ಪುನರ್ಜನ್ಮ ಪಡೆದ ಬಾಲಕಿಯೊಬ್ಬಳ ಕೌತುಕದ ಘಟನೆಯೊಂದನ್ನು ಜ್ಯೋತಿಷಿ ಸಚ್ಚಿದಾನಂದ ಬಾಬು ಹೇಳಿದ್ದಾರೆ. ನಂಬಲಸಾಧ್ಯವಾದ ಘಟನೆಯಿದು...
ಪುನರ್ಜನ್ಮ ಇದೆಯೋ ಇಲ್ಲವೋ ಎನ್ನುವುದು ಅವರವರ ವಿಚಾರಕ್ಕೆ ಬಿಟ್ಟ ವಿಷಯ. ಆತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತ ಪುನರ್ಜನ್ಮ ಎನ್ನಲಾಗಿದೆ. ಹಿಂದೂ ಧರ್ಮದ ಪ್ರಕಾರ, ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮ ಎಂದು ಹೇಳಲಾಗುತ್ತದೆ. ಪುನರ್ಜನ್ಮದ ಬಗ್ಗೆ ಇದಾಗಲೇ ಸಾಕಷ್ಟು ಅಚ್ಚರಿಯ ಘಟನೆಗಳು ಆಗಾಗ್ಗೆ ವರದಿಯಾಗುವುದು ಇದೆ. ಎಲ್ಲೋ ಹುಟ್ಟಿದ ಮಕ್ಕಳು, ಗೊತ್ತು ಗುರಿಯಲ್ಲಿ ಪ್ರದೇಶದ ಬಗ್ಗೆ ಹೇಳುವುದು, ಅದು ನಿಜವಾಗುವುದು, ಈಗ ಇರುವ ಅಪ್ಪ-ಅಮ್ಮನನ್ನು ಬಿಟ್ಟು ಇನ್ನಾರನ್ನೋ, ಯಾವುದೋ ಪರ ಊರಿನವರೇ ತನ್ನ ಅಪ್ಪ-ಅಮ್ಮ ಎಂದು ಹೇಳುವುದು... ಹೀಗೆ ನಿಜವಾಗಿಯೂ ನಡೆದಿರುವ ಘಟನೆಗಳು ವೈಚಿತ್ರ್ಯವನ್ನು ಸೃಷ್ಟಿಸುತ್ತಲೇ ಇರುತ್ತದೆ. ಅಷ್ಟಕ್ಕೂ ಪ್ರಕೃತಿಯ ವಿಸ್ಮಯಗಳು ಮಾನವ ಊಹೆಗೆ ನಿಲುಕದ್ದು ಎನ್ನುವುದು ಅಷ್ಟೇ ಸತ್ಯ. ಮನುಷ್ಯ ಏನೇ ಸಂಶೋಧನೆ ಮಾಡಿರಬಹುದು, ಆದರೆ ಪ್ರಕೃತಿಯ ಮುಂದೆ ಎಲ್ಲವೂ ಗೌಣ ಎನ್ನುವುದಕ್ಕೆ ಇದಾಗಲೇ ನಿತ್ಯವೂ ಹಲವು ಉದಾಹರಣೆಗಳನ್ನು ನೋಡುತ್ತಲೇ ಇರುತ್ತೇವೆ. ಭೂತ-ಪ್ರೇತ, ಪಿಶಾಚಿ, ಆತ್ಮ, ಪುನರ್ಜನ್ಮ... ಇವುಗಳು ಕೂಡ ಮನುಷ್ಯನ ಊಹೆಗೆ ನಿಲುಕದ್ದೇ ಸರಿ.
