Manifestation: ನಾಳೆ ಭಾದ್ರಪದ ಹುಣ್ಣಿಮೆ- ರಾತ್ರಿ 10.19ಕ್ಕೆ ಹೀಗೆ ಮಾಡಿದ್ರೆ ನಿಮ್ಮ ಜೀವನವೇ ಬದಲಾಗ್ಬೋದು

Published : Sep 25, 2026, 06:36 PM IST
Moon Manifestation

ಸಾರಾಂಶ

ಸೆಪ್ಟೆಂಬರ್ 26ರ ಭಾದ್ರಪದ ಹುಣ್ಣಿಮೆಯು ಪಿತೃಪಕ್ಷದ ಆರಂಭ ಹಾಗೂ ಸತ್ಯನಾರಾಯಣ ಪೂಜೆಗೆ ಅತ್ಯಂತ ಶ್ರೇಷ್ಠ ದಿನವಾಗಿದೆ. ಈ ದಿನ ರಾತ್ರಿ 10.19ರ ವಿಶೇಷ ಘಳಿಗೆಯಲ್ಲಿ ಚಂದ್ರ ಮಂತ್ರ ಪಠಿಸಿ ಸಂಕಲ್ಪ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ಉಪವಾಸ ವ್ರತವು ಕಷ್ಟಗಳನ್ನು ದೂರ ಮಾಡಿ ಸಮೃದ್ಧಿ ತರುತ್ತದೆ.

ನಾಳೆ ಅರ್ಥಾತ್​ ಸೆಪ್ಟೆಂಬರ್​ 26ರಂದು ಭಾದ್ರಪದ ಮಾಸದ ಹುಣ್ಣಿಮೆ. ನಾಳೆಯಿಂದ ಪಿತೃಪಕ್ಷದ ಆರಂಭ ಕೂಡ. ಈ ದಿನವು ಹಿಂದೂ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಪೂರ್ಣಿಮೆಯಂದು, ಭಕ್ತರು ವಿಷ್ಣುವಿನ ಅಭಿವ್ಯಕ್ತಿಯಾದ ಸತ್ಯನಾರಾಯಣನನ್ನು ಪೂಜಿಸುತ್ತಾರೆ. ಪೂರ್ಣಿಮೆ ತಿಥಿಯು ಚಂದ್ರನ ಚಕ್ರದ ಪೂರ್ಣತೆಯನ್ನು ಸೂಚಿಸುತ್ತದೆ ಮತ್ತು ಪೂಜೆ ಮತ್ತು ಪವಿತ್ರ ವ್ರತಗಳಿಗೆ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಈ ದಿನ, ಸೂರ್ಯೋದಯ ಬೆಳಿಗ್ಗೆ 06:20 ಕ್ಕೆ ಮತ್ತು ಸೂರ್ಯಾಸ್ತ ಸಂಜೆ 06:15 ಕ್ಕೆ ನಿರೀಕ್ಷಿಸಲಾಗಿದೆ, ಆದರೆ ಚಂದ್ರೋದಯ ಸಂಜೆ 06:00 ಕ್ಕೆ ಮತ್ತು ಚಂದ್ರಾಸ್ತ ಬೆಳಿಗ್ಗೆ 06:39 ಕ್ಕೆ ಎಂದು ಊಹಿಸಲಾಗಿದೆ. ಅತ್ಯಂತ ಪವಿತ್ರ ಪೂರ್ಣಿಮೆ ತಿಥಿ ಸೆಪ್ಟೆಂಬರ್ 25 ರಂದು ರಾತ್ರಿ 11:07 ಕ್ಕೆ ಪ್ರಾರಂಭವಾಗಿ ಮರುದಿನ ರಾತ್ರಿ ಅರ್ಥಾತ್​ ಸೆ.26ರ ರಾತ್ರಿ 10:19 ಕ್ಕೆ ಕೊನೆಗೊಳ್ಳುತ್ತದೆ.

ನೀವು ಹೀಗೆ ಮಾಡಿ

ಈ ಹಿನ್ನೆಲೆಯಲ್ಲಿ ರಾತ್ರಿ 10.19 ವಿಶೇಷ ಘಳಿಗೆ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ನೀವು ಚಂದ್ರ ಮಂತ್ರವನ್ನು ಹೇಳುವುದರ ಜೊತೆಗೆ ಹೀಗೆ ಸಂಕಲ್ಪ ಮಾಡಿಕೊಂಡರೆ (Manifestation) ಶೀಘ್ರದಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಿಗಳೂ ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ. ಸಾಧ್ಯವಾದರೆ ತಲೆ ಸ್ನಾನ ಮಾಡಿ. ಬಳಿಕ ನಿಮಗೆ ಟೆರೇಸ್​ ಮೇಲೆ ಹೋಗುವ ಅವಕಾಶ ಇದ್ದರೆ, ಅಥವಾ ಮನೆಯ ಎದುರೇ ಚಂದ್ರ ಕಾಣಿಸುವ ಹಾಗಿದ್ದರೆ ತುಂಬಾ ಒಳ್ಳೆಯದು. ಒಂದು ವೇಳೆ ಹೀಗೆ ಯಾವುದೇ ಅವಕಾಶ ಇಲ್ಲದಿದ್ದರೂ, ಹೊರಗಡೆ ಚಂದ್ರನ ಬೆಳಕಿಗೆ ಹೋಗಿ. ಅಲ್ಲಿ ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿಕೊಂಡು ಅದರ ಮೇಲೆ ಚಂದ್ರನ ಬೆಳಕು ಬೀಳುವಂತೆ ಮಾಡಿ. ಬಳಿಕ 108 ಬಾರಿ ಚಂದ್ರನ ಮಂತ್ರ ಓಂ ಶ್ರಾಂ ಶ್ರೀಂ ಶೃಂ ಚಂದ್ರಾಯ ನಮಃ ಎಂದು ಪಠಿಸಿ ನೀರನ್ನು ಕುಡಿಯಿರಿ. ಇದರಿಂದ ಶೀಘ್ರದಲ್ಲಿ ನಿಮ್ಮ ಆಸೆ ನೆರವೇರಿದೆ ಎನ್ನುವ ನಂಬಿಕೆ ಇದೆ.

