ಬಾಬಾ ವಂಗಾ ಹೇಳಿರೋ ಈ ಭವಿಷ್ಯ ನಿಜವಾದ್ರೆ ಬಂಗಾರಕ್ಕಾಗಿ ಜಗತ್ತಿನಲ್ಲಿ ಶುರುವಾಗುತ್ತೆ ಬರ

Published : Apr 07, 2026, 05:40 PM IST
Baba Vanga Prediction 2026

ಸಾರಾಂಶ

2026ರ ವೇಳೆಗೆ ಚಿನ್ನದ ಬೆಲೆ 2 ಲಕ್ಷ ರೂಪಾಯಿ ತಲುಪಲಿದೆ ಎಂಬ ಬಾಬಾ ವಂಗಾ ಅವರ ಭವಿಷ್ಯವಾಣಿ ಸಂಚಲನ ಮೂಡಿಸಿದೆ. ಪ್ರಸ್ತುತ ಇಸ್ರೇಲ್-ಇರಾನ್ ಯುದ್ಧದ ನಡುವೆಯೂ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಹೂಡಿಕೆದಾರರಲ್ಲಿ ಗೊಂದಲ ಸೃಷ್ಟಿಸಿದೆ. ಈ ಲೇಖನವು ಬಾಬಾ ವಂಗಾ ಅವರ ಭವಿಷ್ಯ ಮತ್ತು ಆರ್ಥಿಕ ತಜ್ಞರ ವಿಶ್ಲೇಷಣೆಯ ನಡುವಿನ ವಾಸ್ತವವನ್ನು ಪರಿಶೀಲಿಸುತ್ತದೆ.

ನವದೆಹಲಿ (ಏ.7): ಒಂದು ತೊಲ (10 ಗ್ರಾಂ) ಚಿನ್ನದ ಬೆಲೆ 2 ಲಕ್ಷ ರೂಪಾಯಿ! ಕೇಳಲು ಇದು ಅಸಾಧ್ಯ ಎನಿಸಿದರೂ, ವಿಶ್ವವೇ ಮೆಚ್ಚಿರುವ ಭವಿಷ್ಯಗಾರ್ತಿ ಬಾಬಾ ವಂಗಾ ಅವರ ಅಂದಾಜಿನ ಪ್ರಕಾರ 2026ರಲ್ಲಿ ಇದು ಸಂಭವಿಸಲಿದೆಯಂತೆ. ಒಂದು ಕಡೆ ಇಸ್ರೇಲ್-ಇರಾನ್ ನಡುವೆ ಯುದ್ಧದ ಕಾರ್ಮೋಡಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆ ಆಶ್ಚರ್ಯಕರ ಎಂಬಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ. ಇದು ಭಾರಿ ಏರಿಕೆಗೂ ಮುನ್ನ ಕಂಡುಬರುತ್ತಿರುವ 'ನಿಶ್ಯಬ್ದ'ವೇ? ಬಾಬಾ ವಂಗಾ ಹೇಳಿದ ಆರ್ಥಿಕ ಸಂಕಷ್ಟ ನಿಜವಾಗಲಿದೆಯೇ?

ಚಿನ್ನ ಕೇವಲ ಲೋಹವಲ್ಲ, ಅದೊಂದು ಸೆಂಟ್ಮೆಂಟ್!

ಭಾರತದಲ್ಲಿ ಚಿನ್ನ ಎನ್ನುವುದು ಕೇವಲ ಒಂದು ಲೋಹವಲ್ಲ, ಅದೊಂದು ಭಾವನೆ ಮತ್ತು ಸುರಕ್ಷಿತ ಹೂಡಿಕೆ. ಮದುವೆ ಹಾಗೂ ಶುಭಕಾರ್ಯಗಳ ಸೀಸನ್ ನಡೆಯುತ್ತಿರುವ ಈ ವೇಳೆಯಲ್ಲಿ, ಚಿನ್ನದ ಬೆಲೆ ಏರಿಕೆಯು ಮಧ್ಯಮ ವರ್ಗದ ಜನರನ್ನು ಆತಂಕಕ್ಕೆ ತಳ್ಳಿದೆ. ಸಾಮಾನ್ಯವಾಗಿ ಜಗತ್ತಿನ ಎಲ್ಲಿಯೇ ಯುದ್ಧ ನಡೆದರೂ, ಹೂಡಿಕೆದಾರರು ಸುರಕ್ಷಿತ ಮಾರ್ಗವೆಂದು ಭಾವಿಸಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸುತ್ತಾರೆ. ಇದರಿಂದ ಬೆಲೆ ಏರುತ್ತದೆ. ಆದರೆ ಪ್ರಸ್ತುತ ಇಸ್ರೇಲ್-ಇರಾನ್ ಉದ್ವಿಗ್ನತೆಯ ನಡುವೆಯೂ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬರುತ್ತಿರುವುದು ಆರ್ಥಿಕ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ.

