Viral Video: ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಜಲಸಮಾಧಿ, ಸಂತರ ದೇಹ ಸುಡೋದಿಲ್ಲ ಯಾಕೆ?

Published : Feb 13, 2025, 07:15 PM ISTUpdated : Feb 13, 2025, 07:23 PM IST
Viral Video: ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಜಲಸಮಾಧಿ, ಸಂತರ ದೇಹ ಸುಡೋದಿಲ್ಲ ಯಾಕೆ?

ಸಾರಾಂಶ

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರಿಗೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯು ನದಿಯಲ್ಲಿ 'ಜಲ ಸಮಾಧಿ' ಗೌರವ ನೀಡಲಾಯಿತು. ಸನಾತನ ಧರ್ಮದಲ್ಲಿ ಸಂತರು ನಿಧನರಾದಾಗ ಅವರ ಮೃತದೇಹವನ್ನು ನದಿಗೆ ಹಾಕುವ ಮೂಲಕ ಜಲಸಮಾಧಿ ವಿಧಿವಿಧಾನವನ್ನು ನೆರವೇರಿಸಲಾಗುತ್ತದೆ.

ಲಕ್ನೋ (ಫೆ.13): ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರಿಗೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯು ನದಿಯಲ್ಲಿ 'ಜಲ ಸಮಾಧಿ' ಗೌರವ ನೀಡಲಾಯಿತು. ಮಂಗಳವಾರ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದರು. ಆಚಾರ್ಯ ಸತ್ಯೇಂದ್ರ ದಾಸ್ ಅವರು ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SGPGIMS) ನಿಧನರಾದರು ಎಂದು ಪತ್ರಿಕಾ ಹೇಳಿಕೆಯಲ್ಲಿತಿಳಿಸಲಾಗಿತ್ತು. ಆಸ್ಪತ್ರೆ ನೀಡಿದ ಹೇಳಿಕೆಯಲ್ಲಿ, "ರಾಮ ಮಂದಿರ ಅಯೋಧ್ಯೆಯ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಜಿ ಇಂದು ಕೊನೆಯುಸಿರೆಳೆದರು. ಅವರನ್ನು ಫೆಬ್ರವರಿ 3 ರಂದು ಗಂಭೀರ ಸ್ಥಿತಿಯಲ್ಲಿ ನರವಿಜ್ಞಾನ ವಾರ್ಡ್‌ನ HDU (ಹೈ ಡಿಪೆಂಡೆನ್ಸಿ ಯೂನಿಟ್) ಗೆ ದಾಖಲಿಸಲಾಯಿತು' ಎಂದು ತಿಳಿಸಿತ್ತು.

ಸರಯೂ ನದಿಯ ತುಳಸೀದಾಸ್‌ ಘಾಟ್‌ನಲ್ಲಿ ಅವರ ಮೃತದೇಹಕ್ಕೆ ಜಲಸಮಾಧಿ ಗೌರವ ನೀಡಲಾಯಿತು. ರಥದಂತೆ ಸಿದ್ದಪಡಿಸಿದ್ದ ದೋಣಿಯಲ್ಲಿ ಅವರ ಮೃತದೇಹವನ್ನು ನದಿಯ ನಡುವೆ ಸಾಗಿಸಲಾಗಿತ್ತು. ಮೃತದೇಹಲ್ಲಿ ನಾಲ್ಕು ಮೂಟೆ ಮರಳಿನ ಚೀಲವನ್ನು ಕಟ್ಟಲಾಗಿತ್ತು. ದೋಣಿ ನದಿಯ ಮಧ್ಯೆ ಬರುತ್ತಿದ್ದಂತೆ ಮೃತದೇಹವನ್ನು ನೀರಿಗೆ ಬಿಡಲಾಯಿತು.

