MalayalamEnglishKannadaTeluguTamilBanglaHindiMarathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Entertainment
  • Cine World
  • ಆಲಿಯಾನೂ ಅಲ್ಲ, ದೀಪಿಕಾನೂ ಅಲ್ಲ…. ಈ ಬ್ಯೂಟಿ ಬಳಿ ಇದೆ ತನ್ನದೇ ಐಲ್ಯಾಂಡ್

ಆಲಿಯಾನೂ ಅಲ್ಲ, ದೀಪಿಕಾನೂ ಅಲ್ಲ…. ಈ ಬ್ಯೂಟಿ ಬಳಿ ಇದೆ ತನ್ನದೇ ಐಲ್ಯಾಂಡ್

ಬಾಲಿವುಡ್ ನ ಈ ಬ್ಯೂಟಿಗೆ ತನ್ನದೇ ಆದ ಐ ಲ್ಯಾಂಡ್ ಇದೆ. ಆ ನಟಿ ದೀಪಿಕಾ ಪಡುಕೋಣೆಯೂ ಅಲ್ಲ, ಆಲಿಯಾ ಭಟ್ ಕೂಡ ಅಲ್ಲ. ಹಾಗಿದ್ರೆ ಮತ್ಯಾರು ನೋಡೋಣ. 
 

Pavna Das | Updated : May 13 2025, 09:52 AM
2 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
Asianet Image

ಈ ನಟಿ ಭಾರತದ ಪ್ರಜೆ ಅಲ್ಲ. ಆದರೆ 2009 ರಲ್ಲಿ ಬಾಲಿವುಡ್ ಗೆ (Bollywood) ಎಂಟ್ರಿ ಕೊಟ್ಟಿರುವ ಈ ಬ್ಯೂಟಿ, ಬಾಲಿವುಡ್ ನಲ್ಲಿ ನೆಲೆ ಕಾಣುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಒಂದು ಹಾಡಿನ ಮೂಲಕ ಕನ್ನಡಿಗರ ಮನಸನ್ನೂ ಕೂಡ ಸೂರೆಗೊಂಡಿದ್ದಾರೆ. 
 

27
Asianet Image

ಈ ನಟಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ,  ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ವರುಣ್ ಧವನ್, ಇಮ್ರಾನ್ ಹಶ್ಮಿ ಮತ್ತು ಅಷ್ಟೇ ಯಾಕೆ ನಮ್ಮ ಕಿಚ್ಚ ಸುದೀಪ್ ಸೇರಿ ಇನ್ನೂ ಅನೇಕ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನೋದು ನಿಮಗೆ ಗೊತ್ತಾಗಿರಬೇಕು ಅಲ್ವಾ?  ಆ ನಟಿ ಬೇರೆ ಯಾರೂ ಅಲ್ಲ, ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez).
 

Related Articles

ಮೂವೀಲಿ ಚಾನ್ಸ್ ಸಿಗದಿದ್ದಾಗ ಕೈ ಹಿಡಿಯುತ್ತೆ ಅಂತ ನಟಿಯರೆಲ್ಲಾ ಯುಟ್ಯೂಬ್ ಚಾನೆಲ್ ಮಾಡೋದಾ?
ಮೂವೀಲಿ ಚಾನ್ಸ್ ಸಿಗದಿದ್ದಾಗ ಕೈ ಹಿಡಿಯುತ್ತೆ ಅಂತ ನಟಿಯರೆಲ್ಲಾ ಯುಟ್ಯೂಬ್ ಚಾನೆಲ್ ಮಾಡೋದಾ?
ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!
ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!
37
Asianet Image

