)
Suvarna Special: 'ಐ ಲವ್ ಪಾಕಿಸ್ತಾನ' ಎಂದಿದ್ದೇಕೆ ಡೊನಾಲ್ಡ್ ಟ್ರಂಪ್? ಟ್ರಂಪ್ ಪಾಕ್ ಪ್ರೇಮದ ಹಿಂದಿರೋ ಅಸಲಿ ಸತ್ಯವೇನು?
ಪೆಹಲ್ಗಾಮ್ ನರಮೇಧದ ರೂವಾರಿ ಆಸಿಮ್ ಮುನೀರ್‌ಗೆ ಡೊನಾಲ್ಡ್ ಟ್ರಂಪ್ ರಾಜಾತಿಥ್ಯ. ಈ ಭೇಟಿಯ ಹಿಂದಿನ ರಹಸ್ಯವೇನು? ಪಾಕಿಸ್ತಾನದಲ್ಲಿ ಸರ್ಕಾರ ಪತನದ ಸೂಚನೆಯೇ?
ಬೆಂಗಳೂರು (ಜೂ.21): ಪೆಹಲ್ಗಾಮ್ ನರಮೇಧದ ರೂವಾರಿಗೆ ಡೊನಾಲ್ಡ್ ಟ್ರಂಪ್ ರಾಜಾತಿಥ್ಯ ಕೊಟ್ಟಿದ್ದಾರೆ. ಮರ್ಕಟ ಮೆದುಳಿನ ಅಮೆರಿಕಾದ ಅಧ್ಯಕ್ಷ ಒಳ ಮಸಲತ್ತು ನಡೆಸುತ್ತಿದ್ದಾರಾ ಎನ್ನುವ ಅನುಮಾನ ಮಾಡಿದೆ. ಉಗ್ರರಾಷ್ಟ್ರದ ರಕ್ಕಸನ ಜೊತೆ ದೋಸ್ತಿಗೆ ಕಾರಣವೇನು ಅನ್ನೋದೇ ಕುತೂಹಲವಾಗಿದೆ.
ಆಸಿಮ್ ಮುನೀರ್‌ನ ಅಮೆರಿಕಾ ಭೇಟಿ ಪಾಕಿಸ್ತಾನದಲ್ಲಿ ಸರ್ಕಾರ ಪತನಗೊಳ್ಳೋ ಸೂಚನೆಯಂತೆ ಕಾಣುತ್ತಿದೆ. ಪಾಕಿಸ್ತಾನದ ಇತಿಹಾಸ ತೆಗೆದು ನೋಡಿದರೆ ಹೌದು ಅನ್ನೋ ಉತ್ತರ ಬರುತ್ತೆ. ಹಾಗಿದ್ರೆ ಏನಿದು ಒಂದು ಬೇಟಿಯ ಹಿಂದಿರೋ ರಹಸ್ಯ ?
ಮುಚ್ಚಿದ ಬಾಗಿಲು..ಆಸಿಮ್ ಮುನೀರ್ ಜೊತೆ ಟ್ರಂಪ್ ಏನು ಸೀಕ್ರೆಟ್ ಮಾತನಾಡಿದ್ದಾರೆ. ಅಮೆರಿಕಾದ ವೈಟ್ ಹೌಸ್‌ನ ಆ ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆಯೇನು.? ಪಾಕಿಸ್ತಾನದ ಮೇಲೆ ಡೊನಾಲ್ಡ್ ಟ್ರಂಪ್ಗೆ ಪ್ರೀತಿ ಆಗಿರೋದ್ಯಾಕೆ..? ಒಬ್ಬ ಕಾಳಿಂಗ ಸರ್ಪ.. ಇನ್ನೊಬ್ಬರು ಕಲಿಯುಗ ಶಕುನಿ.. ಇದೆಂಥಾ ಆಟ.?