)
ಎಕ್ಕ ಆಟ ಶುರು! ಬ್ಯಾಂಗಲ್ ಬಂಗಾರಿ ಸಾಂಗ್ ಸೂಪರ್ ಹಿಟ್! ಸಿನಿಮಾ ರಿಲೀಸ್‌ಗೆ ಮೂಹೂರ್ತ ಫಿಕ್ಸ್!
ರತ್ನನ್ ಪರಪಂಚ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಚಿತ್ರದಲ್ಲಿ ಯುವರಾಜ್ಕುಮಾರ್ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನದ ಈ ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ.
ಯುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ದೊಡ್ಮನೆ ಕುಡಿ ಯುವರಾಜ್ಕುಮಾರ್ ಈಗ ಎಕ್ಕ ಮೂಲಕ ಮತ್ತೊಮ್ಮೆ ಮೋಡಿ ಮಾಡೋದಕ್ಕೆ ಬರ್ತಾ ಇದ್ದಾರೆ. ರತ್ನನ್ ಪರಪಂಚ ಖ್ಯಾತಿಯ ರೋಹಿತ್ ಪದಕಿ ಈ ಸಿನಿಮಾಗೆ ಌಕ್ಷನ್ ಕಟ್ ಹೇಳಿದ್ದು ಪಿಆರ್ಕೆ , ಕೆಆರ್ಜಿ ಮತ್ತು ಜಯಣ್ಣ ಕಂಬೈನ್ಸ್ ಸಿನಿಮಾಗೆ ಬಂಡವಾಳ ಹೂಡಿವೆ