ಸನಾತನ ಧರ್ಮದಲ್ಲಿ ಕೆಲವರ ಅಂತ್ಯಸಂಸ್ಕಾರಕ್ಕೆ ಭಿನ್ನ ರೀತಿಯ ಮಾರ್ಗಗಳಿವೆ. ಅದರಂತೆ ಸಂತರು ನಿಧನರಾದಾಗ ಅವರಿಗೆ ಯಾವುದೇ ರೀತಿಯ ಅಂತ್ಯಸಂಸ್ಕಾರ ಮಾಡಲಾಗೋದಿಲ್ಲ. ಬದಲಿಗೆ ಅವರ ಮೃತದೇಹವನ್ನು ನದಿಗೆ ಹಾಕಲಾಗುತ್ತದೆ. ಇದನ್ನು ಜಲಸಮಾಧಿ ಎನ್ನಲಾಗುತ್ತದೆ. ಕೆಲವೊಮ್ಮೆ ಮೃತದೇಹಕ್ಕೆ ದೊಡ್ಡ ಬಂಡೆಗಳನ್ನು ಕಟ್ಟಿಹಾಕಿ ನದಿಯಲ್ಲಿ ಬಿಡಲಾಗುತ್ತದೆ. ನದಿಯಲ್ಲಿ ಶವಗಳು ತೇಲಬಾರದು ಎನ್ನುವ ಉದ್ದೇಶಕ್ಕೆ ಹೀಗೆ ಮಾಡಲಾಗುತ್ತದೆ.  ಕೆಲವೆಡೆ ಸಂತರಿಗೆ ಭೂಸಮಾಧಿಯನ್ನೂ ಮಾಡಲಾಗುತ್ತದೆ. ಭೂಮಿಯ ಮೇಲೆ ಗುಂಡಿ ತೋಡಿ ಅದಲ್ಲಿ ಪದ್ಮಾಸನ ಅಥವಾ ಸಿದ್ಧಾಸನದ ರೂಪದಲ್ಲಿ ಮೃತದೇಹವನ್ನು ಇರಿಸಿ ಮಣ್ಣುಮುಚ್ಚಲಾಗುತ್ತದೆ. 

 

Breaking: ರಾಮಮಂದಿರದ ಪ್ರಧಾನ ಅರ್ಚಕರಾಗಿದ್ದ ಸತ್ಯೇಂದ್ರ ದಾಸ್ ವಿಧಿವಶ

ಅಂತ್ಯಸಂಸ್ಕಾರ ಎಂದರೆ ಅವರಿಗೆ ಈ ಭೂಮಿಯಲ್ಲಿ ಜೀವನ ಮುಗಿಯಿತು ಎನ್ನುವ ಅರ್ಥದಲ್ಲಿ ಮಾಡುವ ಕ್ರಿಯೆ. ಆದರೆ, ಹಿಂದೂ ಧರ್ಮದ ಎರಡು ಸಂಬಂಧಿತ ಮತ್ತು ಮೂಲಭೂತ ತತ್ವಗಳಾದ ಆತ್ಮದ ಪುನರ್ಜನ್ಮ ಮತ್ತು ಪುನರ್ಜನ್ಮದ ನಂಬಿಕೆಯಲ್ಲಿ ಸಂತರ ದೇಹಗಳನ್ನು ಸುಡಲಾಗೋದಿಲ್ಲ.

ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರ ವೇತನ ಎಷ್ಟು? ಇಲ್ಲಿದೆ ಮಾಹಿತಿ

PREV
Read more Articles on
click me!

Recommended Stories

ಅಂಜುವ ಮಾತೇ ಇಲ್ಲ, ತಮ್ಮ ಹಣೆಬರಹವನ್ನ ತಾವೇ ಬದಲಾಯಿಸಿಕೊಳ್ಳುವ 4 ರಾಶಿಗಳಿವು
ನಾಳೆ ಡಿಸೆಂಬರ್ 12 ರಂದು ಲಕ್ಷ್ಮಿ ನಾರಾಯಣ ಯೋಗ, ಮೇಷ ಮತ್ತು ಕರ್ಕ ರಾಶಿ ಸೇರಿದಂತೆ 5 ರಾಶಿಗೆ ಅದೃಷ್ಟ