ಇಂದು ಬಾನಂಗಳದಲ್ಲಿ ಅದ್ಭುತ: ಹಲವು ಗ್ರಹಗಳ ಮೆರವಣಿಗೆ- ಇಷ್ಟಾರ್ಥ ಈಡೇರಿಸಿಕೊಳ್ಳುವುದು ಹೇಗೆ?

Published : Feb 28, 2026, 03:55 PM IST
6 Planets Parade

ಸಾರಾಂಶ

ಫೆಬ್ರುವರಿ 28 ರಂದು ಬಾನಂಗಳದಲ್ಲಿ ಬುಧ, ಶುಕ್ರ, ಗುರು, ಶನಿ ಸೇರಿದಂತೆ ಎಲ್ಲಾ ಗ್ರಹಗಳು ಒಟ್ಟಿಗೆ ಗೋಚರಿಸುವ ಅಪರೂಪದ ಘಟನೆ ನಡೆಯಲಿದೆ. ಈ ಸಮಯದಲ್ಲಿ ಶಕ್ತಿಯುತವಾದ ಶಕ್ತಿ ಇರುವುದರಿಂದ,  ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು, ಸರಳ ವಿಧಿವಿಧಾನದ ಮೂಲಕ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಮಯವಾಗಿದೆ.

ಇಂದು ಅರ್ಥಾತ್​ ಫೆಬ್ರುವರಿ 28, ಬಾನಂಗಳದಲ್ಲಿ ಅದ್ಭುತವೊಂದು ನಡೆಯಲಿದೆ. ವಿಜ್ಞಾನಿಗಳಿಗೂ, ಬಾಹ್ಯಾಕಾಶ ಸಂಶೋಧಕರಿಗೂ ಅಧ್ಯಯನಕ್ಕೆ ಸುಸಮಯ ಎನ್ನುವ ನಡುವೆಯೇ ಜನಸಾಮಾನ್ಯರಿಗೆ ಅವರ ಬಯಕೆಗಳನ್ನು ಈಡೇರಿಸಿಕೊಳ್ಳುವ ಅದ್ಭುತ ಸಮಯವೂ ಇದಾಗಿದೆ. ಮ್ಯಾನಿಫೆಸ್ಟೇಷನ್​ ಮೂಲಕ ಸರ್ವ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಇದಾಗಲೇ ಹಲವರು ಹೇಳಿದ್ದನ್ನು ನೀವು ಕೇಳಿರಬಹುದು. ಅಂಥ ಕೆಲವೇ ಕೆಲವು ವಿಶೇಷ ದಿನಗಳಲ್ಲಿ ಈ ದಿನವೂ ಒಂದಾಗಲಿದೆ.

ಅಪರೂಪದ ಘಟನೆ

ಇದಕ್ಕೆ ಮುಖ್ಯ ಕಾರಣ, ಇಂದು ಎಲ್ಲಾ ಗ್ರಹಗಳು ಆಕಾಶದಲ್ಲಿ ಒಟ್ಟಿಗೆ ಗೋಚರಿಸುತ್ತವೆ. 2040 ರವರೆಗೆ ಮತ್ತೆ ನಿರೀಕ್ಷಿಸಲಾಗದ ಅಪರೂಪದ ಆಕಾಶ ಘಟನೆ ಇದಾಗಿದೆ. ಬುಧ, ಶುಕ್ರ, ಗುರು, ಶನಿ ಮತ್ತು ಮಸುಕಾದ ಹೊರಗಿನ ಗ್ರಹಗಳು ಪಶ್ಚಿಮ ದಿಗಂತದಲ್ಲಿ ಇಂದು ಕಾಣಿಸಿಕೊಳ್ಳಲಿವೆ. ಈ ಗ್ರಹಗಳ ಮೆರವಣಿಗೆಯನ್ನು ನೋಡಲು ಉತ್ತಮ ಸಮಯವೆಂದರೆ ಸ್ಥಳೀಯ ಸೂರ್ಯಾಸ್ತದ ಸುಮಾರು 30 ನಿಮಿಷಗಳ ನಂತರ. ಇಂದು ಸೂರ್ಯಾಸ್ತದ ಅವಧಿ 6.24 ಆಸುಪಾಸು ಇರಲಿದೆ. ಒಂದೊಂದು ಸ್ಥಳಗಳಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಸೂರ್ಯಾಸ್ತವಾಗುವುದು ಸಹಜ ಪ್ರಕ್ರಿಯೆ. ಅದನ್ನು ಪರಿಗಣನೆಗೆ ತೆಗೆದುಕೊಂಡರೆ 7 ಗಂಟೆಯ ಬಳಿಕ ನೀವು ಈ ಗ್ರಹಗಳನ್ನು ನೋಡಬಹುದು.

