ಮನೆಯಲ್ಲಿ ಇವಿದ್ದರೆ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ!

By Web Desk  |  First Published May 31, 2019, 5:40 PM IST

ಕೆಲವೊಮ್ಮೆ ನಾವು ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೂ, ನಾವು ಪರಿಶ್ರಮ ಪಟ್ಟು ಕೆಲಸ ಮಾಡಿದರೂ ಮನೆಯಲ್ಲಿ ಆರ್ಥಿಕ ಸಮಸ್ಯೆ ವಕ್ಕರಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿವೆ ಸಿಂಪಲ್ ಟಿಪ್ಸ್.. 


ವಾಸ್ತು ಪ್ರಕಾರ ಮನೆಯಲ್ಲಿ ಏನಿರಬೇಕು? ಏನಿರಬಾರದು ಅನ್ನೋ ಯೋಚನೆ ನಿಮಗಿದ್ದರೆ ಇಲ್ಲಿದೆ ಬೆಸ್ಟ್ ಟಿಪ್ಸ್.  ಈ ಆರು ವಸ್ತುಗಳನ್ನು ಮನೆಯಲ್ಲಿ ಸರಿಯಾದ ಸ್ಥಾನದಲ್ಲಿಟ್ಟರೆ ಎಲ್ಲಾ ಸಮಸ್ಯೆಗಳೂ ದೂರವಾಗುತ್ತವೆ. ಜೊತೆಗೆ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಿರುತ್ತಾಳೆ, ಅಂದರೆ ಮನೆಯಲ್ಲಿ  ಪರಿಸ್ಥಿತಿ ಉತ್ತಮವಾಗಿ, ಸಂಪತ್ತು ವೃದ್ಧಿಯಾಗುತ್ತದೆ. 

ಹೀಗೆಲ್ಲಾ ಆದ್ರೆ ಮನೆಯಲ್ಲಿ ನೆಗಟಿವ್ ಎನರ್ಜಿ ಇದೆ ಎಂದರ್ಥ

Tap to resize

Latest Videos

undefined

ಹನುಮಂತನ ಮೂರ್ತಿ: ಮನೆಯ ನೈಋತ್ಯ ಭಾಗದಲ್ಲಿ ಹನುಮಂತನ ಪಂಚಸ್ವರೂಪ ಮೂರ್ತಿ ಅಥವಾ ಫೋಟೋ ಇಟ್ಟು ನಿಯಮಿತವಾಗಿ ಪೂಜಿಸಿ. ಇದರಿಂದ ಮನೆಯಲ್ಲಿ ಧನ - ಸಂಪತ್ತು ಸದಾ ತುಂಬಿರುತ್ತದೆ. 
ಲಕ್ಷ್ಮಿ: ಮನೆಯ ಮುಖ್ಯ ದ್ವಾರದಲ್ಲಿ ಧನ ದೇವತೆ ಲಕ್ಷ್ಮಿ, ಕುಬೇರನ ಫೋಟೋ ಅಥವಾ ಸ್ವಸ್ತಿಕ ಚಿಹ್ನೆ ಹಾಕಿ. ಇದರಿಂದ ಹಣ ಯಾವತ್ತೂ ಕರಗೋಲ್ಲ.
ವಾಸ್ತು ದೇವತೆ: ಮನೆಯಲ್ಲಿ ವಾಸ್ತು ದೇವತೆ ಫೋಟೋ ಇಡೋದರಿಂದ ಮನೆಯ ಎಲ್ಲ ವಾಸ್ತು ದೋಷವೂ ನಿವಾರಣೆಯಾಗಿ, ಆರ್ಥಿಕ ಅಭಿವೃದ್ಧಿಯಾಗುತ್ತದೆ. 
ಪಿರಮಿಡ್: ಮನೆಯ ಯಾವ ಭಾಗದಲ್ಲಿ ಜನರು ಹೆಚ್ಚು ಸಮಯ ಕಳೆಯುತ್ತಾರೋ, ಅಲ್ಲಿ ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದ ಪಿರಮಿಡ್ ಇರಿಸಿ. ಇದರಿಂದ ಮನೆಯ ಸದಸ್ಯರ ಆದಾಯ ಹೆಚ್ಚುತ್ತದೆ. 


ಕಂಚಿನ ಆಮೆ: ಕಂಚಿನ ಆಮೆ ಮತ್ತು ಮೀನು ಮನೆಯಲ್ಲಿ ಇಡೋದರಿಂದ ಮನೆಗೆ ಶುಭವಾಗುತ್ತದೆ. ಇದರಿಂದ ಮನೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತದೆ. 


ಮಣ್ಣಿನ ಮಡಿಕೆ: ಮನೆಯ ಉತ್ತರ ಭಾಗದಲ್ಲಿ ನೀರಿನಿಂದ ತುಂಬಿದ  ಮಣ್ಣಿನ ಮಡಿಕೆ ಇಡಿ. ಇದರಿಂದ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಉಂಟಾಗುವುದಿಲ್ಲ. ಆದರೆ ಯಾವತ್ತೂ ನೀರಿನ ಮಡಿಕೆ ಖಾಲಿಯಾಗದಂತೆ ನೋಡಿಕೊಳ್ಳಿ. 

click me!