ಮನೆ ಬಣ್ಣ ಮತ್ತು ವಾಸ್ತು ನಿಯಮ....

Published : Feb 13, 2019, 11:03 AM IST
ಮನೆ ಬಣ್ಣ ಮತ್ತು ವಾಸ್ತು ನಿಯಮ....

ಸಾರಾಂಶ

ಮನೆ ಗೋಡೆಗೆ ಹಚ್ಚುವ ಬಣ್ಣಗಳು ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದೇ ಆಧಾರದ ಮೇಲೆ ಮನೆಯ ವಿವಿಧ ಭಾಗಗಳಿಗೆ ಕೆಲವು ಬಣ್ಣಗಳನ್ನು ಹಚ್ಚಿದರೆ ಮಾತ್ರ ನೆಮ್ಮದಿ ಕಟ್ಟಿಟ್ಟ ಬುತ್ತಿ. ಯಾವ ಬಣ್ಣ, ಎಲ್ಲಿಗೆ ಒಳ್ಳೆಯದು?

ಮನೆಯಲ್ಲಿ ಸಂತೋಷ ಮತ್ತು ಶಕ್ತಿ ತುಂಬಿರಬೇಕು. ವಾಸ್ತುವಿನಲ್ಲಿ ಬಣ್ಣಕ್ಕೆ ಹೆಚ್ಚಿನ ಮಹತ್ವವಿದ್ದು, ಯಾವ ರೂಮಿನಲ್ಲಿ ಯಾವ ಬಣ್ಣ ಇದ್ದರೆೊಳಿತು?

ಕೆಂಪು: ಬೋಲ್ಡ್ ಮತ್ತು ಬ್ಯುಟಿಫುಲ್ ಬಣ್ಣವಾದ ಕೆಂಪು ಪ್ರೇಮ, ಉತ್ಸಾಹ ಮತ್ತು ಸಾಹಸದ ಸಂಕೇತ. ಈ ಬಣ್ಣವನ್ನು ಬೆಡ್‌ರೂಮಿನಲ್ಲಿ ಬಳಸಿದರೊಳಿತು. ಕೆಂಪು ಬಣ್ಣದ ದಿಂಬು, ಬೆಡ್ ಕವರ್ ಮತ್ತು ಶೋ ಪೀಸ್ ಇಡಿ. ಈ ಬಣ್ಣ ವ್ಯಕ್ತಿಗಳನ್ನು ತಮ್ಮೆಡೆಗೆ ಬೇಗ ಸೆಳೆಯುತ್ತದೆ. ಜೊತೆಗೆ ಸ್ಪೂರ್ತಿ ತುಂಬುತ್ತದೆ. 

ಕೇಸರಿ ಬಣ್ಣ: ಖುಷಿ, ಆಶಾವಾದಿ, ಸಫಲತೆಯ ಸಂಕೇತ ಕೇಸರಿ. ಯಾವ ಜಾಗದಲ್ಲಿ ಕ್ರಿಯೇಟಿವ್ ಮತ್ತು ಎನರ್ಜಿಟಿಕ್ ಕೆಲಸ ಮಾಡುತ್ತೀರೋ, ಆ ಜಾಗದಲ್ಲಿ ಕೇಸರಿ ಬಣ್ಣ ಹಚ್ಚಿ. ಡೈನಿಂಗ್ ಏರಿಯಾದಲ್ಲಿ ಕೇಸರಿ ಬಣ್ಣದ ವಸ್ತುಗಳನ್ನಿಡಿ. 

ಹಳದಿ: ಇದು ವ್ಯಕ್ತಿಯ ರಚನಾತ್ಮಕ ಕ್ಷಮತೆ, ಜ್ಞಾನ, ವಿದ್ಯೆ, ಆತ್ಮವಿಶ್ವಾಸ, ಬುದ್ಧಿವಂತಿಕೆ, ಭಯ ಮತ್ತು ನಿರಾಸೆಯಂಥ ಗುಣ ದೋಷವನ್ನು ನಿಯಂತ್ರಿಸುತ್ತದೆ. ಹಳದಿ ಬಣ್ಣದ ವಸ್ತು ಡೈನಿಂಗ್ ಟೇಬಲ್ ಮೇಲಿಡಿ. 

ಹಸಿರು: ಸ್ಫೂರ್ತಿ ಮತ್ತು ಸಮೃದ್ಧಿಯ ಸಂಕೇತ ಹಸಿರು. ಪ್ರಕೃತಿ ಮತ್ತು ಅಧ್ಯಾತ್ಮದ ಬಣ್ಣವಿದು. ಸಮತೋಲನದ ಬಣ್ಣವೂ ಹೌದು. ಇದು ಮನಸ್ಸಿನ ಸಮತೋಲನ  ಕಾಪಾಡುತ್ತದೆ. ಎಲ್ಲಾ ರೂಮ್ ಜೊತೆ ಲಿವಿಂಗ್ ರೂಮ್‌ನಲ್ಲೂ ಹಸಿರು ಬಣ್ಣವಿರಲಿ. 

ನೀಲಿ: ಶಕ್ತಿ, ಬುದ್ಧಿವಂತಿಕೆ, ಗೌರವ, ನಮ್ರತೆ, ಶಾಂತಿಯ ಸಂಕೇತ ನೀಲಿ. ಮನೆಯಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವುದಲ್ಲದೇ, ಖಿನ್ನತೆಯನ್ನೂ ದೂರ ಮಾಡುವ ಶಕ್ತಿ ಈ ಬಣ್ಣಕ್ಕಿದೆ. 

ಸಂತೋಷ ಸಮೃದ್ಧಿಗೆ ಪೂಜಾ ಗೃಹಕ್ಕೆ ವಾಸ್ತು ಟಿಪ್ಸ್...

PREV
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!