ಸ್ಟ್ರಾಂಗ್​ ಎನರ್ಜಿ

ಇದೇ ವೇಳೆ ಇಷ್ಟಾರ್ಥ ಈಡೇರಿಸಿಕೊಳ್ಳಲು ಇದು ಸುಸಮಯವಾಗಿದೆ. ಈ ಕುರಿತು ಕಾವ್ಯಾ ಶಾಸ್ತ್ರಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ. ಸುದೀರ್ಘ ಅವಧಿಯ ಗುರಿಗಳನ್ನು ಈಡೇರಿಸಿಕೊಳ್ಳಲೂ ಇದು ಅದ್ಭುತ ಸಮಯವಾಗಿದೆ. ಸೂರ್ಯಾಸ್ತದ 30-45 ನಿಮಿಷದ ಬಳಿಕ ಪಶ್ಚಿಮ ದಿಕ್ಕಿನಲ್ಲಿ ಹಲವು ಗ್ರಹಗಳ ಸಂಗಮವನ್ನು ನೀವು ನೋಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಗ್ರಹಗಳು ನಕ್ಷತ್ರ ರೀತಿ ಮಿನುಗುವುದಿಲ್ಲ. ಆದ್ದರಿಂದ ನೀವು ಇದನ್ನು ಸುಲಭವಾಗಿ ಕಂಡುಹಿಡಿಯಬಹುದು. ಈ ಸಮಯದಲ್ಲಿ ಎನರ್ಜಿ ತುಂಬಾ ಸ್ಟ್ರಾಂಗ್​ ಆಗಿರುವ ಹಿನ್ನೆಲೆಯಲ್ಲಿ ಗೋಲ್​ ಸೆಟ್​ ಮಾಡಿಕೊಳ್ಳುವುದು, ಇಷ್ಟಾರ್ಥ ಈಡೇರಿಸಿಕೊಳ್ಳಲು ಸುಸಮಯವಾಗಿದೆ.

ನೀವು ಮಾಡಬೇಕಿರುವುದು ಏನು?

ಸೂರ್ಯಾಸ್ತದ ಸಮಯದಲ್ಲಿ ಕೈಕಾಲು ತೊಳೆದುಕೊಂಡು ದೇವರಿಗೆ ನಮಸ್ಕರಿಸಿ, ದೀಪವನ್ನು ಹಚ್ಚಿ, ಮನೆಯ ಹೊರಗಡೆಯೂ ದೀಪವನ್ನು ಹಚ್ಚ, ನಿಮಗೆ ಜೀವನದಲ್ಲಿ ಬೇಕಾಗಿರುವ ಐದು ಗುರಿಗಳನ್ನು ಸೆಟ್​ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ, ಕರಿಯರ್​ ಗ್ರೋತ್​, ಆರ್ಥಿಕ ಸ್ಥಿತಿ, ಸಂಬಂಧ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಬರೆದಿಟ್ಟುಕೊಳ್ಳಿ. ನಿಮ್ಮ ಜೀವನದಲ್ಲಿ ಇವೆಲ್ಲಾ ಆಗಿರುವಂತೆ ಕಲ್ಪನೆ ಮಾಡಿಕೊಂಡು ಈ ಅವಧಿಯಲ್ಲಿ ಆಕಾಶವನ್ನು ನೋಡುತ್ತಾ, ನವಗ್ರಹಗಳಿಗೆ ನಮಸ್ಕರಿಸಿ, ನನ್ನ ಜೀವನದಲ್ಲಿ ಇವೆಲ್ಲಾ ಆಗಿಹೋಗಿವೆ ಎನ್ನುವಂತೆ ಕಲ್ಪಿಸಿಕೊಳ್ಳಿ. ಅದನ್ನು ಓದಿದ ಬಳಿಕ ಪೇಪರ್​ ಅನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ. ಗ್ರಹಣದ ಬಳಿಕ ಅದನ್ನು ಸುಟ್ಟುಬಿಡಿ, ಭೂಮಿಯಲ್ಲಿ ಹೂತು ಬಿಡಿ. ಇಲ್ಲದೇ ಹೋದರೆ ಗಿಡದ ಬುಡಕ್ಕೆ ಹಾಕಿಬಿಡಿ ಎಂದಿದ್ದಾರೆ ಕಾವ್ಯಾ ಶಾಸ್ತ್ರಿ.

 

 

PREV
Read more Articles on
click me!

Recommended Stories

ಪೂರ್ವ ಭಾದ್ರಪದ ನಕ್ಷತ್ರದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಸಂಚಾರ, ಈ ನಾಲ್ಕು ರಾಶಿಗೆ ಅಪಾರ ಸಂಪತ್ತು, ಯಶಸ್ಸು
ಈ ಸಂಖ್ಯೆಯಲ್ಲಿ ಜನಿಸಿದ ಜನರಿಗೆ ಸರ್ಕಾರಿ ಕೆಲಸ ಭಾಗ್ಯ, ಗೌರವ, ಹೆಸರು, ಹಣ