ಖ್ಯಾತ ಜ್ಯೋತಿಷಿ ಸಚ್ಚಿದಾನಂದ ಬಾಬು ಜ್ಯೋತಿಷದಲ್ಲಿನ ಕೆಲವೊಂದು ಕಟ್ಟುಕಥೆಗಳ ಕುರಿತು ವರ್ಣಿಸುತ್ತಾ ಗಜಕೇಸರಿ ಯೋಗದ ಬಗ್ಗೆ ಹೇಳಿದ್ದೇನು?
ಚಂದ್ರ ಮತ್ತು ಗುರು ಗ್ರಹಗಳು ಜೊತೆಯಲ್ಲಿ ಯಾರ ಜಾತಕದಲ್ಲಿ ಇರುತ್ತದೆಯೋ, ಅವರಿಗೆ ಸಕ್ಸಸ್ ಗ್ಯಾರೆಂಟಿ ಎನ್ನುವ ಮಾತು ಸಾಮಾನ್ಯವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಹಲವು ರೀತಿಯ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳಲ್ಲಿ ಅತ್ಯುತ್ತಮ ಮತ್ತು ಅತ್ಯಂತ ಮಂಗಳಕರವಾದದ್ದೆಂದರೆ ಗಜಕೇಸರಿ ಯೋಗ ಎಂದೇ ಹೇಳಲಾಗುತ್ತದೆ. ಜಾತದಲ್ಲಿ ಚಂದ್ರ ಮತ್ತು ಗುರು ಗ್ರಹಗಳು ಒಟ್ಟಿಗೇ ಇದ್ದಾಗ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಮಾತಿದೆ. ಜೀವನದಲ್ಲಿ ಸಿಕ್ಕಾಪಟ್ಟೆ ಸಕ್ಸಸ್ ಸಿಗುತ್ತದೆ ಎಂದೇ ಹೇಳಲಾಗುತ್ತದೆ. ಬೃಹಸ್ಪತಿ ದೇವ ಗುರುವಿನ ವಿಶೇಷತೆಯನ್ನು ಹೊಂದಿರುತ್ತಾನೆ. ಇದೇ ಕಾರಣಕ್ಕೆ ಜಾತಕದಲ್ಲಿ ಗಜ ಕೇಸರಿ ಯೋಗ ಸ್ಟ್ರಾಂಗ್ ಆಗಿದ್ದರೆ ಅವರ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ, ಅವರು ಯಾವಾಗಲೂ ಅದೃಷ್ಟವಂತರಾಗಿರುತ್ತಾರೆ, ಅವರು ಆರ್ಥಿಕವಾಗಿ ದುರ್ಬಲವಾದ ಮನೆಯಲ್ಲಿ ಜನಿಸಿದರೂ ಶ್ರೀಮಂತರಾಗಿ ಬದುಕುವ ಸಾಧ್ಯತೆಗಳೇ ಇರುತ್ತವೆ ಎನ್ನುವ ಮಾತಿದೆ. ಇನ್ನು ಮಹಿಳೆಗೆ ಗಜಕೇಸರಿ ಯೋಗವಿದ್ದರೆ, ಆಕೆಯ ಜೀವನದಲ್ಲಿ ಐಶ್ವರ್ಯ, ಸಂತಾನ ಸುಖ, ಮನೆ ಇತ್ಯಾದಿಗಳು ಭರಪೂರವಾಗಿ ಸಿಗುತ್ತವೆ. ಆಕೆಗೆ ಯಾವುದೇ ರೀತಿಯ ಕೊರತೆಯಿರುವುದಿಲ್ಲ. ಜೀವನದುದ್ದಕ್ಕೂ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಆಕೆ ಯಶಸ್ಸಿನ ಶಿಖರವನ್ನು ಮುಟ್ಟುತ್ತಾಳೆ ಎನ್ನಲಾಗುವುದು.
ಅದೇ ಇನ್ನೊಂದೆಡೆ, ಲಗ್ನಾಧಿಪತಿ 12ನೇ ಮನೆಯಲ್ಲಿ ಜಾತಕದಲ್ಲಿದ್ದರೆ ಮಾಡಿದ್ದೆಲ್ಲವೂ ಠುಸ್ ಆಗುತ್ತದೆ, ಏನು ಮಾಡಿದರೂ ವ್ಯರ್ಥ, ಸುಮ್ಮನೆ ಕಷ್ಟಪಟ್ಟು ಕೆಲಸ ಮಾಡುವ ಬದಲು ಮನೆಯಲ್ಲಿ ಇರುವುದೇ ಒಳ್ಳೆಯದು ಎಂದು ಕೆಲವು ಜ್ಯೋತಿಷಿಗಳು ಹೇಳುವುದು ಉಂಟು. ಹಾಗಿದ್ದರೆ ಒಂದು ಕಡೆ ಗಜಕೇಸರಿ ಯೋಗ, ಇನ್ನೊಂದೆಡೆ ಮಾಡಿದ್ದೆಲ್ಲವೂ ವ್ಯರ್ಥ. ಇವೆರಡೂ ಎಷ್ಟರಮಟ್ಟಿಗೆ ನಿಜ? ಎಲ್ಲರ ಜೀವನಲ್ಲಿಯೂ ಇದು ಅಪ್ಲೈ ಆಗುತ್ತದಾ? ಇದನ್ನು ಸಂಪೂರ್ಣವಾಗಿ ನಂಬಬಹುದಾ? ಏನೂ ಕೆಲಸ ಮಾಡದೇ ಇದ್ದರೂ ಗಜಕೇಸರಿ ಯೋಗ ಇದ್ದರೆ ಅದೃಷ್ಟ ತಾನಾಗಿಯೇ ಒದಗಿ ಬರುತ್ತದಾ? ಇನ್ನೊಂದೆಡೆ ಎಷ್ಟೇ ಕಷ್ಟಪಟ್ಟರೂ ಲಗ್ನಾಧಿಪತಿ 12ನೇ ಮನೆಯಲ್ಲಿದ್ದರೆ ಮಾಡಿದ್ದೆಲ್ಲವೂ ವ್ಯರ್ಥನಾ? ಇದಕ್ಕೆ ಉತ್ತರಿಸಿದ್ದಾರೆ ಖ್ಯಾತಿ ಜ್ಯೋತಿಷಿ ಸಚ್ಚಿದಾನಂದ ಬಾಬು.
