Chanakya Niti: ಇಂಥ ಜಾಗದಲ್ಲಿ ನಿಮ್ಮ ಚಪ್ಪಲಿ ಕೂಡ ಬಿಡಬೇಡಿ ಅಂತಾರೆ ಚಾಣಕ್ಯ!

Published : Aug 28, 2025, 08:00 AM IST
chanakya

ಸಾರಾಂಶ

ಆಚಾರ್ಯ ಚಾಣಕ್ಯರ ನೀತಿಗಳು ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.  ಆತ್ಮಗೌರವ, ಸ್ವಾಭಿಮಾನ ಬಹಳ ಮುಖ್ಯ. ಅದನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಅಂಥ ಕೆಲವು ಜಾಗಗಳಲ್ಲಿ ಚಪ್ಪಲಿ ಕೂಡ ಬಿಡಬಾರದು ಎನ್ನುತ್ತಾರೆ ಚಾಣಕ್ಯ.

ಆಚಾರ್ಯ ಚಾಣಕ್ಯರು ಹೇಳದೇ ಇರುವ ನೀತಿಯಿಲ್ಲ, ಆಡದೇ ಇರುವ ಸಂಗತಿಯಿಲ್ಲ. ಚಾಣಕ್ಯ ನೀತಿಯ ಮೂಲಕ ಒಬ್ಬ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದ್ದಾರೆ. ಎಷ್ಟೇ ವರ್ಷಗಳು ಕಳೆದರೂ ಜನರಿಗೆ ಅದು ಉಪಯುಕ್ತಕರವಾಗಿದೆ. ಜೀವನದಲ್ಲಿ ಹಣಕ್ಕಿಂತ ಮುಖ್ಯವಾದ ಮತ್ತು ಮೌಲ್ಯಯುತವಾದ ಅನೇಕ ವಿಷಯಗಳಿವೆ. ಅವುಗಳ ಕಡೆಗೆ ನಾವು ಗಮನವನ್ನು ಕೊಡಬೇಕು. ಹಣವನ್ನಾದರೂ ನಾವು ಒಮ್ಮೆ ಕಳೆದುಕೊಂಡರೆ ಮರಳಿ ಗಳಿಸಬಹುದು. ಆದರೆ ಇನ್ನು ಕೆಲವನ್ನು ಕಳೆದುಕೊಂಡರೆ ಮರಳಿ ಗಳಿಸಲು ಸಾಧ್ಯವಿಲ್ಲ. ಮತ್ತು, ಅಂಥವು ನಮಗೆ ಸಿಗದೇ ಹೋಗುವಂಥ ಜಾಗದಲ್ಲಿ ನಮ್ಮ ಚಪ್ಪಲಿ ಕೂಡ ಬಿಡಬಾರದು ಅಂತಾರೆ ಚಾಣಕ್ಯ. ಅವು ಯಾವುವು?

1. ಆತ್ಮಗೌರವಕ್ಕೆ ಧಕ್ಕೆ

ಆಚಾರ್ಯ ಚಾಣಕ್ಯರು ಹಣಕ್ಕಿಂತಲೂ ಸ್ವಾಭಿಮಾನ ತುಂಬಾನೇ ಮುಖ್ಯವೆಂದು ಹೇಳಿದ್ದಾರೆ. ಸ್ವಾಭಿಮಾನಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಜಾಗದಲ್ಲಿ ನೀವು ಇರಬಾರದು. ಒಮ್ಮೆ ನಾವು ಹಣವನ್ನು ಕಳೆದುಕೊಂಡರೆ ಅದನ್ನು ಮರಳಿ ಗಳಿಸಬಹುದು. ಆದರೆ ಸ್ವಾಭಿಮಾನ ಅಥವಾ ಗೌರವವಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಹಣದ ಮುಂದೆ ಗೌರವ, ಸ್ವಾಭಿಮಾನವನ್ನು ಬಿಡಬಾರದು.

