ಈ ಕಂಪನಿಯ ಒಂದು ಮಲ್ಟಿಬ್ಯಾಗರ್ ಸ್ಟಾಕ್: ಕೇವಲ 4 ತಿಂಗಳಲ್ಲಿ 254% ಲಾಭ!
ಮಲ್ಟಿಬ್ಯಾಗರ್ ಸ್ಟಾಕ್: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಈಗ ಎಲ್ಲರೂ ಲಾಭ ಪಡೆಯಲು ಬಯಸುತ್ತಾರೆ. ಇಲ್ಲೊಂದು ಸ್ಟಾಕ್ ಕೇವಲ 4 ತಿಂಗಳಲ್ಲಿ 254 ಪರ್ಸೆಂಟ್ ಲಾಭ ತಂದುಕೊಟ್ಟಿದೆ. ಇಲ್ಲಿದೆ ವಿವರ..
- FB
- TW
- Linkdin
Follow Us
)
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಈಗ ಎಲ್ಲರೂ ಲಾಭ ಪಡೆಯಲು ಬಯಸುತ್ತಾರೆ. ಸರಿಯಾದ ರೀತಿಯಲ್ಲಿ ಮತ್ತು ನಿಗದಿತ ಮೊತ್ತದಲ್ಲಿ ಹೂಡಿಕೆ ಮಾಡಿದರೆ ಖಂಡಿತವಾಗಿಯೂ ಲಾಭವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಷೇರು ಮಾರುಕಟ್ಟೆಯಲ್ಲಿ ಹಲವು ಸ್ಟಾಕ್‌ಗಳಿವೆ. ಈ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿ ಲಕ್ಷಾಧಿಪತಿಗಳಾಗಿದ್ದಾರೆ.
ಇವುಗಳನ್ನು ಮಲ್ಟಿಬ್ಯಾಗರ್ ಸ್ಟಾಕ್ ಎಂದು ಕರೆಯಲಾಗುತ್ತದೆ. ನಿಗದಿತ ಅವಧಿಗೆ ಈ ರೀತಿಯ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿದರೆ, ಭಾರಿ ಲಾಭ ಗಳಿಸುವ ಸಾಧ್ಯತೆ ಇದೆ.
ಇಂತಹದ್ದೇ ಒಂದು ಸ್ಟಾಕ್ ಬಗ್ಗೆ ಇಂದು ಮಾತನಾಡೋಣ. ಈ ಸ್ಟಾಕ್ ಈ ವಾರ 6% ಏರಿಕೆಯಾಗಿ 1624.95 ರೂ. ತಲುಪಿದೆ. ಜೂನ್‌ನಿಂದಲೂ ಇದರ ಬೆಲೆ ಏರುತ್ತಿದೆ. ಯಾವ ಸ್ಟಾಕ್ ಇದು?
ಸ್ಟಾಕ್‌ನ ಹೆಸರು ಸಿಕಾ ಇಂಟರ್‌ಪ್ಲಾಂಟ್ ಸಿಸ್ಟಮ್ಸ್ ಲಿಮಿಟೆಡ್ (sika interplant systems limited). 5 ವರ್ಷಗಳ ಹಿಂದೆ ಈ ಡಿಫೆನ್ಸ್ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ, ಈಗ ಅದು 41 ಪಟ್ಟು ಹೆಚ್ಚಾಗುತ್ತಿತ್ತು.
ಇದು ಸ್ಮಾಲ್‌ಕ್ಯಾಪ್ ಡಿಫೆನ್ಸ್ ಸ್ಟಾಕ್ ಆಗಿದೆ. ಕಳೆದ 5 ವರ್ಷಗಳಲ್ಲಿ 4135% ಲಾಭ ತಂದುಕೊಟ್ಟಿದೆ. ಶುಕ್ರವಾರ, ವಾರದ ಕೊನೆಯ ವಹಿವಾಟಿನ ದಿನ ಸ್ಟಾಕ್ ಬೆಲೆ ಸ್ವಲ್ಪ ಕಡಿಮೆಯಾಗಿದೆ.
ಕಳೆದ 4 ತಿಂಗಳಲ್ಲಿ ಈ ಸ್ಟಾಕ್‌ನ ಬೆಲೆ 254% ಏರಿಕೆ:
ಜೂನ್‌ನಲ್ಲಿ, ಸ್ಟಾಕ್ 85% ಏರಿಕೆಯಾಗಿ, ಚಿಲ್ಲರೆ ಹೂಡಿಕೆದಾರರಲ್ಲಿ ಜನಪ್ರಿಯವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ 1065% ಮತ್ತು 10 ವರ್ಷಗಳಲ್ಲಿ ಸುಮಾರು 7000% ಲಾಭ ಸಿಕ್ಕಿದೆ.
2025ರ ಹಣಕಾಸು ವರ್ಷದ ಅಂಕಿಅಂಶಗಳು : ಈ ಕಂಪನಿಯಲ್ಲಿ ಚಿಲ್ಲರೆ ಹೂಡಿಕೆದಾರರ ಪಾಲು 25.2%. ಅದೇ ಸಮಯದಲ್ಲಿ ಪ್ರವರ್ತಕರ (Promoters) ಪಾಲು 71.7% ಇದೆ.
ವಿದೇಶಿ ಕಂಪನಿಯೊಂದಿಗೆ ಒಪ್ಪಂದ: ಜೂನ್ 3 ರಂದು, ಫ್ರಾನ್ಸ್ ಮತ್ತು ಬ್ರಿಟನ್‌ನ ಗುಡ್ರಿಚ್ ಆಕ್ಯೂಯೇಷನ್ ಸಿಸ್ಟಮ್ಸ್ ಜೊತೆಗೆ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದೆ.
ಯೋಜನಾಬದ್ಧವಾಗಿ ಹೂಡಿಕೆ ಮಾಡಿದವರಿಗೆ ಈ ಸ್ಟಾರ್ ಭಾರಿ ಲಾಭ ತಂದುಕೊಟ್ಟಿದೆ.
ಹಕ್ಕುತ್ಯಾಗ: ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಕಾರಿ. ಹೂಡಿಕೆ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ.