ವಿಧಾನಸಭಾ ಚುನಾವಣೆ ಹಿನ್ನೆಲೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜೋತಿಷಿ!

By Ravi Janekal  |  First Published Apr 2, 2023, 3:15 PM IST

ಕರಾವಳಿ ಭಾಗದಲ್ಲಿ ಬಿರುಸುನಿಂದ ನಡೆಯುತ್ತಿದ್ದ ಚುನಾವಣಾ ಪ್ರಚಾರ ಇದೀಗ ನಿಧಾನಗತಿ ಹಿಡಿದಿದೆ. ಒಂದೆಡೆ ಅಭ್ಯರ್ಥಿಗಳ ಘೋಷಣೆಯಾಗದೇ ಇರುವುದು ಈ ಹಿನ್ನಡೆಗೆ ಕಾರಣವಾದರೆ, ಇನ್ನೊಂದೆಡೆ ಧಾರ್ಮಿಕ ಕಾರಣಗಳಿಂದ ಚುನಾವಣಾ ಪ್ರಚಾರಕ್ಕೆ ತಡೆಯಾಗಿದೆ.


ಉಡುಪಿ (ಏ.2) : ಕರಾವಳಿ ಭಾಗದಲ್ಲಿ ಬಿರುಸುನಿಂದ ನಡೆಯುತ್ತಿದ್ದ ಚುನಾವಣಾ ಪ್ರಚಾರ ಇದೀಗ ನಿಧಾನಗತಿ ಹಿಡಿದಿದೆ. ಒಂದೆಡೆ ಅಭ್ಯರ್ಥಿಗಳ ಘೋಷಣೆಯಾಗದೇ ಇರುವುದು ಈ ಹಿನ್ನಡೆಗೆ ಕಾರಣವಾದರೆ, ಇನ್ನೊಂದೆಡೆ ಧಾರ್ಮಿಕ ಕಾರಣಗಳಿಂದ ಚುನಾವಣಾ ಪ್ರಚಾರಕ್ಕೆ ತಡೆಯಾಗಿದೆ.

ಹೇಳಿಕೇಳಿ ಇದು ಅತಿ ಹೆಚ್ಚು ಶುಭಕಾರ್ಯಗಳು ನಡೆಯುತ್ತಿದ್ದ ತಿಂಗಳು. ಪ್ರತಿ ಊರು ,ಹಳ್ಳಿ ,ಮನೆಗಳಲ್ಲಿ ಮದುವೆ ಮುಂಜಿ ಇತ್ಯಾದಿ ಶುಭಕಾರ್ಯಗಳು ನಡೆಯುವುದು ಮಾಮೂಲು. ಆದರೆ ಗ್ರಹಾನುಕೂಲ ಇಲ್ಲದ ಕಾರಣ, ವಾತಾವರಣ ಬಧಲಾಗಿದೆ. ಜಒಂದು ತಿಂಗಳ ಕಾಲ ಮೌಢ್ಯ ಇದೆ. ಈ ಸಂದರ್ಭದಲ್ಲಿ ಯಾವುದೇ ಮಹತ್ವದ ಖಾಸಗಿ ಧಾರ್ಮಿಕ ಕಾರ್ಯಗಳು ನಡೆಯುವುದಿಲ್ಲ.

Tap to resize

Latest Videos

undefined

ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಪ್ರಚುರಪಡಿಸಲು ಅನುಮತಿ ಕಡ್ಡಾಯ: ಡಿಸಿ ಕೂರ್ಮಾರಾವ್

ಮೌಢ್ಯದಿಂದ ರಾಜಕಾರಣಿಗಳ ಪ್ರಚಾರಕ್ಕೆ ಹಿನ್ನಡೆಯುಂಟಾಗಿದೆ. ಚುನಾವಣಾ ಪ್ರಚಾರದ ಆರಂಭದ ಒಂದು ತಿಂಗಳು ಮೌಡ್ಯ ಇರಲಿದೆ. ಮೌಢ್ಯ ಕಾಲದಲ್ಲಿ ಖಾಸಗಿ ಶುಭ ಕಾರ್ಯಕ್ರಮಗಳು ನಡೆಯೋದಿಲ್ಲ. ಶುಭ ಕಾರ್ಯಕ್ರಮಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದ ರಾಜಕಾರಣಿಗಳು ಇದರಿಂದ ಹಿನ್ನಡೆ ಅನುಭವಿಸಿದ್ದಾರೆ.