2. ಧರ್ಮಕ್ಕೆ ಹಾನಿ

ಚಾಣಕ್ಯ ನೀತಿ ಪ್ರಕಾರ, ಧರ್ಮವು ಹಣಕ್ಕಿಂತ ಹೆಚ್ಚು ಮೌಲ್ಯವನ್ನು ಹೊಂದಿದೆ. ಮತ್ತು ಮುಖ್ಯವಾದ ಅಂಶವಾಗಿದೆ. ಧರ್ಮ ಮತ್ತು ಹಣ ಈ ಎರಡರಲ್ಲಿ ಯಾವುದು ಮುಖ್ಯವೆಂದು ಬಂದಾಗ ಮೊದಲು ನಾವು ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಧರ್ಮವು ಹಣಕ್ಕಿಂತ ಪ್ರಮುಖವಾದ ವಿಚಾರವಾಗಿದೆ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಮಾತಿದೆ. ಧರ್ಮಕ್ಕೆ ಧಕ್ಕೆ ಉಂಟಾಗುವಂಥ ಜಾಗದಲ್ಲಿ, ಅಧರ್ಮ ನಡೆಯುವಂಥ ಜಾಗದಲ್ಲಿ ನಮ್ಮ ಚಪ್ಪಲಿ ಕೂಡ ಬಿಡಬಾರದು.

3. ಸಂಬಂಧಕ್ಕೆ ಅಪ್ರಾಮುಖ್ಯತೆ

ಸಂಬಂಧದ ಕುರಿತು ಗೌರವ, ರೀತಿ, ಪ್ರಾಮುಖ್ಯತೆ ಕೊಡದೆ ಹೋದಲ್ಲಿ ಕಾಲಿಡಬಾರದು. ನೀವು ಹಿರಿಯರಾಗಿದ್ದರೆ ನಿಮಗೆ ಬಂಧುಗಳಲ್ಲಿ ಗೌರವ ಸಿಗಬೇಕು. ಕಿರಿಯರಾಗಿದ್ದರೆ ಪ್ರೀತಿ ಸಿಗಬೇಕು ಎರಡೂ ಸಿಗದೆ ಹೋದಲ್ಲಿ ಇರುವುದು ವೇಸ್ಟ್.‌ ಕುಟುಂಬ ಮತ್ತು ಸಂಬಂಧಿಕರಿಲ್ಲದೆ ಬದುಕಬಹುದು, ಆತ್ಮಗೌರವವಿಲ್ಲದೆ ಬದುಕಲಾಗದು ಎಂಬ ಪಾಠವನ್ನು ಇಂಥವರಗೆ ಮನದಟ್ಟು ಮಾಡಿಸಬೇಕು.

4. ನಕಾರಾತ್ಮಕತೆ

ತನಗೆ ಏನೋ ಸಿಕ್ಕಿಲ್ಲ ಎಂದು ಸದಾ ಕೊರಗುವವರು, ನಿಮ್ಮನ್ನು ನೋಡಿದ ಕೂಡಲೇ ಏನಾದರೊಂದು ಕೊಂಕು ಹುಡುಕಿ ಟೀಕಿಸುವವರು, ನೀವು ಮಾಡಿದ ಕೆಲಸಗಳಲ್ಲೆಲ್ಲಾ ತಪ್ಪು ಹುಡುಕುವವರು, ನಿಮ್ಮ ದೇಹದಲ್ಲಿ ದೋಷ ಕಾಣುವವರು, ನಿಮ್ಮ ಸಂಬಂಧಿಗಳಲ್ಲಿ ದುಷ್ಟತನವನ್ನು ಕಾಣುವವರು- ಇಂಥವರು ಇರುವ ಕಡೆ ಕಾಲು ಕೂಡ ಹಾಕಬೇಡಿ. ಇವರು ನಿಮ್ಮ ಮನಸ್ಸನ್ನು ವಿಷಮಯ ಮಾಡಿಬಿಡುತ್ತಾರೆ.