ಶ್ರೀಲಂಕಾದಿಂದ (Srilankan Beauty) ಬಂದು ಭಾರತದಲ್ಲಿ ನೆಲೆಯೂರಿ, ಹಿಟ್ ಮೇಲೆ ಹಿಟ್ ಸಿನಿಮಾ ನೀಡಿದ ನಟಿ  ಜಾಕ್ವೆಲಿನ್ ಫರ್ನಾಂಡಿಸ್ ಕ್ರಮೇಣ ಫ್ಲಾಪ್ ಚಿತ್ರಗಳನ್ನು ನೀಡಲು ಪ್ರಾರಂಭಿಸಿದರು, ಇದರಿಂದಾ ಅವರ ಕರಿಯರ್ ಹಾಳಾಗುತ್ತಾ ಬಂದಿದೆ. ಜಾಕ್ವೆಲಿನ್ ಅವರ ಸಿನಿಮಾಗಳು ಥಿಯೇಟರ್ ಗಳಲ್ಲಿ ಓಡದೇ ಇದ್ದರೂ ಕೂಡ, ಇನ್ನೂ ಭಾರತದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು.
 

47
Asianet Image

ಇದಷ್ಟೇ ಅಲ್ಲ, ಜಾಕ್ವೆಲಿನ್ ಬಾಲಿವುಡ್ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಕೂಡ ಹೌದು. ಈಕೆ ಒಂದೊಂದು ಸಿನಿಮಾಗಳ ಫೀಸ್ ಹಲವಾರು ಕೋಟಿಗಳಲ್ಲಿ ಇರುತ್ತೆ ಎನ್ನುತ್ತೆ ಬಾಲಿವುಡ್. 
 

57
Asianet Image

ಅದೆಲ್ಲಾ ಬಿಡಿ, ಜಾಕ್ವೆಲಿನ್ ಫೆರ್ನಾಂಡಿಸ್ ಬಗ್ಗೆ ನಿಮಗೊಂದು ಮಾಹಿತಿ ಗೊತ್ತಾ? ಈಕೆ ತಮ್ಮ ತವರು ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಒಂದು ದ್ವೀಪವನ್ನು (own Island) ಖರೀದಿಸಿದ್ದಾರೆ. ಹೌದು, ನಟಿ ಶ್ರೀಲಂಕಾದಲ್ಲಿ ತಮ್ಮದೇ ಆಗಿರುವ ಒಂದು ದ್ವೀಪವನ್ನು ಹೊಂದಿದ್ದಾರೆ ಅಂದ್ರೆ ನೀವು ನಂಬಲೇಬೇಕು. 

67
Asianet Image

ಜಾಕ್ವೆಲಿನ್ 2012 ರಲ್ಲಿ ಆ ಭೂಮಿಯನ್ನು ಖರೀದಿಸಿದರು. ವರದಿಗಳ ಪ್ರಕಾರ ಜಾಕ್ವೆಲಿನ್ ಅಲ್ಲಿ ಒಂದು ಐಷಾರಾಮಿ ವಿಲ್ಲಾ ನಿರ್ಮಿಸಲು ಬಯಸಿದ್ದರು.  ಈ ಐಲ್ಯಾಂಡ್ ಖರೀದಿಗಾಗಿ ನಟಿ ಸುಮಾರು 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ.
 

77
Asianet Image

ಇನ್ನು ಜಾಕ್ವೆಲಿನ್ ಪೆರ್ನಾಂಡೀಸ್ ಅವರ ನೆಟ್ ವರ್ತ್(Networth) ಬಗ್ಗೆ ಹೇಳೊದಾದರೆ, ಅದು ಬರೋಬ್ಬರಿ 115 ಕೋಟಿ ರೂ. ಎಂದು ಹೇಳಲಾಗುತ್ತದೆ. ನಟಿ ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು  ಬಾಲಿವುಡ್ ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ನಟಿಯ ಕೈಯಲ್ಲಿ ಹೌಸ್ ಫುಲ್ 5 ಹಾಗೂ ವೆಲಕಂ ಟು ಜಂಗಲ್ ಎನ್ನುವ ಎರಡು ಸಿನಿಮಾಗಳಿವೆ. 
 

Pavna Das
About the Author
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More...
ಬಾಲಿವುಡ್
ನಟಿ
 
Recommended Stories
Top Stories