ಖ್ಯಾತ ನಿರೂಪಿಕಿ ರ‍್ಯಾಪಿಡ್ ರಶ್ಮಿ ಅವರ ಷೋನಲ್ಲಿ ಸಚ್ಚಿದಾನಂದ ಬಾಬು ಅವರು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜ್ಯೋತಿಷದ ಬಗ್ಗೆ ಇರುವ ಕಟ್ಟುಕಥೆಯ ಕುರಿತು ರಶ್ಮಿ ಅವರು ಕೇಳಿದ ಪ್ರಶ್ನೆಗೆ ಸಚ್ಚಿದಾನಂದ ಬಾಬು ಅವರು, ನೋಡಿ ಚಂದ್ರ ಮತ್ತು ಗುರು ಗ್ರಹಗಳು ಜೊತೆಯಲ್ಲಿ ಯಾರ ಜಾತಕದಲ್ಲಿ ಇರುತ್ತದೆಯೋ, ಅವರಿಗೆ ಸಕ್ಸಸ್ ಗ್ಯಾರೆಂಟಿ ಎನ್ನುವ ಮಾತು ಸಾಮಾನ್ಯವಾಗಿದೆ, ಲಗ್ನಾಧಿಪತಿ 12ನೇ ಮನೆಯಲ್ಲಿ ಜಾತಕದಲ್ಲಿದ್ದರೆ ಮಾಡಿದ್ದೆಲ್ಲವೂ ಠುಸ್ ಆಗುತ್ತದೆ ಎಂಬ ಮಾತೂ ಇದೆ. ಇದೇ ರೀತಿ ಹಲವು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಇದೇ ಕೊನೆಯಲ್ಲ. ಯೋಗಗಳು ಎಷ್ಟರಮಟ್ಟಿಗೆ ಅಪ್ಲೈ ಮಾಡಬೇಕೋ, ಅಷ್ಟರಮಟ್ಟಿಗೆ ಮಾತ್ರ ಮಾಡಬೇಕು. ಯೋಗ ಇದ್ದ ಮಾತ್ರಕ್ಕೆ, ಜಾತಕದಲ್ಲಿ ಹೀಗೆಲ್ಲಾ ಇರುವ ಮಾತ್ರಕ್ಕೆ ಅವು ಅಪ್ಲೈ ಆಗಿಯೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ.
ಎಲ್ಲಕ್ಕಿಂತಲೂ ಮೇಲೆ ಇರುವ ಸುಪ್ರೀಂ ಎಲ್ಲರ ಹಣೆಬರಹ, ಭವಿಷ್ಯ ಬರೆಯುತ್ತಾನೆ. ಅದೇ ಕೊನೆ. ಗ್ರಹಸ್ಥಿತಿ ಏನೇ ಇದ್ದರೂ ಅಂತಿಮವಾಗಿ ಸುಪ್ರೀಂ ಮೇಲೆ ಎಲ್ಲವೂ ನಿರ್ಧರಿತವಾದದ್ದು. ಆದ್ದರಿಂದ ಜ್ಯೋತಿಷಿಗಳು ಯಾರನ್ನಾದರೂ ತೀವ್ರವಾಗಿ ಹೊಗಳುವುದು ಅಥವಾ ಜಾತಕ ನೋಡಿ ಅವರನ್ನು ಮಾನಸಿಕವಾಗಿ ಕುಗ್ಗಿಸುವುದು ಸರಿಯಲ್ಲ ಎಂದು ಹ ಹೇಳುವ ಮೂಲಕ, ಜಾತಕವೇ ಎಲ್ಲವೂ ಅಲ್ಲ, ಮೇಲಿನ ಆಟದ ಮುಂದೆ ಎಲ್ಲವೂ ಠುಸ್ಸೇ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಹಾರ್ಟ್ ಬ್ಲಾಕೇಜ್ ತೆಗೆಯುವ ಅದ್ಭುತ ಔಷಧ ಈ ಕಷಾಯ: ಹೃದಯ ಸಮಸ್ಯೆಗಳಿಗೆ ರಾಮಬಾಣ- ಡಾ.ಗೌರಿ ಮಾಹಿತಿ