5. ಚಾಡಿಕೋರರು

ಚಾಡಿ ಹೇಳುವವರ ಮನೆ ಮುಂದೆ ಸಹ ಹೋಗಬೇಡಿ. ಇಂದು ನಿಮ್ಮ ಗೆಳೆಯನ ಬಗ್ಗೆ ನಿಮ್ಮ ಬಳಿ ಚಾಡಿ ಹೇಳುವವರು, ನಾಳೆ ನಿಮ್ಮ ಬಗ್ಗೆ ನಿಮ್ಮ ಗೆಳೆಯನ ಬಳಿ ಚಾಡಿ ಹೇಳಲಾರ ಎಂಬ ಗ್ಯಾರಂಟಿ ಏನಿದೆ?

6. ಸುಳ್ಳುಬುರುಕರು

ಕೆಲವರಿರುತ್ತಾರೆ, ಇವರು ಬಾಯಿ ತೆರೆದರೆ ಉದುರುವುದೇ ಸುಳ್ಳುಗಳು. ನಿಮ್ಮ ಕಣ್ಣ ಮುಂದೆಯೇ ಇದ್ದರೂ ನಾನು ನಿಮ್ಮನ್ನು ನೋಡಿಯೇ ಇಲ್ಲ ಎಂಬ ಲೆವೆಲ್‌ನವರೆಗೂ ಸುಳ್ಳು ಬೊಗಳುತ್ತಿರುತ್ತಾರೆ. ಇಂಥವರ ಮನೆ ಮುಂದೆ ನೀವು ಚಪ್ಪಲಿ ಬಿಡುವುದು ಕೂಡ ಅಪಾಯಕರ.

7. ಶಿಸ್ತು ಇಲ್ಲದವರು

ಕೆಲಸದಲ್ಲಿ ಶಿಸ್ತು ಇಲ್ಲದವರು, ಸ್ವಯಂ ನಿಯಂತ್ರಣ ಇಟ್ಟುಕೊಳ್ಳದವರು, ಹೇಳಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸದವರು, ಕಾರಣಗಳನ್ನು ನೀಡುತ್ತಾ ಮುಂದೂಡುವವರು, ಇಂಥವರ ಕಡೆ ನಿಮ್ಮ ಓಡಾಟ ಹೆಚ್ಚು ಇಲ್ಲದಿರಲಿ.

8. ಸಾಲಗಾರರು

ಕೆಲವರು ಎಲ್ಲರ ಬಳಿಯೂ ಕೈಚಾಚುತ್ತಿರುತ್ತಾರೆ. ಕೊಂಡ ಹಣವನ್ನು ಸದುಪಯೋಗ ಮಾಡದೆ, ಹೇಗೆ ಹೇಗೋ ಖರ್ಚು ಮಾಡಿ, ಮತ್ತೆ ಇತರರ ಮುಂದೆ ಸಾಲ ಕೇಳುತ್ತಾರೆ. ಹಣದ ಸದ್ವಿನಿಯೋಗ ಇವರಿಗೆ ಗೊತ್ತಿರುವುದಿಲ್ಲ. ನಿಮ್ಮಿಂದ ಸಾಲ ಕೊಂಡ ಹಣಕ್ಕೂ ಅವರು ಗೌರವ ಕೊಡುವುದಿಲ್ಲ. ಹಾಗಿರುವಾಗ ಇಂಥವರಿಗೆ ಗೌರವ ಹೇಗೆ ನಿರೀಕ್ಷಿಸುತ್ತೀರಿ? ಇವರು ಕೊಡುವ ಗೌರವ ನೀವು ಸಾಲ ಕೊಡುವವರೆಗೆ ಮಾತ್ರ. ಸಾಲ ಮರಳಿ ಕೇಳಲು ಹೋದಾಗ ನಿಮ್ಮನ್ನು ಅವರು ನೋಡುವ ರೀತಿಯೇ ಬೇರೆ.

 

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!