ಪಿತೃ ಪಕ್ಷದಲ್ಲಿ ಕಾಗೆನೇ ಯಾಕೆ? ಇದರ ಹಿಂದಿದೆ ಕುತೂಹಲದ ಕಾರಣ- ಕಾಗೆ ಬಾರದಿದ್ರೆ ಹೀಗೂ ಮಾಡ್ಬೋದು

Published : Sep 25, 2026, 06:17 PM IST
Pitru Paksha

ಸಾರಾಂಶ

ಪಿತೃ ಪಕ್ಷದಲ್ಲಿ ಪೂರ್ವಜರು ಕಾಗೆಯ ರೂಪದಲ್ಲಿ ಬಂದು ಆಹಾರ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ರಾಮಾಯಣದ ಜಯಂತನ ಕಥೆ ಹಾಗೂ ಗರುಡ ಪುರಾಣದ ಪ್ರಕಾರ ಕಾಗೆಗಳಿಗೆ ಈ ವಿಶೇಷ ವರ ಲಭಿಸಿದೆ. ಕಾಗೆ ಸಿಗದಿದ್ದರೆ ಹಸು, ನಾಯಿ ಅಥವಾ ಅರಳಿ ಮರಕ್ಕೂ ಪೂಜೆ ಸಲ್ಲಿಸಿ ಪಿತೃಗಳನ್ನು ತೃಪ್ತಿಪಡಿಸಬಹುದು.

ನಾಳೆ ಅರ್ಥಾತ್​ ಸೆಪ್ಟೆಂಬರ್​ 26ರಿಂದ ಪಿತೃ ಪಕ್ಷ ಆರಂಭ. ಇದು ಅಕ್ಟೋಬರ್ 10 ರಂದು ಸರ್ವ ಪಿತ್ರ ಅಮಾವಾಸ್ಯೆಯೊಂದಿಗೆ ಕೊನೆಗೊಳ್ಳುತ್ತದೆ. ಪಿತೃಗಳಿಗೆ ನೀಡುವ ಆಹಾರ ಅರ್ಥಾತ್​ ಪಿಂಡ ಪ್ರಧಾನ ಅಥವಾ ಶ್ರಾದ್ಧದ ಊಟ ಕಾಗೆಗೆ ತಿನ್ನಿಸುವ ಸಂಪ್ರದಾಯ ನಮ್ಮಲ್ಲಿದೆ. ಕಾಗೆ ಬಂದು ಆ ಆಹಾರವನ್ನು ಸೇವಿಸಿದರೆ, ಪಿತೃಗಳು ತೃಪ್ತರಾದರು ಮತ್ತು ನಮಗೆ ಆಶೀರ್ವಾದ ಮಾಡಿದರು ಎಂದು ಭಾವಿಸಲಾಗುತ್ತದೆ. ಹಾಗಿದ್ದರೆ ದಿನನಿತ್ಯವೂ ಮನೆ ಬಾಗಿಲಿಗೆ ಬಂದರೆ ಹುಷ್​ ಹುಷ್​ ಎಂದು ಓಡಿಸುವ ಕಾಗೆಯೇ ಈ ತಿಂಗಳಲ್ಲಿ ಎಲ್ಲರಿಗೂ ಪ್ರಿಯವಾಗುವುದು ಏಕೆ? ಪಿತೃಪಕ್ಷದಲ್ಲಿ ಬೇರೆಲ್ಲಾ ಪಕ್ಷಿ ಬಿಟ್ಟು ಕಾಗೆಗೇ ಏಕಿಷ್ಟು ಮಹತ್ವ ಎಂದೆಲ್ಲಾ ಹಲವರು ತಲೆ ಕೆಡಿಸಿಕೊಂಡಿರಬಹುದು. ಅದಕ್ಕೆ ಇಲ್ಲಿದೆ ಕುತೂಹಲದ ಕಾರಣ.

ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಕಾಗೆಯನ್ನು ಯಮರಾಜನ ದೂತ ಅಥವಾ ಪಿತೃಗಳ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ನಮ್ಮ ಪೂರ್ವಜರು ಕಾಗೆಯ ರೂಪದಲ್ಲಿ ಭೂಮಿಗೆ ಬಂದು, ವಂಶಸ್ಥರು ಇಡುವ ಆಹಾರವನ್ನು ಸ್ವೀಕರಿಸುತ್ತಾರೆ ನಂಬಿಕೆಯಿದೆ. ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲೂ ಕಾಗೆಗಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಶ್ರೀರಾಮನು ಕಾಗೆಯ ರೂಪದಲ್ಲಿದ್ದ ಜಯಂತನಿಗೆ ನೀಡಿದ ವರದಂತೆ, ಕಾಗೆಗೆ ಹಾಕುವ ತುತ್ತು ನೇರವಾಗಿ ಪಿತೃಗಳಿಗೆ ತಲುಪುತ್ತದೆ ಎಂಬ ಐತಿಹಾಸಿಕ ನಂಬಿಕೆಯಿದೆ.

ಇಂದ್ರನ ಮಗ ಜಯಂತನ ಕಥೆ

ಭಗವಾನ್ ಇಂದ್ರನ ಮಗ ಜಯಂತನು ಸೀತಾದೇವಿಯ ಮೇಲೆ ಆಕರ್ಷಿತನಾದನು. ಅದಕ್ಕಾಗಿ ಆತ ಹಸುವಿನ ರೂಪವನ್ನು ಪಡೆದನು. ಆದರೆ ಅವನ ಪ್ರಸ್ತಾಪವನ್ನು ಸೀತೆ ತಿರಸ್ಕರಿಸಿದಳು. ಇದರಿಂದ ಕೋಪಗೊಂಡ ಅವನು ತಾಯಿ ಸೀತೆಯ ಮೇಲೆ ಆಕ್ರಮಣ ಮಾಡಿದನು. ಇದರಿಂದ ರಾಮನು ಅವನನ್ನು ಬ್ರಹ್ಮಾಸ್ತ್ರದಿಂದ ಬಲವಾಗಿ ದಾಳಿ ಮಾಡಿದನು. ಸ್ವಲ್ಪ ಸಮಯದ ನಂತರ ಜಯಂತನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ಶ್ರೀರಾಮನಲ್ಲಿ ಕ್ಷಮೆಯಾಚಿಸಿದನು. ಭಗವಾನ್ ರಾಮನು ಶುದ್ಧ ಹೃದಯವನು. ಶ್ರೀರಾಮನು ಅವನನ್ನು ಕ್ಷಮಿಸಿದನು. ಪಿತೃಪಕ್ಷದ ಸಮಯದಲ್ಲಿ ನಿಮಗೆ ಆಹಾರವನ್ನು ನೀಡಲಾಗುವುದು. ಅದನ್ನು ದೈವಿಕ ಬೆಂಬಲದ ಮೂಲಕ ಪೂರ್ವಜರಿಗೆ ತಲುಪಿಸಲಾಗುವುದು ಎಂದು ಅವರು ವರವನ್ನು ನೀಡಿದರು ಎಂದು ಪುರಾಣಗಳು ಹೇಳುತ್ತವೆ.

ಗರುಡ ಪುರಾಣದಲ್ಲಿ ಏನಿದೆ?

