)
Suvarna Special: ಶತ್ರು ವಿನಾಶಕ್ಕೆ ಮೋದಿಯ ಯುರೋಪ್ ಮಿತ್ರವ್ಯೂಹ! ಡ್ರ್ಯಾಗನ್ ರೆಕ್ಕೆ ಕತ್ತರಿಸಲು ಮೋದಿ ರೋಚಕ ರಣತಂತ್ರ!
ಚೀನಾವನ್ನು ಮಟ್ಟಹಾಕಲು ಮೋದಿ ಯುರೋಪ್‌ನಲ್ಲಿ ಮಿತ್ರರಾಷ್ಟ್ರಗಳನ್ನು ಹುಡುಕುತ್ತಿದ್ದಾರೆ. ಕ್ರೊಯೇಷಿಯಾದೊಂದಿಗಿನ ಭಾರತದ ಸ್ನೇಹ ಚೀನಾಗೆ ಒಂದು ದೊಡ್ಡ ಹೊಡೆತವಾಗಿದೆ. ಮುಂದಿನ ದಿನಗಳಲ್ಲಿ ಈ ಜಾಗತಿಕ ರಾಜಕೀಯದ ಪರಿಣಾಮಗಳೇನು ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು (ಜೂ.21): ಶತ್ರು ವಿನಾಶಕ್ಕೆ ಮೋದಿ ಯುರೋಪ್ ಮಿತ್ರವ್ಯೂಹ ಹಣೆದಿದ್ದಾರೆ. ಡ್ರ್ಯಾಗನ್ ಚೀನಾದ ರೆಕ್ಕೆ ಕತ್ತರಿಸುವ ನಿಟ್ಟಿನಲ್ಲಿ ಮೋದಿ ರೋಚಕ ರಣತಂತ್ರ ಹಣೆದಿದ್ದಾರೆ. ಕ್ರೊಯೇಷಿಯಾ ಜೊತೆ ದೋಸ್ತಿ ಮಾಡಿಕೊಳ್ಳುವ ಮೂಲಕ ಭಾರತ ಸಮುದ್ರ ದಾಳ ಹಣೆದಿದೆ.
ಚೀನಾ ಮಸಲತ್ತು ಮೆಟ್ಟಿ ನಿಲ್ಲಲು ನಮೋ ಮಹಾ ಹೆಜ್ಜೆ ಇಟ್ಟಿದ್ದು, ಸಪ್ತಸಾಗರದಾಚೆ ಮೋದಿ ಹೆಣೆದ ಜಲವ್ಯೂಹ ಎಂಥದ್ದು ಅದರ ಪರಿಣಾಮ ಏನು ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅದರೊಂದಿಗೆ ಚೀನಾ ಕಬಂಧಬಾಹು ಯುರೋಪ್‌ವರೆಗೂ ವಿಸ್ತರಿಸಿದೆ ಅನ್ನೋದು ಗೊತ್ತಾಗಿದೆ.
ಯುರೋಪ್ ಹೆಬ್ಬಾಗಿಲಲ್ಲಿ ಮೋದಿ ಹೆಜ್ಜೆ ಇಟ್ಟಿದ್ದರೂ ಅವರ ಟಾರ್ಗೆಟ್ ಚೀನಾ ಆಗಿದೆ. ಡ್ರ್ಯಾಗನ್ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ಕ್ರೊಯೇಷಿಯಾ ಅಸ್ತ್ರವಾಗಿದೆ. ಭಾರತ Vs ಚೀನಾ ಜಿದ್ದಾಜಿದ್ದಿಗೆ ಯುರೋಪ್ ಸಾಕ್ಷಿಯಾಗಲಿದ್ಯಾ ಎನ್ನುವ ಕೌತುಕ ಎಲ್ಲರಲ್ಲಿದೆ.