ಈ ದಿನ ಜನಿಸಿದವರು ಬಾಲ್ಯದಲ್ಲಿ ಬಡವರಾಗಿದ್ರೂ, ಯೌವ್ವನದಲ್ಲಿ ಐಷಾರಾಮಿ ಜೀವನ ನಡೆಸ್ತಾರೆ
ಸಂಖ್ಯಾ ಶಾಸ್ತ್ರದ ಪ್ರಕಾರ ಯಾರೆಲ್ಲಾ ಈ ನಾಲ್ಕು ದಿನಾಂಕಗಳಂದು ಜನಿಸಿರುತ್ತಾರೋ, ಅವರು ಬಾಲ್ಯದಲ್ಲಿ ಬಡತನ ನೋಡಿದ್ರೂ, ಯೌವ್ವನದಲ್ಲಿ ಐಷಾರಾಮಿ ಜೀವನ ನಡೆಸ್ತಾರೆ.
- FB
- TW
- Linkdin
Follow Us
)
ಸಂಖ್ಯಾಶಾಸ್ತ್ರದ (Numerology) ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಅವನ ಮೂಲ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಮತ್ತು ಪ್ರತಿಯೊಂದು ಮೂಲ ಸಂಖ್ಯೆಯು ಆಳುವ ಗ್ರಹವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.
ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇರುತ್ತವೆ. ಸಂಖ್ಯಾಶಾಸ್ತ್ರದ ಪ್ರಕಾರ, 1 ರಿಂದ 9 ರವರೆಗಿನ ಮೂಲಾಂಕಗಳಿವೆ (Radix) ಮತ್ತು ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ಉತ್ತಮವಾದ ಹಾಗೂ ಕೆಟ್ಟ ಗುಣಗಳಿರುತ್ತವೆ. ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಹೋರಾಟದ ಜೀವನವನ್ನು ಹೊಂದಿರುತ್ತಾರೆ. ಅವರ ಬಾಲ್ಯವು ಬಡತನ ಮತ್ತು ಕಷ್ಟಗಳಲ್ಲಿ ಕಳೆಯುತ್ತದೆ ಆದರೆ ಅವರ ಯೌವನದಲ್ಲಿ ಅವರು ಜೀವನದ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ.
ಈ 4 ದಿನಾಂಕಗಳಲ್ಲಿ ಜನಿಸಿದ ಜನರ ಜೀವನ ಹೀಗಿರಲಿದೆ
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದ ಜನರ ಮೂಲಂಕ 3 ಆಗಿರುತ್ತೆ. ಈ ರಾಡಿಕ್ಸ್ ಸಂಖ್ಯೆಯ ಆಡಳಿತ ಗ್ರಹ ಗುರು. ಇದನ್ನು ಶಿಕ್ಷಣ (education), ಜ್ಞಾನ, ಮಕ್ಕಳು ಮತ್ತು ಧಾರ್ಮಿಕ ಚಟುವಟಿಕೆಗಳ ಅಂಶವೆಂದು ಪರಿಗಣಿಸಲಾಗುತ್ತೆ. ಮೂಲಾಂಕ 3 ಹೊಂದಿರುವ ಜನರು ಗುರುವಿನಿಂದ ಪ್ರಭಾವಿತರಾಗುತ್ತಾರೆ.
ಬಾಲ್ಯವು ಕಷ್ಟಗಳಲ್ಲಿ ಕಳೆಯುತ್ತದೆ
ಮೂಲಾಂಕ 3ರ ಜನರ ಬಾಲ್ಯವು ತುಂಬಾನೆ ಕಷ್ಟಕರವಾಗಿರುತ್ತೆ, ಇವರದ್ದು ಹೋರಾಟದ ಬದುಕಾಗಿರುತ್ತೆ. ಈ ಮೂಲಾಂಕ ಹೊಂದಿರುವ ಜನರು ತಮ್ಮ ಬಾಲ್ಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅನೇಕ ಬಾರಿ ಅವರು ತುಂಬಾ ಕೆಟ್ಟ ಆರ್ಥಿಕ ಸ್ಥಿತಿಯಿಂದಾಗಿ (financial status) ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಯೌವನದಲ್ಲಿ ಐಷಾರಾಮಿ ಜೀವನ
ಬಾಲ್ಯದಲ್ಲಿ ಬಡತನವನ್ನೇ ನೋಡಿದ ಈ ಜನರು ತಮ್ಮ ಯೌವನದಲ್ಲಿ ಸುಖ ಮತ್ತು ಐಷಾರಾಮ ಜೀವನವನ್ನು (luxury life) ಅನುಭವಿಸುತ್ತಾರೆ. ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಈ ಜನರು ಬಹಳಷ್ಟು ಹಣ ಗಳಿಸುತ್ತಾರೆ ಮತ್ತು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸಂತೋಷವಾಗಿಡುತ್ತಾರೆ.
ಯಾರ ಸಹಾಯವನ್ನೂ ತೆಗೆದುಕೊಳ್ಳುವುದಿಲ್ಲ
ಮೂಲಾಂಕ 3 ಹೊಂದಿರುವ ಜನರು ಪ್ರತಿಯೊಂದು ಕಷ್ಟವನ್ನೂ ಧೈರ್ಯದಿಂದ ಎದುರಿಸುತ್ತಾರೆ ಮತ್ತು ಯಾರ ಸಹಾನುಭೂತಿ, ಸಹಾಯವನ್ನು ಪಡೆಯಲು ಇವರು ಇಷ್ಟಪಡುವುದಿಲ್ಲ. ಈ ಜನರು ತಮ್ಮ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನೂ ಇಷ್ಟಪಡುವುದಿಲ್ಲ ಮತ್ತು ತಮ್ಮ ಇಷ್ಟದಂತೆ ಜೀವನ ಸಾಗಿಸುತ್ತಾರೆ.
ತಮ್ಮ ಒಡಹುಟ್ಟಿದವರನ್ನು ತುಂಬಾ ಪ್ರೀತಿಸುತ್ತಾರೆ
ಮೂಲಾಂಕ 3ರ ಜನರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ, ವಿಶೇಷವಾಗಿ ಅವರ ಒಡಹುಟ್ಟಿದವರನ್ನು ಇಷ್ಟಪಡ್ತಾರೆ. ಅವರ ಒಡಹುಟ್ಟಿದವರೊಂದಿಗಿನ (siblings) ಅವರ ಸಂಬಂಧವು ತುಂಬಾ ಸ್ಟ್ರಾಂಗ್ ಆಗಿರುತ್ತೆ ಮತ್ತು ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ತಮ್ಮ ಒಡಹುಟ್ಟಿದವರ ಜೊತೆಗೆ ನಿಲ್ಲುತ್ತಾರೆ.