ಗರುಡ ಪುರಾಣದಲ್ಲಿ ಕಾಗೆಯನ್ನು ಯಮರಾಜನ ವಾಹನ ಎಂದು ಹೇಳಲಾಗಿದೆ. ಯಮನು ಒಮ್ಮೆ ಪ್ರಸಿದ್ಧ ರಾಜ-ಮಾರುತಿಯ ಯಜ್ಞದ ಸಂದರ್ಭದಲ್ಲಿ ಕಾಗೆಗೆ ಪಿತೃಪಕ್ಷದ ಪವಿತ್ರ ದಿನಗಳಲ್ಲಿ ಪ್ರಾಮುಖ್ಯತೆಯನ್ನು ನೀಡುವುದಾಗಿ ವರವನ್ನು ನೀಡಿದನಂತೆ. ಕಾಗೆಗೆ ನೀಡುವ ಆಹಾರ ಪೂರ್ವಜರ ಆತ್ಮವನ್ನು ಶಾಂತಗೊಳಿಸುತ್ತದೆ ಎಂದನಂತೆ. ಮಾತ್ರವಲ್ಲದೆ ಹಿಂದೂ ಧರ್ಮದ ಅನೇಕ ಪೌರಾಣಿಕ ಸಂಪ್ರದಾಯಗಳಲ್ಲಿ ಕಾಗೆಗೆ ದೇವರ ಸ್ಥಾನವನ್ನು ನೀಡಲಾಗಿದೆ.

ಕಾಗೆ ಸಿಗದಿದ್ದರೆ ಏನು ಮಾಡಬೇಕು?

ಪಿತೃ ಪಕ್ಷದ ಸಮಯದಲ್ಲಿ ಕಾಗೆಗೆ ಪ್ರತಿದಿನ ಆಹಾರವನ್ನು ನೀಡಬೇಕು. ಒಂದು ವೇಳೆ ಕಾಗೆ ಕಾಣದಿದ್ದರೆ ನಾಯಿ ಮತ್ತು ಹಸುವಿಗೆ ಆಹಾರ ನೀಡಬೇಕು. ಇಲ್ಲ ಅರಳಿ ಮರಕ್ಕೆ ನೀರನ್ನು ಅರ್ಪಿಸುವುದು ಸಹ ಮೂಲಕವೂ ಪಿತೃಗಳಿಗೆ ಆಹಾರ ನೀಡುವ ಕಾರ್ಯ ನಡೆಸಬಹುದು. ಅರಳಿ ಮರವನ್ನು ಕೂಡ ಪೂರ್ವಜರ ಸಂಕೇತವಾಗಿದೆ. ಆದ್ದರಿಂದ ಈ ಮಾಸದಲ್ಲಿ ಅರಳಿ ಮರವನ್ನು ಪೂಜೆಯನ್ನು ಮಾಡಬೇಕು ಎಂಬ ನಿಯಮ ಇದೆ.ನಮ್ಮ ಪೂರ್ವಜರು ಕಾಗೆಯನ್ನು ಶನಿ ದೇವ ಎಂದು ನೋಡುತ್ತಿದ್ದರು. ಕಾಗೆ ಆಹಾರ ಹಂಚಿ ತಿನ್ನುವ ಗುಣ ಹೊಂದಿದ್ದು ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸುವ ಶಕ್ತಿಯಾಗಿ ಇದರ ಆಚರಣೆ ನಡೆಸಿದರು. ಪಿತೃಪಕ್ಷದಲ್ಲಿ ಹಸುವಿಗೂ ಆಹಾರವನ್ನು ನೀಡಲಾಗುತ್ತದೆ.

PREV
Read more Articles on
click me!

Recommended Stories

ಕಾಗೆ ಎಡೆ ಮುಟ್ಟದಿದ್ರೆ ಅತೃಪ್ತಿನಾ? ಪಿತೃಪಕ್ಷ ಮೂಢನಂಬಿಕೆಯಲ್ಲ, ಆದರೆ ನಿಮಗಿರೋ ತಪ್ಪು ಕಲ್ಪನೆಗಳಿವು!
Neem Karoli Baba: ನೀರಿನಿಂದ ತುಪ್ಪ-ಪೆಟ್ರೋಲ್; ಇದು ಹನುಮನ ಅವತಾರ ಪುರುಷ ನೀಮ್ ಕರೋಲಿ ಬಾಬಾ ಪವಾಡ!