ಆ ವ್ಯಕ್ತಿ ಭವಿಷ್ಯದಲ್ಲಿ ಅದರಿಂದ ಕೆಟ್ಟ ಪರಿಣಾಮಗಳನ್ನೇ ಅನುಭವಿಸುತ್ತಾನೆ ಎಂದಿದ್ದಾರೆ. ಒಬ್ಬ ವ್ಯಕ್ತಿಯ ಕೋಪವನ್ನು ಧರ್ಮಗ್ರಂಥಗಳಲ್ಲಿ ನರಕದ ದ್ವಾರವೆಂದು ಕರೆಯಲಾಗುತ್ತದೆ. ಚಾಣಕ್ಯನು ಕೋಪವನ್ನು ಸಾಕಷ್ಟು ನಿಯಂತ್ರಣದಲ್ಲಿಟ್ಟುಕೊಂಡು ಯಾವಾಗಲು ತಾಳ್ಮೆಯಿಂದಿರಿ ಎನ್ನುತ್ತಾನೆ. ಅತಿಯಾದ ಕೋಪವುಳ್ಳವರು ನರಕಕ್ಕೆ ಹೋಗುತ್ತಾರೆ ಹಾಗೂ ಅವರ ಆಯಸ್ಸು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾನೆ.

​ದುರಾಸೆ ಮತ್ತು ಸ್ವಾರ್ಥ

ದುರಾಸೆ ಮತ್ತು ಸ್ವಾರ್ಥದ ಮೂಲಕ ಕೂಡ ಒಬ್ಬ ವ್ಯಕ್ತಿಯು ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಾನೆಂದು ಚಾಣಕ್ಯ ಹೇಳುತ್ತಾನೆ. ದುರಾಸೆ ಹಾಗೂ ಸ್ವಾರ್ಥದ ಮನೋಭಾವವುಳ್ಳವರು ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಬೇರೆಯವರಿಗೆ ತಾವು ಮಾಡುವ ಕಾರ್ಯದಿಂದ ನೋವಾದರೂ, ಬೇಸರವಾದರೂ ಪರವಾಗಿಲ್ಲ, ತಮಗೆ ಒಳ್ಳೆಯದಾದರೆ, ತಮಗೆ ಲಾಭವಾದರೆ ಸಾಕೆಂದು ಬಯಸುತ್ತಾರೆ. ಇಂತವರ ಆಯಸ್ಸು ದಿನಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ದುರಾಸೆಗಾರರು ಹಾಗೂ ಸ್ವಾರ್ಥಿಗಳು ಬೇರೆಯವರಿಗೆ ಹಾನಿ ಉಂಟು ಮಾಡಲು ಹಿಂದೆಮುಂದೆ ನೋಡಲಾರರು. ಇದಕ್ಕೆ ಉತ್ತಮ ಉದಾಹರಣೆಯಾಗಿ ನಾವು ಮಹಾಭಾರತವನ್ನೇ ತೆಗೆದುಕೊಳ್ಳಬಹುದು. ಮಹಾಭಾರತ ಯುದ್ಧವಾಗಲೂ ಕೂಡ ಇದೇ ಭಾವನೆಗಳು ಕಾರಣವಾದವು. ಈ ಭಾವನೆಗಳು ವ್ಯಕ್ತಿಯ ಆಯಸ್ಸನ್ನು ಕಡಿಮೆ ಮಾಡುತ್ತದೆ.

ಅತಿ ಅಧಿಕಾರ ಚಲಾವಣೆ

ನಮ್ಮ ಬಗ್ಗೆ ನಾವೇ ಹೆಮ್ಮೆ ಪಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ನಮ್ಮ ಬಗ್ಗೆ ಇನ್ನೊಬ್ಬರು ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಬೇಕೆಂದು ಚಾಣಕ್ಯನು ಅಭಿಪ್ರಾಯಿಸುತ್ತಾನೆ. ತನ್ನನ್ನು ತಾನು ಎಂದಿಗೂ ಕೂಡ ಆಡಳಿತಗಾರನೆಂದು ಬೀಗಬಾರದು. ಅದರ ಬದಲು ತಾನು ಸೇವಕನೆಂದು ಭಾವಿಸಿ ಉಳಿದವರಿಗೆ ಒಳಿತನ್ನು ಮಾಡಬೇಕು ಇದರಿಂದ ನಮ್ಮ ಆಯಸ್ಸು ಹೆಚ್ಚಾಗುತ್ತದೆ. ಇಲ್ಲವಾದರೆ ಆಯಸ್ಸು ದಿನಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರಗುವಿಕೆ, ನೋಯಿಸುವಿಕೆ

ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯು ತ್ಯಾಗ ಮತ್ತು ಸಮರ್ಪಣಾ ಭಾವನೆಯನ್ನು ಹೊಂದಿರಬೇಕೆಂದು ಹೇಳುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಬಗ್ಗೆ ಯೋಚಿಸುವ ಬದಲು ಇನ್ನೊಬ್ಬರ ಬಗ್ಗೆ ಯೋಚಿಸಬೇಕು. ತನ್ನಲ್ಲಿ ಏನು ಇಲ್ಲವಲ್ಲವೆಂದು ಕೊರಗುವ ಬದಲು ಇರುವುದರಲ್ಲೇ ಸುಖವನ್ನು ಅನುಭವಿಸಬೇಕು. ಏನು ಇಲ್ಲದವರ ಬಗ್ಗೆ ಯೋಚಿಸಿ, ಆ ದೇವರು ನನಗೆ ಇಷ್ಟಾದರೂ ನೀಡಿದನಲ್ಲ ಎಂದು ಯೋಚಿಸಬೇಕು. ಇತರರನ್ನು ನೋಯಿಸುವ ಬದಲು ಅವರಿಗೆ ಸಂತೋಷವನ್ನು ನೀಡಬೇಕು. ಇದ್ಯಾವುದೇ ಭಾವನೆಯನ್ನು ಹೊಂದಿರದವರು ಆದಷ್ಟು ಬೇಗ ಜೀವವನ್ನು ತ್ಯಜಿಸುತ್ತಾರೆಂದು ಚಾಣಕ್ಯ ನೀತಿಯು ಹೇಳುತ್ತದೆ.

PREV
Read more Articles on
click me!

Recommended Stories

ಸಾಲ, ಬಡತನ ಸಾಕಾಗಿದೆ ಅನ್ನೋರು ಹೊಸ ವರ್ಷದ ಮೊದಲಿಂದ್ಲೇ ಈ ಅಭ್ಯಾಸ ಬಿಟ್ಬಿಡಿ
2026 ರಲ್ಲಿ ಹಂಸ-ಮಾಳವ್ಯ ಡಬಲ್ ರಾಜಯೋಗ, ಈ ರಾಶಿ ಹಣದ ಪೆಟ್ಟಿಗೆ ಪಕ್ಕಾ ಫುಲ್