Garuda Purana: ಸ್ನಾನಗೃಹದ ವಿಷಯದಲ್ಲಿ ಈ ತಪ್ಪು ಮಾಡಿದ್ರೆ ಬಡತನ ಒಕ್ಕರಿಸುತ್ತೆ!

By Suvarna NewsFirst Published Apr 2, 2023, 3:13 PM IST
Highlights

ಸ್ನಾನಗೃಹದಲ್ಲಿ ಮಾಡುವ ಕೆಲವು ತಪ್ಪುಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದರಿಂದಾಗಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ನಾನಗೃಹದಲ್ಲಿ ಏನು ಮಾಡಬಾರದು ಗೊತ್ತಾ?

ಗರುಡ ಪುರಾಣವು 18 ಮಹಾಪುರಾಣಗಳಲ್ಲಿ ಒಂದು ಆಧ್ಯಾತ್ಮಿಕ ಪುಸ್ತಕವಾಗಿದೆ, ಇದನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಜನರು ವಿಶೇಷವಾಗಿ ಗರುಡ ಪುರಾಣವನ್ನು ಸಂಬಂಧಿಕರ ಮರಣದ ನಂತರ ಮನೆಯಲ್ಲಿ ಓದುವ ಪುಸ್ತಕವೆಂದು ಪರಿಗಣಿಸುತ್ತಾರೆ. ಏಕೆಂದರೆ ಇದು ಜನನ, ಮರಣ, ಪುನರ್ಜನ್ಮ, ಸ್ವರ್ಗ, ನರಕ ಮತ್ತು ಯಮಲೋಕ ಇತ್ಯಾದಿಗಳ ಬಗ್ಗೆ ವಿವರವಾಗಿ ವಿವರಿಸುತ್ತದೆ. ಆದರೆ ಇದರೊಂದಿಗೆ ಜೀವನವನ್ನು ಉತ್ತಮಗೊಳಿಸುವ ಹಲವು ಮಾರ್ಗಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣದಲ್ಲಿ ಹೇಳಲಾದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ಜನರು ತೊಂದರೆಗಳಿಂದ ದೂರವಿರುತ್ತಾರೆ.

ಪ್ರತಿ ವ್ಯಕ್ತಿಯೂ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ಹೊಂದಿರುತ್ತಾನೆ. ಅದು ಕುಟುಂಬದ ಮೇಲೆ ಮತ್ತು ವ್ಯಕ್ತಿಯ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತಿರುತ್ತದೆ. ವ್ಯಕ್ತಿಯು ತನ್ನ ತಪ್ಪು ಅಭ್ಯಾಸಗಳಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೈನಂದಿನ ಜೀವನಕ್ಕೆ ಸಂಬಂಧಿಸಿದ ಇಂಥ ಕೆಲ ಅಭ್ಯಾಸಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಅಭ್ಯಾಸಗಳನ್ನು ನಾವು ತಿಳಿದೋ ತಿಳಿಯದೆಯೋ ನಿರ್ಲಕ್ಷಿಸುತ್ತೇವೆ. ಇದರಿಂದ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಸ್ನಾನಗೃಹದಲ್ಲಿ ಮಾಡುವ ಕೆಲವು ತಪ್ಪುಗಳು ನಿಮಗೆ ದೊಡ್ಡ ತೊಂದರೆಯನ್ನು ಉಂಟು ಮಾಡಬಹುದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ತಪ್ಪುಗಳು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸಬಹುದು. ಹಾಗಾಗಿ, ಗರುಡ ಪುರಾಣದ ಪ್ರಕಾರ, ಸ್ನಾನಗೃಹ ವಿಷಯದಲ್ಲಿ ಮಾಡಬಾರದ ತಪ್ಪುಗಳು ಯಾವೆಲ್ಲ ನೋಡೋಣ. 