'ಬಾಲ್ಕನ್ಸ್ ನಾಸ್ಟ್ರಾಡಾಮಸ್' ಎಂದೇ ಕರೆಯಲ್ಪಡುವ ಬಲ್ಗೇರಿಯಾದ ಬಾಬಾ ವಂಗಾ, 2026ರ ವರ್ಷದ ಬಗ್ಗೆ ಮಾಡಿರುವ ಕೆಲವು ಭವಿಷ್ಯವಾಣಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 2026ರಲ್ಲಿ ಜಗತ್ತಿನಾದ್ಯಂತ ಭಾರಿ ಆರ್ಥಿಕ ಬಿಕ್ಕಟ್ಟು ಉಂಟಾಗಲಿದ್ದು, ಬ್ಯಾಂಕಿಂಗ್ ವ್ಯವಸ್ಥೆಯು ಪತನಗೊಳ್ಳಬಹುದು ಎಂದು ಅವರು ಎಚ್ಚರಿಸಿದ್ದಾರೆ

ಚಿನ್ನದ ಬೆಲೆ ಏರಿಕೆ: ಕಾಗದದ ಕರೆನ್ಸಿ (ನೋಟು) ಮೇಲಿನ ನಂಬಿಕೆ ಹೋದಾಗ, ಜನರೆಲ್ಲರೂ ಚಿನ್ನದ ಕಡೆಗೆ ಮುಖ ಮಾಡುತ್ತಾರೆ. ಇದರ ಪರಿಣಾಮವಾಗಿ ಚಿನ್ನದ ಬೆಲೆಯು ಶೇಕಡಾ 25 ರಿಂದ 40 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ಅಂದಾಜುಗಳು ನಿಜವಾದರೆ, ಸದ್ಯದ ದರದ ಪ್ರಕಾರ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1.9 ಲಕ್ಷದಿಂದ 2.1 ಲಕ್ಷ ರೂಪಾಯಿ ತಲುಪುವ ಅಪಾಯವಿದೆ!

ಆರ್ಥಿಕ ತಜ್ಞರು ಏನಂತಾರೆ?

ಬಾಬಾ ವಂಗಾ ಅವರ ಭವಿಷ್ಯವಾಣಿ ಏನೇ ಇರಲಿ, ಮಾರುಕಟ್ಟೆ ತಜ್ಞರು ಮಾತ್ರ ಚಿನ್ನದ ಬೆಲೆ ಕೇವಲ ವದಂತಿಗಳ ಮೇಲೆ ನಿರ್ಧಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ನಿರ್ಧಾರಗಳು ಮತ್ತು ಜಾಗತಿಕ ಬಡ್ಡಿದರಗಳು ಚಿನ್ನದ ಬೆಲೆಯನ್ನು ನಿಯಂತ್ರಿಸುತ್ತವೆ. ರೂಪಾಯಿ ಮೌಲ್ಯ ಕುಸಿತ ಮತ್ತು ಹಣದುಬ್ಬರ ಕೂಡ ಚಿನ್ನವನ್ನು ದುಬಾರಿಯಾಗಿಸುತ್ತವೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ತಿಳಿಯಾದರೆ, ಬೆಲೆಗಳು ಮತ್ತೆ ಇಳಿಕೆಯಾಗುವ ಸಾಧ್ಯತೆಯೂ ಇದೆ.

ಈಗ ಚಿನ್ನ ಖರೀದಿಸಬೇಕೇ ಅಥವಾ ಬೇಡವೇ?

ಚಿನ್ನವು ಯಾವಾಗಲೂ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಆದರೆ ಬಾಬಾ ವಂಗಾ ಅವರ ಭವಿಷ್ಯಕ್ಕೆ ಹೆದರಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ಮೊದಲು, ಪ್ರಸ್ತುತ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಗಮನಿಸುವುದು ಮುಖ್ಯ. ನಿಮ್ಮ ಆರ್ಥಿಕ ಯೋಜನೆಗೆ ಅನುಗುಣವಾಗಿ, ತಜ್ಞರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

 

PREV
Read more Articles on
click me!

Recommended Stories

ನಾಳೆ ಏಪ್ರಿಲ್ 8 ಈ 5 ರಾಶಿಗೆ ಅದೃಷ್ಟವೋ ಅದೃಷ್ಟ, ಬಂಪರ್‌ ಲಾಟರಿ
ಸೂರ್ಯ ಗುರುವಿನ ಕಪ್ಪು ನೆರಳು ಈ 4 ರಾಶಿ ಮೇಲೆ, ಸಮಸ್ಯೆಗಳು ಮತ್ತು ಗೊಂದಲ ಜಾಸ್ತಿ ಎಚ್ಚರ