Air India Plane Crash: ದುರಂತದ ಬಗ್ಗೆ ಕಳೆದ ವಾರವೇ ಎಚ್ಚರಿಕೆ ಕೊಟ್ಟಿದ್ದ ಖ್ಯಾತ ಜ್ಯೋತಿಷಿ!

Published : Jun 12, 2025, 05:45 PM IST
Air India Plane Crash Prediction

ಸಾರಾಂಶ

ಗುಜರಾತ್​ನ ಅಹಮ್ಮದಾಬಾದ್​ನಲ್ಲಿ ಸಂಭವಿಸಿರುವ ಭೀಕರ ವಿಮಾನ ಅಪಘಾತದಲ್ಲಿ 242 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಆದರೆ ಇದರ ನಡುವೆಯೇ ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ನೀಡಿದ್ದ ಎಚ್ಚರಿಕೆ ಬೆಳಕಿಗೆ ಬಂದಿದೆ. 

 

ಗುಜರಾತ್​ನ ಅಹಮ್ಮದಾಬಾದ್​ನಲ್ಲಿ ಭೀಕರ ವಿಮಾನ ಅಪಘಾತ ಇಂದು ಸಂಭವಿಸಿದೆ. ಮೇಘನಿ ನಗರ ಪ್ರದೇಶದಲ್ಲಿ ಪ್ರಯಾಣಿಕರು, ಸಿಬ್ಬಂದಿ ಸೇರಿ ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸುಮಾರು 180 ಮಂದಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ವಿಮಾನ ಅಪ್ಪಳಿಸಿರುವ ಕಟ್ಟಡದಲ್ಲಿ ಇದ್ದ ಜನರೂ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೂಡ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ತಾಂತ್ರಿಕ ದೋಷದ ಕಾರಣಕ್ಕೆ ಟೇಕ್‌ ಆಫ್ ಆದ 15 ಕಿ ಮೀಟರ್‌ ದೂರದಲ್ಲಿ 600 ರಿಂದ 700 ಅಡಿ ಎತ್ತರದಲ್ಲಿ ಹಾರಿರುವಾಗ ವಿಮಾನ ಪತನವಾಗಿದೆ. ಜನ ವಸತಿ ಕಟ್ಟಡ ಮೇಲೆ ಮತ್ತು ಅಲ್ಲೇ ಇರುವ ಹಾರ್ಸ್ ಕ್ಯಾಂಪ್ ಬಳಿ ವಿಮಾನ ಬಿದ್ದಿದೆ ಎಂದು ಹೇಳಲಾಗುತ್ತಿದ್ದರೂ, ಈ ವಿಮಾನ ದುರಂತಕ್ಕೆ ಸಂಭವಿಸಿದಂತೆ ಹಲವಾರು ಅನುಮಾನಗಳೂ ಸುಳಿದಾಡುತ್ತಿವೆ.