ದೇವಸ್ಥಾನದ ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಖಾಸಗಿ ಕಾರ್ಯಕ್ರಮಗಳಾದ ಮದುವೆ, ಉಪನಯನ ಇತ್ಯಾದಿಗಳು ನಡೆಯಲ್ಲ.ಈ ಬಗ್ಗೆ ಮಾತನಾಡಿರುವ ಹಿರಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ(Prakash annammaya astrologer),ಚುನಾವಣಾ ಪ್ರಚಾರದ ಒಂದು ತಿಂಗಳು ಆವರಿಸಲಿರುವ ಮೌಢ್ಯದ ಸಂದರ್ಭ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ.ಗುಂಪು ಗುಂಪಾಗಿ ಮತದಾರರನ್ನು ಸೆಳೆಯುವ ರಾಜಕಾರಣಿಗಳ ಪ್ಲ್ಯಾನ್ ಗೆ ಹಿನ್ನಡೆಯಾಗಲಿದೆ ಎಂದಿದ್ದಾರೆ.

ಏಪ್ರಿಲ್ ಮೂರರಿಂದ ಏಪ್ರಿಲ್ 27ರ ತನಕ ಮೌಢ್ಯ ಇದೆ. ಮೌಢ್ಯ ಕಳೆದು ಮೂರು ದಿವಸ ಮೌಡ್ಯದ ಪ್ರಭಾವ ಇರುತ್ತದೆ. ರವಿ ಮತ್ತು ಗುರು ಜೊತೆಗೆ ಇದ್ದಾಗ ಗುರುವಿನ ಶಕ್ತಿ ಹರಣ ಆಗುತ್ತದೆ ಇದನ್ನು ಮೌಢ್ಯ ಅಂತ ಕರೆಯುತ್ತಾರೆ ಎಂದು ಹೇಳಿದ್ದಾರೆ.

ಮೌಢ್ಯದಲ್ಲಿ ಗುರುವಿನ ಶಕ್ತಿ ಆ ರಾಶಿಗಳಿಗೆ ತಲುಪುವುದಿಲ್ಲ. ಗುರು ಕರ್ಮಕಾರಕ, ಕರ್ಮದ ನಿರ್ಣಾಯಕನಾಗಿರುತ್ತಾನೆ ಕರ್ಮ ಸೂಚಕನಾಗಿರುತ್ತಾನೆ.ಮೌಢ್ಯ ಆವರಿಸಿರುವುದರಿಂದ ಗುರುವಿನ ಶಕ್ತಿ ನೆಗೆಟಿವ್ ಆಗಿ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ.

Udupi: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಶಸ್ತಾಸ್ತ್ರಗಳ ಠೇವಣಿಗೆ ಜಿಲ್ಲಾಧಿಕಾರಿ ಸೂಚನೆ

ಸಂಸ್ಕಾರ ಕಡಿಮೆ ಇದ್ದವರಿಗೆ , ಅನಾರೋಗ್ಯದಿಂದ ಇರುವವರಿಗೆ ಇದರ ಪರಿಣಾಮ ಬೀಳಲಿದೆ.  ಚುನಾವಣಾ ಸಂದರ್ಭದಲ್ಲಿ ಕೆಲ ರಾಜಕಾರಣಿಗಳಿಗೆ ಕೋಪ ಉದ್ವೇಗ ಸಿಟ್ಟು ಉಲ್ಬಣಿಸುವ ಸಾಧ್ಯತೆ ಇದೆ. ಕೊಡುವ ಹೇಳಿಕೆಗಳು ಮತ್ತು ತೆಗೆದುಕೊಳ್ಳುವ ನಿರ್ಧಾರಗಳು ವ್ಯತಿರಿಕ್ತವಾಗುವ ಸಾಧ್ಯತೆ ಇದೆ. ಪ್ರತಿಕ್ರಿಯೆಗಳನ್ನು ಕೊಡುವಾಗ ರಾಜಕಾರಣಿಗಳು ಬಹಳ ಜಾಗ್ರತೆ ವಹಿಸಬೇಕು.ಪ್ರಬುದ್ಧತೆಯಿಂದ ವರ್ತಿಸಿದರೆ ಮಾತ್ರ ಯಶಸ್ಸು ಸಾಧ್ಯ. ಸಿಂಹ ಮತ್ತು ತುಲಾ, ಮೇಷ ರಾಶಿಗೆ ಇದರ ಪರಿಣಾಮಗಳು ಇರಲಿದೆ ಎಂದಿದ್ದಾರೆ.

ಹಾಸನಕ್ಕೆ ದೇವೇಗೌಡ್ರ ಪರಿಹಾರ ಸೂತ್ರ: ರೇವಣ್ಣ ಟೆಂಪಲ್‌ ರನ್‌ ಸುಸೂತ್ರ

click me!