Latest Videos

Tulsi Plant Vastu: ತುಳಸಿಯನ್ನು ಈ ದಿಕ್ಕಲ್ಲಿ ನೆಟ್ಟರೆ, ಮನೆಗೆ ಸಿಗುವುದು ಧನಲಕ್ಷ್ಮೀ ಕಟಾಕ್ಷ

ಬಾತ್ ರೂಂನಲ್ಲಿ ತಪ್ಪಾಗಿಯೂ ಈ ಕೆಲಸವನ್ನು ಮಾಡಬೇಡಿ..

  • ಅನೇಕ ಜನರು ಸ್ನಾನದ ನಂತರ ಸ್ನಾನಗೃಹವನ್ನು ಕೊಳಕು ಅಥವಾ ಒದ್ದೆಯಾಗಿ ಬಿಡುತ್ತಾರೆ. ಆದರೆ ಇದನ್ನು ಎಂದಿಗೂ ಮಾಡಬಾರದು. ಕೊಳಕು ಬಾತ್ರೂಮ್ ದುರದೃಷ್ಟವನ್ನು ಉಂಟು ಮಾಡುತ್ತದೆ.
  • ಸ್ನಾನಗೃಹವು ನೀರಿನ ಅಂಶಕ್ಕೆ ಸಂಬಂಧಿಸಿದ ಸ್ಥಳವಾಗಿದೆ ಮತ್ತು ಚಂದ್ರನನ್ನು ನೀರಿನ ಅಂಶವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹದಲ್ಲಿ ಅನಗತ್ಯ ನೀರನ್ನು ವ್ಯರ್ಥ ಮಾಡಬೇಡಿ. ಹೀಗೆ ಮಾಡಿದರೆ ಜಾತಕದಲ್ಲಿ ಚಂದ್ರನ ಸ್ಥಾನ ದುರ್ಬಲಗೊಳ್ಳಬಹುದು ಮತ್ತು ಚಂದ್ರನಿಗೆ ಸಂಬಂಧಿಸಿದ ತೊಂದರೆಗಳನ್ನು ಸಹ ನೀವು ಎದುರಿಸಬೇಕಾಗಬಹುದು.
  • ಕೊಳಕು ಅಥವಾ ಒದ್ದೆಯಾದ ಬಾತ್ರೂಮ್ ಹೊಂದಿರುವ ಕಾರಣ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಚಲನೆಯು ವೇಗವಾಗಿ ಹೆಚ್ಚಾಗುತ್ತದೆ. ಇದು ಪ್ರಗತಿಯ ಹಾದಿಯಲ್ಲಿ ಅಡಚಣೆಯಾಗುತ್ತದೆ.
  • ಇನ್ನೊಂದೆಡೆ ಬಾತ್ ರೂಂ ಕೊಳಕು ಇರುವ ಮನೆಗಳಲ್ಲಿ ರಾಹು-ಕೇತುಗಳ ದೋಷವೂ ಹೆಚ್ಚುತ್ತದೆ.

    ಹನುಮ ಜಯಂತಿಯಂದೇ ಶುಕ್ರ ಗೋಚಾರ: 6 ರಾಶಿಗಳಿಗೆ ಏಪ್ರಿಲ್ ಮೊದಲ ವಾರದಿಂದಲೇ ಅದೃಷ್ಟದಾಟ ಶುರು
     
  • ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡದಿರುವವರ ಕಡೆಗೆನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ ಎನ್ನುತ್ತದೆ ಗರುಡ ಪುರಾಣ. ಏಕೆಂದರೆ ಅಶುದ್ಧತೆ ಇರುವಲ್ಲಿ ನಕಾರಾತ್ಮಕತೆ ನೆಲೆಸಿರುತ್ತದೆ. ಗರುಡ ಪುರಾಣದಲ್ಲಿ, ಅಲಕ್ಷ್ಮಿ ಮತ್ತು ಕಲಕರ್ಣಿಯನ್ನು ದುಷ್ಟ ಶಕ್ತಿಗಳೆಂದು ವಿವರಿಸಲಾಗಿದೆ. ಇವು ಸ್ವಚ್ಛವಾಗಿಲ್ಲದಿರುವೆಡೆ ಇರುತ್ತವೆ. 

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!