ಮಂತ್ರ, ಜಪದಿಂದ ಪ್ರಯೋಜನವಿದೆಯೇ?

By Kannadaprabha News  |  First Published Jul 10, 2019, 4:03 PM IST

ಪ್ರತಿ ಹಳೆಯ ಆಚಾರ, ವಿಚಾರಗಳಿಗೂ ವೈಜ್ಞಾನಿಕ ಕಾರಣಗಳಿವೆ. ಕೆಲವೊಂದು ಪ್ರೂವ್ ಆಗದಿದ್ದರೂ ನಮ್ಮ ಅರಿವಿಗೆ ಬಾರದಂತೆ ನಮ್ಮ ಮೇಲೆ ಪಾಸಿಟಿವ್ ಪರಿಣಾಮ ಬೀರುವುದಂತೂ ಸುಳ್ಳಲ್ಲ. ಇಂಥ ಜಪವನ್ನು ಏಕೆ ಪಠಿಸಬೇಕು?


ಮಂತ್ರ ಹಾಗೂ ಜಪದಿಂದ ಪ್ರಯೋಜನವಿದೆಯೇ ಇಲ್ಲವೇ ಎಂಬುದು ಅಂತಿಮವಾಗಿ ಅವರವರ ನಂಬಿಕೆಗೆ ಬಿಟ್ಟದ್ದು. ಆದರೆ, ನಂಬಿಕೆ ಇಟ್ಟು ಮಂತ್ರ ಪಠಿಸುವವರ ಮೇಲೆ ಇದರಿಂದ ಸಾಕಷ್ಟು ಪರಿಣಾಮಗಳಂತೂ  ಇವೆ.

ಅವು ಮಾನಸಿಕ ಹಾಗೂ ದೈಹಿಕ ಪರಿಣಾಮಗಳು. ದೇವರನ್ನು ಸ್ತುತಿಸುವ ಸ್ವರಸಹಿತ ಎಲ್ಲ ವಾಕ್ಯಗಳನ್ನೂ ಸಾಮಾನ್ಯವಾಗಿ ಮಂತ್ರ ಎನ್ನಲಾಗುತ್ತದೆ. ಒಂದೇ ಮಂತ್ರವನ್ನು ಹಲವು ಬಾರಿ ಮತ್ತೆ ಮತ್ತೆ ಪಠಿಸುತ್ತ ಹೋದರೆ ಅದೇ ಜಪವಾಗುತ್ತದೆ. ಜಪಕ್ಕೆ ನಮ್ಮ ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಇದೆ. ಏಕಾಗ್ರಚಿತ್ತರಾಗಿ ದೀರ್ಘಕಾಲ ಜಪ ಮಾಡಿದರೆ ಅದೇ ತಪಸ್ಸು. ಅದಕ್ಕೆ ಇಂತಹುದೇ ಮಂತ್ರವಾಗಿರಬೇಕು ಎಂದೇನೂ ಇಲ್ಲ.
ಮಂತ್ರಗಳಿಗೆ ಒಂದು ಸ್ವರವಿರುತ್ತದೆ. ಅದನ್ನು ಸ್ವರಸಹಿತವಾಗಿ ಸರಿಯಾಗಿ ಉಚ್ಚರಿಸಿದರೆ ನಮ್ಮ ಮಾತು ಶುದ್ಧವಾಗುತ್ತದೆ. ತೊದಲುವಿಕೆ ಹೋಗುತ್ತದೆ. ಸ್ವರದಲ್ಲಿನ ಏರಿಳಿತವನ್ನು ಸರಿಯಾಗಿ ಪಾಲಿಸಿದರೆ ಹೃದಯದ ಬಡಿತ, ಶ್ವಾಸೋಚ್ಛ್ವಾಸ ಹಾಗೂ ಹೊಟ್ಟೆ ಸ್ನಾಯುಗಳ ಚಲನೆಯೂ ಅದಕ್ಕೆ ತಕ್ಕಂತೆ ಬದಲಾಗುತ್ತದೆ. ಇದಕ್ಕೂ ಆರೋಗ್ಯಕ್ಕೂ ಸಂಬಂಧವಿದೆ.

Tap to resize

Latest Videos

ಅರ್ಥವನ್ನು ತಿಳಿದುಕೊಂಡು ಮಂತ್ರ ಪಠಿಸಿದರೆ ಮಾತ್ರ ಫಲ ಎಂದೇನೂ ಇಲ್ಲ. ಅರ್ಥ ಗೊತ್ತಿಲ್ಲದಿದ್ದರೂ ಮಂತ್ರದ ಪದಗಳಲ್ಲಿರುವ ಆಂತರಿಕ ಶಕ್ತಿಗೆ ನಮ್ಮ ಸುಪ್ತ ಮನಸ್ಸು ನಮಗೆ ಗೊತ್ತಿಲ್ಲದೆಯೇ ಪ್ರತಿಕ್ರಿಯಿಸುತ್ತದೆ. ಅದು ಭಾವನೆಗಳನ್ನು ಉದ್ದೀಪಿಸುತ್ತದೆ ಎಂದು ಹೇಳಲಾಗಿದೆ. ಏಕಾಗ್ರತೆಯಿಂದ ಮಂತ್ರ ಪಠಿಸುವವರು ಅಥವಾ ಅದನ್ನು ಕೇಳುವವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅವರು ಬೇರೆಯದೇ ಲೋಕದಲ್ಲಿದ್ದಂತೆ ಇರುತ್ತಾರೆ.

ಹಳೆ ಆಚಾರ, ಹೊಸ ವಿಚಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಥ ತಾದಾತ್ಮ್ಯಕ್ಕೆ ಅರ್ಥದ ಅಗತ್ಯವೇನೂ ಇಲ್ಲ. ಇಲ್ಲಿ ಮುಖ್ಯವಾಗುವುದು ಭಕ್ತಿ. ಭಕ್ತಿಗೆ ಏನು ಶಕ್ತಿ ಇದೆ ಎಂಬುದು ಆ ಮಾರ್ಗದಲ್ಲಿ ಹೋಗುವವರಿಗೆ ಗೊತ್ತಿದೆ. ಒಟ್ಟಿನಲ್ಲಿ ಮಂತ್ರ, ಜಪ, ಪೂಜೆಯ ಉದ್ದೇಶ ಆಧ್ಯಾತ್ಮಿಕ ಔನ್ನತ್ಯ ಸಾಧಿಸುವುದು ಹಾಗೂ ಮಾನಸಿಕ ಶುದ್ಧೀಕರಣವೇ ಆಗಿದೆ.

-ಮಹಾಬಲ ಸೀತಾಳಬಾವಿ

click me!