ಇದೀಗ ಅಂಥದ್ದೇ ಒಂದು ಘಟನೆಯನ್ನು ಹೇಳಿದ್ದಾರೆ ಖ್ಯಾತಿ ಜ್ಯೋತಿಷಿ ಸಚ್ಚಿದಾನಂದ ಬಾಬು. ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಒಂದು ಕುತೂಹಲದ ವಿಷಯವನ್ನು ಅವರು ಹೇಳಿದ್ದಾರೆ. ಬಾಲಕಿಯೊಬ್ಬಳ ನಡೆದ ಘಟನೆ ಇದು. ಇದು ಸುಮಾರು 15 ವರ್ಷ ಹಿಂದೆ ನಡೆದಿರುವ ಘಟನೆ. ತೆಲಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರುವ ಬಾಲಕಿ ಇದ್ದಕ್ಕಿದ್ದಂತೆಯೇ ವಿಚಿತ್ರವಾಗಿ ಆಡುತ್ತಾ ಯಾವುದೋ ಭಾಷೆಯಲ್ಲಿ ಮಾತನಾಡುತ್ತಾ ಅಪ್ಪ-ಅಮ್ಮನನ್ನು ತಬ್ಬಿಬ್ಬು ಮಾಡಿದ್ದಳು. ಮಾತೃಭಾಷೆ ತೆಲಗುವಿನಲ್ಲಿ ಮಾತನಾಡಿದರೆ ಆಕೆಗೆ ಅರ್ಥವೇ ಆಗುತ್ತಿರಲಿಲ್ಲ. ಮನೆಯಲ್ಲಿ ಹಸಿವಾದಾಗ ಊಟ ಮಾಡುತ್ತಿದ್ದುದು ಬಿಟ್ಟರೆ ಅಪ್ಪ-ಅಮ್ಮ ಸೇರಿದಂತೆ ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಕೊನೆಗೆ ಚಿಂತಾಕ್ರಾಂತರಾದ ಬಾಲಕಿಯ ಅಪ್ಪ-ಅಮ್ಮ ತಮ್ಮನ್ನು ಸಂಪರ್ಕಿಸಿದರು ಎನ್ನುವ ಮಾಹಿತಿಯನ್ನು ಸಂದರ್ಶನದಲ್ಲಿ ಹೇಳಿದ್ದಾರೆ ಸಚ್ಚಿದಾನಂದ ಬಾಬು.
ಹಾರ್ಟ್ ಬ್ಲಾಕೇಜ್ ತೆಗೆಯುವ ಅದ್ಭುತ ಔಷಧ ಈ ಕಷಾಯ: ಹೃದಯ ಸಮಸ್ಯೆಗಳಿಗೆ ರಾಮಬಾಣ- ಡಾ.ಗೌರಿ ಮಾಹಿತಿ
ಅವರೇ ಹೇಳಿದಂತೆ, 'ನಾನು ಆಕೆಯ ಜಾತಕ ನೋಡಿದಾಗ ಪುನರ್ಜನ್ಮದ ಸಂಸ್ಕಾರ ಇಲ್ಲಿ ಕಾಣಿಸುತ್ತಿದೆ ಎನ್ನಿಸಿತು. ಆಕೆ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದಾಳೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಕೊನೆಗೆ ಕೆಲವು ಭಾಷಾತಜ್ಞರನ್ನು ಕರೆಸಲಾಯಿತು. ಆಗ ಗೊತ್ತಾಯಿತು ಆಕೆ ರಾಜಸ್ಥಾನಿ ಭಾಷೆಯಲ್ಲಿ ಮಾತನಾಡುತ್ತಿದ್ದಾಳೆ ಎಂದು. ನನ್ನ ಅಪ್ಪ-ಅಮ್ಮ ರಾಜಸ್ಥಾನದ ಜೈಪುರದಲ್ಲಿ ಇರುವುದು. ನನಗೆ ನನ್ನ ಅಪ್ಪ-ಅಮ್ಮನನ್ನು ನೋಡಬೇಕು, ನಾನು ಅಲ್ಲಿಗೆ ಹೊಗಬೇಕು ಎಂದು ಒಂದೇ ಸಮನೆ ಬಾಲಕಿ ಒತ್ತಾಯಿಸುತ್ತಿದ್ದಳು. ಅವರ ಮನೆಯಲ್ಲಿ ಸಾಕಷ್ಟು ಅನುಕೂಲಸ್ಥರಾಗಿದ್ದರಿಂದ ಎಲ್ಲರೂ ವಿಮಾನದಲ್ಲಿ ರಾಜಸ್ಥಾನಕ್ಕೆ ಹೋದೆವು. ವಿಮಾನ ನಿಲ್ದಾಣದಿಂದ ಕ್ಯಾಬ್ನಲ್ಲಿ ಹೋಗುವಾಗ ಆ ಬಾಲಕಿಯೇ ಮನೆಯ ವಿಳಾಸ ಹೇಳುತ್ತಿದ್ದಳು. ಅವಳು ಹೇಳಿದಂತೆ ಹೋದೆವು. ಒಂದು ಮನೆಯ ಎದುರು ಗಾಡಿ ನಿಂತಿತು' ಎನ್ನುತ್ತಾ ಆ ದಿನಗಳ ಬಗ್ಗೆ ತಿಳಿಸಿದರು.