ಸತ್ಯನಾರಾಯಣ ವ್ರತದ ಮಹತ್ವ

ಸತ್ಯನಾರಾಯಣ ವ್ರತದ ಮಹತ್ವವನ್ನು ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ, ಅಲ್ಲಿ ವಿಷ್ಣುವು ಹುಣ್ಣಿಮೆಯಂದು ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ಪೂಜಿಸುವವರು ಕಷ್ಟಗಳಿಂದ ಮುಕ್ತರಾಗುತ್ತಾರೆ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ ಎಂದು ವಿವರಿಸುತ್ತಾರೆ. ಹುಣ್ಣಿಮೆಯು ಆಧ್ಯಾತ್ಮಿಕ ಶಕ್ತಿಯನ್ನು ವರ್ಧಿಸುತ್ತದೆ, ಇದು ಭಕ್ತಿ ಮತ್ತು ಧ್ಯಾನಕ್ಕೆ ಸೂಕ್ತವಾಗಿದೆ ಎಂದು ನಂಬಲಾಗಿದೆ. ಅನೇಕ ಭಕ್ತರು ಇದನ್ನು ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಮಹಾ ಮೃತ್ಯುಂಜಯ ಪೂಜೆ ಮತ್ತು ಇತರ ಪವಿತ್ರ ವಿಧಿಗಳನ್ನು ಮಾಡಲು ಸೂಕ್ತ ದಿನವೆಂದು ಪರಿಗಣಿಸುತ್ತಾರೆ.

ಪೂರ್ಣಿಮೆ ಸ್ನಾನ

ಭಕ್ತರು ದಿನವಿಡೀ ಭಾದ್ರಪದ ಪೂರ್ಣಿಮೆ ವ್ರತವನ್ನು ಗಂಗಾ, ಯಮುನಾ ಮತ್ತು ನರ್ಮದಾ ಪವಿತ್ರ ನದಿಗಳಲ್ಲಿ ಪೂರ್ಣಿಮೆ ಸ್ನಾನದ ಜೊತೆಗೆ ಆಚರಿಸುತ್ತಾರೆ. ಅತ್ಯಂತ ಪೂಜ್ಯ ಪಂಚಾಮೃತ ಸ್ನಾನ ಮತ್ತು ಪೂಜಾ ಸಮಾರಂಭಗಳ ನಂತರ ಸತ್ಯನಾರಾಯಣ ಕಥೆಯ ಪಠಣವು ದಿನದ ಅವಿಭಾಜ್ಯ ಅಂಗಗಳಾಗಿವೆ. ವ್ರತವನ್ನು ಆಚರಿಸುವವರು ಸಂಜೆ ಸತ್ಯನಾರಾಯಣ ಕಥವನ್ನು ಓದಿದ ನಂತರ ಮಾತ್ರ ತಮ್ಮ ಹಗಲಿನ ಉಪವಾಸವನ್ನು ಬಿಡುತ್ತಾರೆ. ಇದರ ಜೊತೆಗೆ, ಈ ದಿನದಂದು ವಿಷ್ಣು, ಬ್ರಹ್ಮ, ಶಿವ ಮತ್ತು ಲಕ್ಷ್ಮಿ ದೇವಿಯ ಕಥೆಗಳನ್ನು ಓದುವುದನ್ನು ಪುಣ್ಯವೆಂದು ಪರಿಗಣಿಸಲಾಗುತ್ತದೆ.

PREV
Read more Articles on
click me!

Recommended Stories

ಪಿತೃ ಪಕ್ಷದಲ್ಲಿ ಕಾಗೆನೇ ಯಾಕೆ? ಇದರ ಹಿಂದಿದೆ ಕುತೂಹಲದ ಕಾರಣ- ಕಾಗೆ ಬಾರದಿದ್ರೆ ಹೀಗೂ ಮಾಡ್ಬೋದು
ಕಾಗೆ ಎಡೆ ಮುಟ್ಟದಿದ್ರೆ ಅತೃಪ್ತಿನಾ? ಪಿತೃಪಕ್ಷ ಮೂಢನಂಬಿಕೆಯಲ್ಲ, ಆದರೆ ನಿಮಗಿರೋ ತಪ್ಪು ಕಲ್ಪನೆಗಳಿವು!