ಹೊಸ ಸಾಂಗ್‌ನಲ್ಲಿ ಮುಖ ತೋರಿಸದ ಚಂದನ್‌ ಶೆಟ್ಟಿ! ಏನಿದರ ಮರ್ಮ?

ರ್ಯಾಪರ್ ಚಂದನ್ ಶೆಟ್ಟಿಯ ಹೊಚ್ಚ ಹೊಸ ಸಾಂಗ್ ರಿಲೀಸ್ ಆಗಿದೆ. ಪಕ್ಕದ್​ ಹಳ್ಳಿ ನಿಂಗವ್ವ ನಮ್ಮಳ್ಳಿಗೆ ಬಂದವ್ಳೆ.. ಅನ್ನೋ ಮಜವಾದ ಲಿರಿಕ್ಸ್ ಇರೋ ಸಾಂಗ್ ಈಗ ಧೂಳ್ ಎಬ್ಬಿಸ್ತಾ ಇದೆ.

Govindaraj S | Updated : Jun 21 2025, 01:43 PM
Share this Video

ರ್ಯಾಪರ್ ಚಂದನ್ ಶೆಟ್ಟಿ ಹೊಚ್ಚ ಸಾಂಗ್​ನ ರಿಲೀಸ್ ಮಾಡಿದ್ದಾರೆ. ಇತ್ತೀಚಿಗೆ ಹೀರೋ ಆಗಿ ಬಿಗ್ ಸ್ಕ್ರೀನ್ ಮೇಲೆ ಮಿಂಚಿದ್ದ ಚಂಚನ್​​ ಈ ಸಾರಿಯ್ಯಾಕೋ ತಮ್ಮದೇ ಹಾಡಲ್ಲಿ ಮುಖ ತೋರಿಸಿಲ್ಲ. ಅಷ್ಟಕ್ಕೂ ಚಂದನ್ ಶೆಟ್ಟಿ ಕ್ಯಾಮೆರಾ ಎದುರು ಬರಲ್ಲ ಎಂದಿದ್ದೇಕೆ..?  ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ರ್ಯಾಪರ್ ಚಂದನ್ ಶೆಟ್ಟಿಯ ಹೊಚ್ಚ ಹೊಸ ಸಾಂಗ್ ರಿಲೀಸ್ ಆಗಿದೆ. ಪಕ್ಕದ್​ ಹಳ್ಳಿ ನಿಂಗವ್ವ ನಮ್ಮಳ್ಳಿಗೆ ಬಂದವ್ಳೆ.. ಅನ್ನೋ ಮಜವಾದ ಲಿರಿಕ್ಸ್ ಇರೋ ಸಾಂಗ್ ಈಗ ಧೂಳ್ ಎಬ್ಬಿಸ್ತಾ ಇದೆ. ಉತ್ತರ ಕರ್ನಾಟಕದಲ್ಲಿ ಸಖತ್ ಜನಪ್ರಿಯವಾಗಿದ್ದ   ನಿಂಗವ್ವನ ಜನಪದ ಹಾಡಿಗೆ ಹೊಸ ಟಚ್ ಕೊಟ್ಟು ಮಸ್ತ್ ರ್ಯಾಪ್ ಸಾಂಗ್ ಮಾಡಿದ್ದಾರೆ ಚಂದನ್ ಶೆಟ್ಟಿ. ಯೆಸ್ ಚಂದನ್​ರ ಹೊಸ ಹಾಡಲ್ಲಿ ಚಂದನ್ ಕ್ಯಾಮೆರಾ ಮುಂದೆ ಬಂದಿಲ್ಲ . ಓನ್ಲಿ ಡ್ಯಾನ್ಸರ್ಸ್ ಮಾತ್ರ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಚಂದನ್ ಮ್ಯೂಸಿಕ್ ಮತ್ತು ಸಿಂಗಿಂಗ್ ಜವಾಬ್ದಾರಿ ಮಾತ್ರ ವಹಿಸಿಕೊಂಡಿದ್ದಾರೆ. ಅಸಲಿಗೆ ಚಂದನ್ ಶೆಟ್ಟಿ ಈ ಹಿಂದೆ ಮಾಡಿದ ರ್ಯಾಪ್ ಸಾಂಗ್ ಗಳಲ್ಲೆಲ್ಲಾ ಖುದ್ದು ತಾವೇ ಹೆಜ್ಜೆ ಹಾಕ್ತಾ ಇದ್ರು. ಮ್ಯೂಸಿಕ್ ಜೊತೆಗೆ ಕ್ಯಾಮೆರಾ ಮುಂದೆಯೂ ಮೋಡಿ ಮಾಡ್ತಾ ಇದ್ರು. ಆಧ್ರೆ ಈ ಸಾರಿಯಾಕೋ ಚಂದನ್​ ಆನ್​ ಸ್ಕ್ರೀನ್ ಬಂದಿಲ್ಲ. ಕೆಲ ದಿನಗಳ ಹಿಂದೆ ಚಂದನ್ ಶೆಟ್ಟಿ ನಾಯಕನಟನಾಗಿ ಕಾಣಿಸಿಕೊಂಡ ಸೂತ್ರಧಾರಿ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಚೆನ್ನಾಗೇ ಇತ್ತಾದ್ರೂ ಅದ್ಯಾಕೋ ಜನ ಥಿಯೇಟರ್​ಗೆ ಬರಲಿಲ್ಲ. ಅದೇ ಬೇಸರಕ್ಕೆ ಚಂದು ಕ್ಯಾಮೆರಾ ಮುಂದೆ ಬರೋದನ್ನ ಆವಾಯ್ಡ್ ಮಾಡಿದ್ರಾ ಗೊತ್ತಿಲ್ಲ. ಒಟ್ನಲ್ಲಿ ಹೊಸ ಹಾಡಲ್ಲಿ ಚಂದನ್ ಶೆಟ್ಟಿ ಕಾಣ್ತಾ ಇಲ್ಲ. ಆದ್ರೆ ಚಂದನ್ ಶೆಟ್ಟಿ ಫ್ಲೆವರ್ ಅಂತೂ ಕಾಣ್ತಾ ಇದೆ. ಚಂದನ್ ತೆರೆ ಮೇಲೆ ಬಂದರೂ ಬಾರದೇ ಇದ್ರೂ ಅವರ ಹಾಡುಗಳು ಸದ್ದು ಮಾಡೇ ಮಾಡುತ್ತೆ.

Related Video