ಆ ಮನೆ ಚಿಕ್ಕದಾಗಿತ್ತು. ಒಳಗೆ ಹೋದಾಗ ವಯಸ್ಸಾಗ ಗಂಡ-ಹೆಂಡತಿ ಬಂದರು. ಅವರನ್ನು ನೋಡುತ್ತಿದ್ದಂತೆಯೇ ಬಾಲಕಿ ಅಪ್ಪಾ-ಅಮ್ಮಾ ಎಂದು ತಬ್ಬಿಕೊಂಡು ರಾಜಸ್ಥಾನಿಯಲ್ಲಿ ಮಾತನಾಡಿದಳು. ಅವರಿಗೂ ಗಾಬರಿಯಾಯಿತು. ಕೊನೆಗೆ ನಡೆದ ವಿಷಯ ಹೇಳಿದೆವು. ಅಲ್ಲಿ ನೋಡಿದ್ರೆ ಸುಮಾರು 8-10 ವರ್ಷಗಳ ಹಿಂದೆ ಈಜಲು ಹೋದ ಅವರ ಮಗಳು ಸತ್ತಿರುವ ವಿಷಯ ತಿಳಿಯಿತು. ಆಕೆಯ ಫೋಟೋ ಕೂಡ ಇತ್ತು. ಅದಕ್ಕೆ ಹಾರ ಹಾಕಲಾಗಿತ್ತು. ಕೊನೆಗೆ ಅವರದ್ದೇ ಮಗಳ ರೀತಿಯಲ್ಲಿ ಎಲ್ಲಾ ಸುದ್ದಿಗಳನ್ನು ಬಾಲಕಿ ಹೇಳತೊಡಗಿದಾಗ ಅವರಿಗೂ ಪರಮಾಶ್ಚರ್ಯ. ಕೊನೆಗೆ ಬಾಲಕಿ ಅಲ್ಲಿಂದ ಬರಲೇ ಇಲ್ಲ. ತಾನು ಮನೆ ಬಿಟ್ಟು ಬರುವುದಿಲ್ಲ ಎಂದು ಹಠ ಹಿಡಿದು ಕುಳಿತಳು. ಈಗಿನ ಅಪ್ಪ-ಅಮ್ಮನಿಗೆ ಹೇಳತೀರದ ಸಂಕಟ. ಈಗಲೂ ಬಾಲಕಿ ಅದೇ ಮನೆಯಲ್ಲಿ ಇದ್ದಾಳೆ. ಈಗಿನ ಅಪ್ಪ-ಅಮ್ಮನನ್ನು ಭೇಟಿಯಾಗಲು ತಿಂಗಳಿಗೊಮ್ಮೆ ಕರೆದುಕೊಂಡು ಬರಲಾಗುತ್ತದೆ. ಅವಳಿಗೆ ಈಗಿನ ಯಾವುದೇ ನೆನಪೂ ಇಲ್ಲ ಎನ್ನುವುದು ಕೂಡ ವಿಶೇಷವೇ. ಹಿಂದಿನ ಜನ್ಮದ ಸಂಪೂರ್ಣ ನೆನಪು ಇದೆ ಎಂಬ ಕೌತುಕದ ಘಟನೆ ವಿವರಿಸಿದರು.
ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!