ಇವೆಲ್ಲವುಗಳ ನಡುವೆ, ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ಕಳೆದ ವಾರವೇ ಈ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ಆದರೆ, ಆಗ ಅಷ್ಟು ಬೆಳಕಿಗೆ ಬಾರದಿದ್ದ ಅವರ ಈ ಟ್ವೀಟ್​ ಇದೀಗ ವೈರಲ್​ ಆಗುತ್ತಿದೆ. ಅದರಲ್ಲಿ ಶರ್ಮಿಷ್ಠಾ ಅವರು, ವಿಮಾನ ಅಪಘಾತ ಮತ್ತು ವಾಯುಯಾನ ವಲಯದಲ್ಲಿ ಸಂಭವನೀಯ ವಿನಾಶ ಎಂದು ಎಚ್ಚರಿಸಿದ್ದರು. ಕಳೆದ ತಿಂಗಳು ಅವರು ಗ್ರಹಗತಿಗಳನ್ನು ನೋಡಿ ಭಾರಿ ವಿಮಾನ ಅಪಘಾತದ ಮುನ್ಸೂಚನೆ ಇರುವುದಾಗಿ ತಿಳಿಸಿದ್ದರು. ಅದನ್ನೇ ಉಲ್ಲೇಖಿಸಿ ಪುನಃ ಕಳೆದ ವಾರ ಇನ್ನೊಂದು ಟ್ವೀಟ್​ ಮಾಡಿದ್ದ ಅವರು, ಗುರು, ಮೃಗಶಿರ ಮತ್ತು ಆರ್ದ್ರ ನಕ್ಷತ್ರದಲ್ಲಿದ್ದಾಗ, ವಾಯುಯಾನದಲ್ಲಿ ಅಭಿವೃದ್ಧಿ ಇರುತ್ತದೆ ಆದರೆ ಸುರಕ್ಷತೆ ಮತ್ತು ಸ್ಥಿರತೆಯ ಕೊರತೆ ಇರುತ್ತದೆ. ಭೀಕರ ಅಪಘಾತ ಸಂಭವಿಸುವ ಸಾಧ್ಯತೆಯ ಬಗ್ಗೆ ನನ್ನ ಕಳೆದ ತಿಂಗಳ ಮಾತಿಗೆ ಈಗಲೂ ಬದ್ಧಳಾಗಿದ್ದೇನೆ ಎಂದಿದ್ದರು. ವಿಮಾನ ಅಪಘಾತಗಳು ಭಾರಿ ಸದ್ದು ಮಾಡುತ್ತವೆ, ಇದು ಹೆಡ್​ಲೈನ್​ ಆಗುತ್ತದೆ ಎಂದು ಶರ್ಮಿಷ್ಠಾ ಹೇಳಿದ್ದರು. ಇದೀಗ ದುರಂತದ ಬಳಿಕ ಮತ್ತೊಂದು ಟ್ವೀಟ್​ ಮಾಡಿರುವ ಅವರು, ಇಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ನಾವು ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ದುರದೃಷ್ಟಕರ. ಗುರು ಗ್ರಹವು ಇನ್ನೂ ಆರ್ದ್ರಾ ಪ್ರವೇಶಿಸಿಲ್ಲ, ಮತ್ತು ಭಾರತದ ಮಂಗಳ ಮಹಾದಶಾ ಇನ್ನೂ ಪ್ರಾರಂಭವಾಗಿಲ್ಲ - ಆದರೆ ಈಗಾಗಲೇ ಬಹಳಷ್ಟು ಪ್ರಾರಂಭವಾಗಿದೆ.ಇನ್ನೂ ಹೆಚ್ಚಿನವು ಇದೆ ಎಂದಿದ್ದಾರೆ. 

ಇನ್ನು ಈ ವಿಮಾನ ದುರಂತದ ಕುರಿತು ಹೇಳುವುದಾದರೆ, ವಿಮಾನವು ಅಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ ಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. AI-171 ನಂಬರ್‌ ನ ಬೋಯಿಂಗ್ -787-8 ಮಾದರಿಯ ವಿಮಾನ 1.10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ 1.38ಕ್ಕೆ ತಡವಾಗಿ ಟೇಕ್‌ ಆಫ್‌ ಆಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಅಪಘಾತದ ನಂತರ, ಎಲ್ಲ ವಿಮಾನ ಮಾರ್ಗಗಳನ್ನು, ಭೂ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಸ್ಥಳಕ್ಕೆ ಭಾರೀ ಭದ್ರತೆಯೊಂದಿಗೆ ಪೊಲೀಸ್ ಪಡೆ, ಅಗ್ನಿಶಾಮಕ, ವೈದ್ಯರ ತಂಡ ಆಗಮಿಸಿದೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಇದರಲ್ಲಿ 10 ಮಂದಿ ವಿಮಾನ ಸಿಬ್ಬಂದಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳ ದೃಢೀಕರಣ ನಿರೀಕ್ಷೆಯಲ್ಲಿದೆ. ಸದ್ಯ ದುರ್ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಗಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಘಟನೆಯ ಬಗ್ಗೆ ಪ್ರಧಾನಿ ಮೋದಿ, ವಿಮಾನಯಾನ ಸಚಿವ, ಏರ್‌ ಇಂಡಿಯಾ ವಿಮಾನ ಸಂಸ್ಥೆ ಅಧ್ಯಕ್ಷರು ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿ ಸಂತಾಪ ಸೂಚಿಸಿದ್ದಾರೆ. ಈ ಘಟನೆಯಿಂದ ನನಗೆ ದಿಗ್ಬ್ರಮೆಯಾಗಿದೆ. ಗುಜರಾತ್‌ ಸರ್ಕಾರದ ಎಲ್ಲಾ ಸಚಿವರ ಜತೆ ಮಾತುಕತೆ ನಡೆಸುತ್ತಿದ್ದು, ಅಗತ್ಯ ನೆರವು ನೀಡಲು ಸೂಚಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

 

 

 

 

 

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ
ಇಂದು ಮಧ್ಯಾಹ್ನ 3:38 ನಂತರ 4 ರಾಶಿಗೆ ಜಾಕ್‌ಪಾಟ್, ಗುರು ವಕ್ರಿಯಿಂದ ಸಂಪತ್ತು, ಅದೃಷ್ಟ